ದುಷ್ಕರ್ಮಿಗಳು ಎರಡು ಚರ್ಚ್ ಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಪಾದ್ರಿ ಹಾಗೂ 6 ಪೊಲೀಸರು ಸೇರಿದಂತೆ 7 ಮಂದಿ ಮೃತಪಟ್ಟ ಘಟನೆ ರಷ್ಯಾದಲ್ಲಿ ನಡೆದಿದೆ
ಸೈನಾಗಾಂಜ್ ಮತ್ತು ಆರ್ಥ್ ಬಾಕ್ಸ್ ಚರ್ಚ್ ಗಳ ಮೇಲೆ ದಾಳಿ ನಡೆದಿದ್ದು, ರಷ್ಯಾ ಪೊಲೀಸರು ಉಗ್ರರ ನಿಷೇಧ ಕಾಯ್ದೆಯಡಿ ತನಿಖೆ ಆರಂಭಿಸಿದ್ದು, ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ.
ಡರ್ಬನೆಟ್ ಪ್ರದೇಶದಲ್ಲಿ ಎರಡೂ ಚರ್ಚ್ ಗಳು ಇದ್ದು, ಮುಸ್ಲಿಮರು ಈ ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದು, ಅಪರಿಚಿತ ವ್ಯಕ್ತಿಗಳು ಆಟೋಮೆಟಿಕ್ ಮೆಷಿನ್ ಗನ್ ಬಳಸಿ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಚರ್ಚ್ ನಲ್ಲಿದ್ದ 66 ವರ್ಷದ ಫಾದರ್ ನಿಕೊಲಿ ಅಬರ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಗನ್ ಮ್ಯಾನ್ ಗಳು ಮತ್ತೊಂದು ಚರ್ಚ್ ಮೇಲೆ ದಾಳಿ ನಡೆಸಲು ತೆರಳುತ್ತಿದ್ದಾಗ ಅಡ್ಡಗಡ್ಡಿದ ಪೊಲೀಸರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.