Monday, September 21, 2026
Google search engine
Homeದೇಶಬಿಜೆಪಿ ಕಚೇರಿ, ಸೋಮನಾಥ್ ದೇವಾಲಯಕ್ಕೆ ಬಾಂಬ್ ಬೆದರಿಕೆ

ಬಿಜೆಪಿ ಕಚೇರಿ, ಸೋಮನಾಥ್ ದೇವಾಲಯಕ್ಕೆ ಬಾಂಬ್ ಬೆದರಿಕೆ

ಅಹಮದಾಬಾದ್‌: ಬಿಜೆಪಿ ಕಚೇರಿ, ಸೋಮನಾಥ ದೇವಾಲಯ ಸೇರಿದಂತೆ ಗುಜರಾತ್‌ನ ವಿವಿಧ ಕಡೆಗಳಲ್ಲಿ ಹುಸಿ ಬಾಂಬ್ ದಾಳಿ ಬೆದರಿಕೆ ಬಂದಿದೆ.

ಬಿಜೆಪಿ ಕಚೇರಿ, ಸೋಮನಾಥ ದೇವಾಲಯ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಸೆ.12ರಂದು ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿತ್ತು. ಎಲ್ಲ ಸ್ಥಳಗಳನ್ನು ಪರಿಶೀಲನೆ ಮಾಡಿದ ಬಳಿಕ ಇದು ಹುಸಿ ಬೆದರಿಕೆ ಎಂದು ತಿಳಿದುಬಂದಿದೆ ಪೊಲೀಸರು ತಿಳಿಸಿದ್ದಾರೆ.

ಕಾನ್ಸುರ, ಅಹಮದಾಬಾದ್, ಗಾಂಧಿನಗರದಲ್ಲಿರುವ ಬಿಜೆಪಿ ಕಚೇರಿ ಮತ್ತು ಸೋಮನಾಥ ದೇವಾಲಯ ಸೇರಿದಂತೆ ಮೂರು-ನಾಲ್ಕು ಕಡೆಗಳಲ್ಲಿ ಬಾಂಬ್ ಸ್ಪೋಟ ಮಾಡುವುದಾಗಿ ಇ-ಮೇಲ್ ಬಂದಿತ್ತು. ಬಾಂಬ್ ಪತ್ತೆ ದಳ ಮತ್ತು ಸ್ಥಳೀಯ ಪೊಲೀಸರು ಆ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿ ಯಾವುದೇ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.

‘ಬಾಂಬ್ ಬೆದರಿಕೆ ಬಂದಿರುವ ಕುರಿತು ನಮಗೆ ಕಂಟ್ರೋಲ್ ರೂಮ್‌ನಿಂದ ಮಾಹಿತಿ ಬಂದಿತ್ತು. ಆದರೆ, ಇ-ಮೇಲ್ ಬೆದರಿಕೆ ಬಂದಿರುವ ವಿಳಾಸವನ್ನು ತನಿಖೆ ಮಾಡುತ್ತಿದ್ದೇವೆ. ಶಂಕಿತ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಬಾಂಬ್ ಬೆದರಿಕೆ ಬಂದ ನಂತರ ಸೋಮನಾಥ ದೇವಸ್ಥಾನದಲ್ಲಿದ್ದ ಭಕ್ತಾಧಿಗಳನ್ನು 10 ನಿಮಿಷ ಹೊರಗಡೆ ಕಳಿಸಲಾಗಿತ್ತು. ಆದರೆ, ಪರಿಶೀಲನೆ ವೇಳೆ ಯಾವುದೇ ಅನುಮಾನಸ್ಪದ ವಸ್ತುಗಳು ಪತ್ತೆಯಾಗಿಲ್ಲ. ದೇವಸ್ಥಾನಕ್ಕೆ ಬರುವ ಭಕ್ತರನ್ನು ಎರಡು ಹಂತದ ತಪಾಸಣೆ ಒಳಪಡಿಸಿದ್ದು, ಎಲೆಕ್ಟ್ರಾನಿಕ್ ಉಪಕರಣಗಳಿಗೆ ನಿರ್ಬಂಧ ಹೇರಲಾಗಿದೆ. ದೇವಸ್ಥಾನದ ಸುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments