Friday, July 31, 2026
Google search engine
Homeಮನರಂಜನೆಬೆಂಗಳೂರಿನಲ್ಲಿ ಭಾನುವಾರ ಜೀಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್ ಶೋ ಆಡಿಷನ್

ಬೆಂಗಳೂರಿನಲ್ಲಿ ಭಾನುವಾರ ಜೀಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್ ಶೋ ಆಡಿಷನ್

ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀಹೆಚ್ಚು ಜನಮನ್ನಣೆ ಗಳಿಸಿದ ಡ್ಯಾನ್ಸಿಂಗ್ ರಿಯಾಲಿಟಿ ಶೋ ಅಂದ್ರೆ ಅದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ . ಮಕ್ಕಳಿಂದ, ಸೆಲೆಬ್ರಿಟಿ ಗಳ ವರೆಗೆ ಎಲ್ಲರೂ ಈ ಶೋನಲ್ಲಿ ಭಾಗವಹಿಸಿ ಜನರನ್ನು ಮನರಂಜಿಸಿದ್ದಾರೆ.

ಈಗ ಕರ್ನಾಟಕದ ಅಮ್ಮಂದಿರ ಸರಣಿ. ಕನ್ನಡಿಗರನ್ನು ಕುಣಿಸಿ, ಮನರಂಜಿಸಲು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್ ಶೋ ಅತೀ ಶೀಘ್ರದಲ್ಲಿ ಶುರುವಾಗಲಿದ್ದು ಇದರ ಆಡಿಷನ್ ಇದೇ ತಿಂಗಳ 2 ರಂದು ನಡೆಯಲಿದೆ.

ಮನೆ, ಆಫೀಸ್, ಗಂಡ, ಮಕ್ಕಳು, ಅತ್ತೆ, ಮಾವ ಹೀಗೆ ಸದಾ ಪರರಿಗೋಸ್ಕರ ದುಡಿಯುವ ಅಮ್ಮಂದಿರಿಗೆ ಇದೊಂದು ಉತ್ತಮ ಅವಕಾಶ, ಡ್ಯಾನ್ಸ್ ಬಗ್ಗೆ ಆಸಕ್ತಿ ಇರುವ, ಚೆನ್ನಾಗಿ ಹೆಜ್ಜೆ ಹಾಕಬಲ್ಲ ಅಮ್ಮಂದಿರು ಈ ಆಡಿಷನ್ ನಲ್ಲಿ ಭಾಗವಹಿಸಬಹುದಾಗಿದೆ. ಹಾಗೆಯೇ ಈ ಆಡಿಷನ್ ನಲ್ಲಿ ಭಾಗವಹಿಸಲು ಪಾಸ್ಪೋರ್ಟ್ ಸೈಜ್ ಫೋಟೋ, ಅಡ್ರೆಸ್ ಪ್ರೂಫ್ ಜೆರಾಕ್ಸ್ ಕಡ್ಡಾಯ. ದಿನಾಂಕ 2 ಆಗಸ್ಟ್ 2026 ಭಾನುವಾರದಂದು ಬೆಳಗ್ಗೆ 9 ಗಂಟೆಗೆ,ಮಧು ಆರ್ಟ್ಸ್ ಸ್ಟುಡಿಯೋ (ಅಬ್ಬಯ್ಯ ನಾಯ್ಡು ಸ್ಟುಡಿಯೋ), ನಾಯ್ಡು ಲೇಔಟ್ , ಹನುಮಗಿರಿ , ಚಿಕ್ಕಲಸಂದ್ರ , ಉತ್ತರಹಳ್ಳಿ ಹೋಬಳಿ, ಬೆಂಗಳೂರುಇಲ್ಲಿ ಆಡಿಷನ್ ನಡೆಯಲಿದೆ.

ವಿಶೇಷ ಸೂಚನೆ: ಈ ಆಡಿಷನ್ ನಲ್ಲಿ ಭಾಗವಹಿಸಲು ಜೀ ಕನ್ನಡ ವಾಹಿನಿ ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ.
ಅಮ್ಮಂದಿರಿಗೆ ಸಿಕ್ಕಿದೆ ಹೆಜ್ಜೆ ಹಾಕೋ ಅವಕಾಶ; ತಡ ಯಾಕೆ, ಆಡಿಷನ್ ನಲ್ಲಿ ಭಾಗವಹಿಸಿ ಮುಂದಿನ ಸುತ್ತಿಗೆ ಆಯ್ಕೆಯಾಗಿ!

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments