ನವದೆಹಲಿ: ಧರ್ಮೆಂದ್ರ ಪ್ರಧಾನ್ ರಾಜೀನಾಮೆಯಿಂದ ತೆರವಾದ ಶಿಕ್ಷಣ ಖಾತೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಗೆ ಹೆಚ್ಚುವರಿ ಖಾತೆಯಾಗಿ ನೀಡಲಾಗಿದೆ.
ಧರ್ಮೆಂದ್ರ ಪ್ರಧಾನ್ ಸಲ್ಲಿಸಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ಅಂಗೀಕರಿಸಿದ್ದು, ಆಹಾರ ಮತ್ತು ಗ್ರಾಹಕ ಖಾತೆ ವಹಿಸಿಕೊಂಡಿರುವ ಕರ್ನಾಟಕದ ಪ್ರಹ್ಲಾದ್ ಜೋಷಿ ಅವರಿಗೆ ಹೆಚ್ಚುವರಿಯಾಗಿ ಶಿಕ್ಷಣ ಖಾತೆ ಜವಾಬ್ದಾರಿ ನೀಡಲಾಗಿದೆ.



