Thursday, September 19, 2024
Google search engine
Homeತಾಜಾ ಸುದ್ದಿ800 ಕೋಟಿ ಗಳಿಕೆಯೊಂದಿಗೆ ಹೊಸ ದಾಖಲೆ ಬರೆದ ಕಲ್ಕಿ!

800 ಕೋಟಿ ಗಳಿಕೆಯೊಂದಿಗೆ ಹೊಸ ದಾಖಲೆ ಬರೆದ ಕಲ್ಕಿ!

ನಾಗ್ ಅಶ್ವಿನ್ ನಿರ್ದೇಶಿಸಿ ಪ್ರಭಾಸ್ ನಟಿಸಿರುವ ಕಲ್ಕಿ 2898 ಎಡಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮುನ್ನುಗ್ಗುತ್ತಿದ್ದು ಜಾಗತಿಕ ಮಟ್ಟದಲ್ಲಿ 800 ಕೋಟಿ ರೂ. ಕಲೆ ಹಾಕುವ ಮೂಲಕ ಹೊಸ ದಾಖಲೆ ಬರೆದಿದೆ.

ವೀಕೆಂಡ್ ನಂತರವೂ ಕಲ್ಕಿ ಚಿತ್ರದ ಅಬ್ಬರ ಮುಂದುವರಿದಿದ್ದು, ಚಿತ್ರ ಬಿಡುಗಡೆ ಆಗಿ ಒಂದೇ ವಾರದಲ್ಲಿ 800 ಕೋಟಿ ರೂ. ಕಲೆಹಾಕಿದೆ. ಭಾರತದಲ್ಲೇ 400 ಕೋಟಿ ಸಂಗ್ರಹಿಸುವ ಮೂಲಕ 2024ನೇ ಸಾಲಿನ ಅತೀ ದೊಡ್ಡ ಹಿಟ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಶೀಘ್ರದಲ್ಲೇ 1000 ಕೋಟಿ ಕ್ಲಬ್ ಗೆ ಕಲ್ಕಿ ಸೇರ್ಪಡೆಯಾಗುವ ಸಾಧ‍್ಯತೆ ಇದೆ. ವೀಕೆಂಡ್ ನಲ್ಲಿ ಭರ್ಜರಿ ಆರಂಭ ಪಡೆದಿದ್ದ ಕಲ್ಕಿ. ವಾರದ ಮಧ್ಯೆಯೂ ಪ್ರತಿ ದಿನ ಕನಷ್ಠ 20 ಕೋಟಿ ರೂ. ಕಲೆ ಹಾಕಿ ಅಚ್ಚರಿ ಮೂಡಿಸಿದೆ.

ಹಿಂದಿಯಲ್ಲಿ ಗರಿಷ್ಠ ಗಳಿಕೆಯ ವಾರ್, ಜವಾನ್, ಕೆಜಿಎಫ್-2 ಚಿತ್ರದ ದಾಖಲೆಗಳನ್ನು ಕಲ್ಕಿ ಮುರಿದಿದ್ದು, ಅತ್ಯಂತ ವೇಗವಾಗಿ 1000 ಕೋಟಿಯ ಸರದಾರ ಆಗುವ ದಾಖಲೆಯತ್ತ ದಾಪುಗಾಲಿರಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments