ಗೋಬಿ, ಕಬಾಬ್ ನಂತರ ಇದೀಗ ತರಕಾರಿಯಲ್ಲೂ ಆರೋಗ್ಯಕ್ಕೆ ಹಾನಿಕಾರಕವಾಗಿ ರಾಸಯನಿಕ ಅಂಶಗಳು ಪತ್ತೆಯಾಗಿವೆ.
ಬೆಂಗಳೂರಿನ ನಾನಾ ಕಡೆ ಆರೋಗ್ಯ ಇಲಾಖೆ ಅಧಿಕಾರಿಗಳು 300 ಕಡೆ ನಡೆಸಿದ ದಾಳಿಯ ವೇಳೆ ತರಕಾರಿಯಲ್ಲೂ ರಾಸಯನಿಕ ಅಂಶಗಳು ಪತ್ತೆಯಾಗಿವೆ.
ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಕಬಾಬ್, ಪಾನಿಪೂರಿ ಮುಂತಾದ ಆಹಾರ ಪದಾರ್ಥಗಳಲ್ಲಿ ರಾಸಾಯನಿಕ ಪದಾರ್ಥ ಬಳಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ರಾಸಯನಿಕ ವಸ್ತುಗಳ ಬಳಕೆಗೆ ನಿಷೇಧ ಹೇರಿತ್ತು.
ಇದೀಗ ಬೆಂಗಳೂರಿನ ವಿವಿಧೆಡೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 300 ಅಧಿಕ ಕಡೆ ತರಕಾರಿಗಳಲ್ಲಿ ರಾಸಾಯನಿಕ ಅಂಶ ಪತ್ತೆಯಾಗಿದ್ದು, ಇದನ್ನು ನಿಯಂತ್ರಿಸಲು ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.