Thursday, September 19, 2024
Google search engine
Homeಕ್ರೀಡೆಭಾರತ- ದಕ್ಷಿಣ ಆಫ್ರಿಕಾ ವನಿತೆಯರ 2ನೇ ಟಿ-20 ಪಂದ್ಯ ರದ್ದು

ಭಾರತ- ದಕ್ಷಿಣ ಆಫ್ರಿಕಾ ವನಿತೆಯರ 2ನೇ ಟಿ-20 ಪಂದ್ಯ ರದ್ದು

ವನಿತೆಯರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ-20 ಪಂದ್ಯ ಭಾರೀ ಮಳೆಯಿಂದ ಅರ್ಧದಲ್ಲೇ ಮೊಟಕುಗೊಂಡಿದೆ.

ಚೆನ್ನೈನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ವನಿತೆಯರ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತ್ತು. ಗೆಲ್ಲಲು 177 ರನ್ ಗಳ ಗುರಿ ಪಡೆದಿದ್ದ ಭಾರತ ಅಖಾಡಕ್ಕೆ ಇಳಿಯುವ ಮುನ್ನವೇ ಸುರಿದ ಮಳೆ ಪಂದ್ಯವನ್ನು ಬಲಿ ಪಡೆಯಿತು.

ಟಿ-20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವನಿತೆಯರು 1-0ಯಿಂದ ಮುನ್ನಡೆ ಗಳಿಸಿದ್ದು, ಭಾರತ ಈ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಸಮಬಲ ಮಾಡಿಕೊಳ್ಳಬಹುದಿತ್ತು. ಆದರೆ ಈ ಪಂದ್ಯ ರದ್ದಾಗಿದ್ದರಿಂದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಟಾಸ್ಮಿನ್ ಬರ್ಟ್ಸ್ ಅವರ ಅರ್ಧಶತಕ (52) ಮತ್ತು ಅನ್ನಾಕೆ ಬೋಶ್ (40) ಉತ್ತಮ ಪ್ರದರ್ಶನದಿಂದ ಉತ್ತಮ ಮೊತ್ತ ದಾಖಲಿಸಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments