19 ವರ್ಷದೊಳಗಿನವರ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ಧಮ್ಮಿಕಾ ನಿರೋಶಾನ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಅಂಬಲಗೊಂಡದ ಕಂಡ ಮಾವತದಲ್ಲಿನ ತಮ್ಮ ನಿವಾಸದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಇದ್ದಾಗ ಮಂಗಳವಾರ ಇದ್ದಾಗ ರಾತ್ರಿ ಈ ಘಟನೆ ನಡೆದಿದೆ.
ಧಮ್ಮಿಕಾ ನಿರೋಶಾನ ವೇಗದ ಬೌಲರ್ ಆಲ್ ರೌಂಡರ್ ಆಗಿದ್ದರು. ಅತ್ಯಂತ ವೇಗವಾಗಿ 19 ವರ್ಷದೊಳಗಿನವರ ಕ್ರಿಕೆಟ್ ಆಟಗಾರನಾಗಿ ಹಾಗೂ ತಂಡದ ನಾಯಕನಾಗಿ ಆಯ್ಕೆಯಾಗಿದ್ದ ಧಮ್ಮಿಕಾ 20ನೇ ವಯಸ್ಸಿಗೆ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದರು.
ಧಮ್ಮಿಕಾ ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.