ಬೆಂಗಳೂರು: ಜೂನ್ ನಲ್ಲಿ ಕೈ ಕೊಟ್ಟಿದ್ದ ಮುಂಗಾರು ಮಳೆ ಜುಲೈನಲ್ಲಿ ಜನರ ಕೈ ಹಿಡಿಯುವ ಸೂಚನೆ ನೀಡಿದ್ದು ರಾಜ್ಯದಲ್ಲಿ ಸೊರಗಿದ್ದ ಜಲಾಶಯಗಳಿಗೆ ಜೀವ ಕಳೆ ಬಂದಿದೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ.
ಜೂನ್ ವೇಳೆಗೆ ಬಹುತೇಕ ತುಂಬಬೇಕಿದ್ದ ರಾಜ್ಯದ ಜಲಾಶಯಗಳು ತಳ ತಲುಪಿದ್ದು, ಕುಡಿಯುವ ನೀರಿಗೂ ಪರದಾಟ ನಡೆಸಬೇಕಾದ ಭೀತಿ ಎದುರಾಗಿತ್ತು. ಆದರೆ ಜುಲೈ ಮೊದಲ ವಾರದಲ್ಲಿ ಆರಂಭವಾದ ಮಳೆಯಿಂದ ಜಲಾಶಯಗಳ ನೀರಿನ ಮಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.
ಜೂನ್ ಕೊನೆಯ ವಾರದಲ್ಲಿ ಜಲಾಶಯಗಳ ಒಟ್ಟು ಟಿಎಂಸಿ ಮಟ್ಟ 200ಕ್ಕಿಂತ ಕೆಳಕ್ಕೆ ಇಳಿದಿತ್ತು. ಈಗ ಚೇತರಿಕೆ ಕಂಡಿದ್ದು, ಜುಲೈ 7ರ ಮಂಗಳವಾರ ಬೆಳಿಗ್ಗೆ ಹೊತ್ತಿಗೆ ಪ್ರಮುಖ 14 ಜಲಾಶಯಗಳಲ್ಲಿ ನೀರಿನ ಮಟ್ಟ 224.29 ಟಿಎಂಸಿಗೆ ಏರಿಕೆ ಕಂಡಿದೆ. ಮೂರು ದಿನದಲ್ಲೇ 25 ಟಿಎಂಸಿಯಷ್ಟು ನೀರು ಬಂದಿದೆ.
ರಾಜ್ಯದಲ್ಲಿ ಸದ್ಯ ಜಲಾಶಯಗಳಲ್ಲಿನ ನೀರಿನ ಪ್ರಮಾಣ ಶೇ. 25ರಷ್ಟು ಏರಿಕೆ ಕಂಡಿದೆ. ಜಲಾಶಯಗಳಲ್ಲಿ 895.65 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ. ಕಳೆದ ವರ್ಷ ಇದೇ ದಿನ ಜಲಾಶಯಗಳಲ್ಲಿ 603.98 ಟಿಎಂಸಿ ನೀರು ಸಂಗ್ರಹವಿತ್ತು.
ಕಳೆದ ವಾರ 20 ಸಾವಿರ ಕ್ಯೂಸೆಕ್ಸ್ ಇದ್ದ ಜಲಾಶಯಗಳ ಒಳಹರಿವು ಈಗ 1,35,391 ಕ್ಯುಸೆಕ್ ಗೆ ಏರಿಕೆಯಾಗಿದೆ. ಕಾವೇರಿ ಕಣಿವೆಯ ಪ್ರಮುಖ 4 ಜಲಾಶಯಗಳಲ್ಲಿ ಒಳ ಹರಿವು 20,206 ಕ್ಯುಸೆಕ್ ಆಗಿದ್ದರೆ, ಮಲೆನಾಡಿನ 3 ಜಲಾಶಯಗಳಲ್ಲಿ 55,899 ಕ್ಯುಸೆಕ್, ಕೃಷ್ಣ ಕಣಿವೆಯ 6 ಜಲಾಶಯಗಳಲ್ಲಿ 85,286 ಕ್ಯುಸೆಕ್ ನೀರು ಹರಿದು ಬರುತ್ತಿದೆ.
ಲಿಂಗನಮಕ್ಕಿಗೆ ಹೆಚ್ಚು ನೀರು
ಶಿವಮೊಗ್ಗದ ಲಿಂಗನಮಕ್ಕಿ ಜಲಾಶಯದಲ್ಲಿ ಸದ್ಯ 22.11 ಟಿಸಿಎಂ (ಶೇ. 15) ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 81.98 ಅಡಿ ನೀರು ಸಂಗ್ರಹವಿತ್ತು. ಜಲಾಶಯದ ಗರಿಷ್ಠ ಮಟ್ಟ 151.75 ಟಿಎಂಸಿ. ಸದ್ಯ ಜಲಾಶಯಕ್ಕೆ ನೀರಿನ ಒಳ ಹರಿವು 29,043 ಕ್ಯುಸೆಕ್ ಇದೆ. 434 ಕ್ಯುಸೆಕ್ ನೀರು ಹೊರ ಹರಿಸಲಾಗುತ್ತಿದೆ. ಜಲಾಶಯದಲ್ಲಿ 1754.40 ಅಡಿ ನೀರು ಸಂಗ್ರಹವಿದೆ. ಜಲಾಶಯದಲ್ಲಿ 1819.12 ಅಡಿ ನೀರು ಸಂಗ್ರಹಿಸುವ ಅವಕಾಶವಿದ್ದು, ಕಳೆದ ವರ್ಷ ಇದೇ ದಿನ 1793.65 ಅಡಿ ನೀರಿತ್ತು.
ಉತ್ತರ ಕನ್ನಡ ಜಿಲ್ಲೆಯ ಸೂಪಾ ಜಲಾಶಯದಲ್ಲಿ ಸದ್ಯ 32.38 ಟಿಸಿಎಂ( ಶೇ 22) ನೀರು ಲಭ್ಯವಿದೆ. ಕಳೆದ ವರ್ಷ ಇದೆE ದಿನ ಜಲಾಶಯದಲ್ಲಿ 68.15 ಟಿಎಂಸಿ ನೀರು ಸಂಗ್ರಹವಿತ್ತು. ಜಲಾಶಯದ ಗರಿಷ್ಠ ಮಟ್ಟ 145.33 ಟಿಎಂಸಿ. ಈಗ ಜಲಾಶಯದ ನೀರಿನ ಒಳ ಹರಿವು 20691 ಕ್ಯೂಸೆಕ್ . 196 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ 1728.43 ಅಡಿ ನೀರು ಸಂಗ್ರಹವಿದೆ. ಜಲಾಶಯದಲ್ಲಿ 1728.43 ಅಡಿ ನೀರು ಸಂಗ್ರಹಿಸುವ ಅವಕಾಶವಿದ್ದು, ಕಳೆದ 2 2 2 1793.65 ಅಡಿ ನೀರು ಇತ್ತು.
ಹಾಸನ ಜಿಲ್ಲೆ ಹೇಮಾವತಿ ಜಲಾಶಯದಲ್ಲಿ ಸದ್ಯ 17.38 ಟಿಸಿಎಂ( ಶೇ 47) ನೀರು ಲಭ್ಯವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 34.99 ಟಿಎಂಸಿ ನೀರು ಸಂಗ್ರಹವಿತ್ತು. ಜಲಾಶಯದ ಗರಿಷ್ಠ ಮಟ್ಟ 37.10 ಟಿಎಂಸಿ. ಈಗ ಜಲಾಶಯದ ನೀರಿನ ಒಳ ಹರಿವು 8901 ಕ್ಯುಸೆಕ್. 300 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ.ಜಲಾಶಯದಲ್ಲಿ 2895.91 ಅಡಿ ನೀರು ಸಂಗ್ರಹವಿದೆ. ಜಲಾಶಯದಲ್ಲಿ 2922 ಅಡಿ ನೀರು ಸಂಗ್ರಹಿಸುವ ಅವಕಾಶವಿದ್ದು, ಕಳೆದ ವರ್ಷ ಇದೇ ದಿನ 2919.81 ಅಡಿ ನೀರು ಇತ್ತು.
ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲಿ ಸದ್ಯ 7.08 ಟಿಸಿಎಂ (ಶೇ.36) ನೀರು ಲಭ್ಯವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 17.61 ಟಿಎಂಸಿ ನೀರು ಸಂಗ್ರಹವಿತ್ತು. ಜಲಾಶಯದ ಗರಿಷ್ಠ ಮಟ್ಟ 19.52 ಟಿಎಂಸಿ. ಸದ್ಯ ಜಲಾಶಯಕ್ಕೆ ನೀರಿನ ಒಳ ಹರಿವು 4394 ಕ್ಯುಸೆಕ್ ಇದೆ. ಹೊರ ಹರಿವು 500 ಕ್ಯುಸೆಕ್ ಇದೆ. ಜಲಾಶಯದಲ್ಲಿ 2259.32 ಅಡಿ ನೀರು ಸಂಗ್ರಹವಿದೆ. ಜಲಾಶಯದಲ್ಲಿ 2284 ಅಡಿ ನೀರು ಸಂಗ್ರಹಿಸುವ ಅವಕಾಶವಿದ್ದು, ಕಳೆದ ವರ್ಷ ಇದೇ ದಿನ 2280.79 ಅಡಿ ನೀರಿತ್ತು.
ಭದ್ರಾದಲ್ಲೂ ಏರಿಕೆ
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಜಲಾಶಯದಲ್ಲಿ ಸದ್ಯ 27.23 ಟಿಸಿಎಂ( ಶೇ 36) ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 53.69 ಟಿಎಂಸಿ ನೀರು ಸಂಗ್ರಹವಿತ್ತು. ಜಲಾಶಯದ ಗರಿಷ್ಠ ಮಟ್ಟ 71.54 ಟಿಎಂಸಿ. ಸದ್ಯ ಜಲಾಶಯಕ್ಕೆ ನೀರಿನ ಒಳ ಹರಿವು 8117 ಕ್ಯುಸೆಕ್ ಇದೆ. 212 ಕ್ಯುಸೆಕ್ ನೀರು ಹೊರ ಹರಿಸಲಾಗುತ್ತಿದೆ. ಜಲಾಶಯದಲ್ಲಿ 2112.50 ಅಡಿ ನೀರು ಸಂಗ್ರಹವಿದೆ. ಜಲಾಶಯದಲ್ಲಿ 2158 ಅಡಿ ನೀರು ಸಂಗ್ರಹಿಸುವ ಅವಕಾಶವಿದ್ದು, ಕಳೆದ ವರ್ಷ ಇದೇ ದಿನ 2142.75 ಅಡಿ ನೀರಿತ್ತು.
ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದಲ್ಲಿ ಸದ್ಯ 9.72 ಟಿಸಿಎಂ( ಶೇ 9) ನೀರು ಮಾತ್ರ ಲಭ್ಯವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 76.71 ಟಿಎಂಸಿ ನೀರು ಸಂಗ್ರಹವಿತ್ತು. ಜಲಾಶಯದ ಗರಿಷ್ಠ ಮಟ್ಟ 105.79 ಟಿಎಂಸಿ. ಈಗ ಜಲಾಶಯಕ್ಕೆ ನೀರಿನ ಒಳ ಹರಿವು 4188 ಕ್ಯುಸೆಕ್ ಇದೆ. 212 ಕ್ಯುಸೆಕ್ ನೀರು ಹೊರ ಹರಿಸಲಾಗುತ್ತಿದೆ. ಜಲಾಶಯದಲ್ಲಿ 1588.37 ಅಡಿ ನೀರು ಸಂಗ್ರಹವಿದೆ. ಜಲಾಶಯದಲ್ಲಿ 1633 ಅಡಿ ನೀರು ಸಂಗ್ರಹಿಸುವ ಅವಕಾಶವಿದ್ದು, ಕಳೆದ ವರ್ಷ 2 2 1625.07 ಅಡಿ ನೀರಿತ್ತು.
ಘಟಪ್ರಭಾ, ಮಲಪ್ರಭಾದಲ್ಲಿ ಜಲ ಪ್ರಭೆ
ಬೆಳಗಾವಿ ಜಿಲ್ಲೆಯ ಘಟಪ್ರಭಾ ಜಲಾಶಯದಲ್ಲಿ ಈಗ 10.90 ಟಿಸಿಎಂ( ಶೇ 21) ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ 40.30 ಟಿಎಂಸಿ ನೀರು ಲಭ್ಯವಿತ್ತು. ಜಲಾಶಯದ ಗರಿಷ್ಠ ಮಟ್ಟ 51 ಟಿಎಂಸಿ. ಸದ್ಯ ಜಲಾಶಯಕ್ಕೆ ನೀರಿನ ಒಳ ಹರಿವು 21730 ಕ್ಯುಸೆಕ್ ಇದೆ. 107 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ 2103.65 ಅಡಿ ನೀರು ಸಂಗ್ರಹವಿದೆ. ಜಲಾಶಯದಲ್ಲಿ 2175 ಅಡಿ ನೀರು ಸಂಗ್ರಹಿಸುವ ಅವಕಾಶವಿದ್ದು, ಕಳೆದ ವರ್ಷ ಇದೇ ದಿನ 2161 ಅಡಿ ನೀರಿತ್ತು.
ಬೆಳಗಾವಿ ಜಿಲ್ಲೆಯ ಮಲಪ್ರಭಾ ಜಲಾಶಯದಲ್ಲಿ ಸದ್ಯ 9.29 ಟಿಸಿಎಂ( ಶೇ 24) ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 22.47 ಟಿಎಂಸಿ ನೀರು ಸಂಗ್ರಹವಿತ್ತು. ಜಲಾಶಯದ ಗರಿಷ್ಠ ಮಟ್ಟ 37.73 ಟಿಎಂಸಿ. ಸದ್ಯ ಜಲಾಶಯಕ್ಕೆ ನೀರಿನ ಒಳ ಹರಿವು 4082 ಕ್ಯುಸೆಕ್. 194 ಕ್ಯುಸೆಕ್ ನೀರು ಹೊರ ಹರಿಸಲಾಗುತ್ತಿದೆ. ಜಲಾಶಯದಲ್ಲಿ 2048.70 ಅಡಿ ನೀರು ಸಂಗ್ರಹವಿದೆ. ಜಲಾಶಯದಲ್ಲಿ 2079.50 ಅಡಿ ನೀರು ಸಂಗ್ರಹಿಸುವ ಅವಕಾಶವಿದ್ದು, ಕಳೆದ ವರ್ಷ ಇದೇ ದಿನ 2066.65 ಅಡಿ ನೀರಿತ್ತು.
ಆಲಮಟ್ಟಿಯಲ್ಲಿ ಅಲ್ಪ ಹೆಚ್ಚಳ
ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಲ್ಲಿ ಸದ್ಯ 22.46 ಟಿಸಿಎಂ( ಶೇ 18) ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 88.38 ಟಿಎಂಸಿ ನೀರು ಸಂಗ್ರಹವಿತ್ತು. ಜಲಾಶಯದ ಗರಿಷ್ಠ ಮಟ್ಟ 123.08 ಟಿಎಂಸಿ. ಸದ್ಯ ಜಲಾಶಯಕ್ಕೆ ನೀರಿನ ಒಳ ಹರಿವು 21625 ಕ್ಯುಸೆಕ್. 100 ಕ್ಯುಸೆಕ್ ನೀರು ಹೊರ ಹರಿಸಲಾಗುತ್ತಿದೆ. ಜಲಾಶಯದಲ್ಲಿ 1667.57 ಅಡಿ ನೀರು ಸಂಗ್ರಹವಿದೆ. ಜಲಾಶಯದಲ್ಲಿ 1704.81 ಅಡಿ ನೀರು ಸಂಗ್ರಹಿಸುವ ಅವಕಾಶವಿದ್ದು, ಕಳೆದ ವರ್ಷ ಇದೇ ದಿನ 1697.19 ಅಡಿ ನೀರಿತ್ತು.
ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಶಯದಲ್ಲಿ ಈಗ 19.89 ಟಿಸಿಎಂ( ಶೇ 60) ನೀರು ಲಭ್ಯವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 27.05 ಟಿಎಂಸಿ ನೀರು ಸಂಗ್ರಹವಿತ್ತು. ಜಲಾಶಯದ ಗರಿಷ್ಠ ಮಟ್ಟ 33.31 ಟಿಎಂಸಿ. ಸದ್ಯ ಜಲಾಶಯಕ್ಕೆ ನೀರಿನ ಒಳ ಹರಿವು ಶೂನ್ಯ. 761 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ 1603.72 ಅಡಿ ನೀರು ಸಂಗ್ರಹವಿದೆ. ಜಲಾಶಯದಲ್ಲಿ 1615 ಅಡಿ ನೀರು ಸಂಗ್ರಹಿಸುವ ಅವಕಾಶವಿದ್ದು, ಕಳೆದ ವರ್ಷ ಇದೇ ದಿನ 1610.22 ໑໖ 2.
ಚಿತ್ರದುರ್ಗ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಸದ್ಯ 23.80 ಟಿಸಿಎಂ( ಶೇ 78) ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 24.61 ಟಿಎಂಸಿ ನೀರು ಸಂಗ್ರಹವಿತ್ತು. ಜಲಾಶಯದ ಗರಿಷ್ಠ ಮಟ್ಟ 39.42 ಟಿಎಂಸಿ. ಸದ್ಯ ಜಲಾಶಯಕ್ಕೆ ನೀರಿನ ಒಳ ಹರಿವು, ಹೊರ ಹರಿವು ಎರಡೂ ಇಲ್ಲ. ಜಲಾಶಯದಲ್ಲಿ 2132.10 ಅಡಿ ನೀರು ಸಂಗ್ರಹವಿದೆ. ಜಲಾಶಯದಲ್ಲಿ 2140ಅಡಿ ನೀರು ಸಂಗ್ರಹಿಸುವ ಅವಕಾಶವಿದ್ದು, ಕಳೆದ ವರ್ಷ ಇದೇ ದಿನ 2135.30 ಅಡಿ ನೀರಿತ್ತು.



