ಪುಣೆಯ ಕುಟುಂಬವೊಂದು ಸುಮಾರು 18 ಕೋಟಿ ರೂ. ಮೌಲ್ಯದ 25 ಕೆಜಿ ಚಿನ್ನಾಭರಣ ಧರಿಸಿ ಆಂಧ್ರಪ್ರದೇಶದ ವಿಶ್ವವಿಶ್ಯಾತ ತಿರುಮಲದ ತಿರುಪತಿ ತಿಮ್ಮಪ್ಪನದ ದರ್ಶನ ಪಡೆದಿದ್ದಾರೆ.
ಇಬ್ಬರು ಪುರುಷರು, ಒಬ್ಬ ಮಹಿಳೆ ಹಾಗೂ ಒಬ್ಬ ಬಾಲಕ ತಿರುಪತಿ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಆದರೆ ದರ್ಶನಕ್ಕೆ ಬಂದ ಈ ಕುಟುಂಬದ ಸದಸ್ಯರು ಪ್ರಮುಖ ಆಕರ್ಷಣೆ ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪುರುಷರು ಬಿಳಿ ಬಣ್ಣದ ಪಂಚೆ ಮತ್ತು ಶರ್ಟ್ ಧರಿಸಿದ್ದರೆ, ಮಹಿಳೆ ಮತ್ತು ಬಾಲಕ ಚಿನ್ನದ ಬಣ್ಣದ ಸೀರೆ, ಉಡುಪು ಧರಿಸಿದ್ದರು. ಬಾಲಕ ಸೇರಿದಂತೆ ನಾಲ್ವರು ಕಣ್ಣು ಕುಕ್ಕುವಂತಹ ಚಿನ್ನಾಭರಣ, ಕೂಲಿಂಗ್ ಗ್ಲಾಸ್ ಹಾಕಿಕೊಂಡು ತಿಮ್ಮಪ್ಪನ ದರ್ಶನ ಪಡೆದರು. ವಿಶೇಷ ಅಂದರೆ ಇವರು ಧರಿಸಿದ್ದ ಚಿನ್ನಾಭರಣದ ಮೇಲೆ 7 ಸಂಖ್ಯೆ ಪ್ರಮುಖ ಆಕರ್ಷಣೆ ಆಗಿತ್ತು.
ತಿರುಪತಿ ದೇವಸ್ಥಾನಕ್ಕೆ ಪ್ರತಿದಿನ 75 ಸಾವಿರ ಭಕ್ತರು ಭೇಟಿ ನೀಡುತ್ತಾರೆ. ವಿಶ್ವದ ಅತ್ಯಂತ ಶ್ರೀಮಂತ ದೇವರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಿರುಪತಿಗೆ ಕಳೆದ ಜುಲೈನಲ್ಲಿ 175 ಕೋಟಿ ರೂ. ಆದಾಯ ಬಂದಿತ್ತು.