Friday, November 22, 2024
Google search engine
Homeತಾಜಾ ಸುದ್ದಿರಾಜ್ಯ ಸರ್ಕಾರದ ಸಿನಿಮಾ ಸಂಸ್ಥೆಯಿಂದ ಕೇರಳ ನಟ, ಶಾಕ ಮುಖೇಶ್ ವಜಾ!

ರಾಜ್ಯ ಸರ್ಕಾರದ ಸಿನಿಮಾ ಸಂಸ್ಥೆಯಿಂದ ಕೇರಳ ನಟ, ಶಾಕ ಮುಖೇಶ್ ವಜಾ!

ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾಗಿರುವ ಹಿರಿಯ ನಟ ಹಾಗೂ ಸಿಪಿಎಂ ಶಾಸಕ ಮುಖೇಶ್ ಅವರನ್ನು ರಾಜ್ಯ ಸರ್ಕಾರದ ಸಿನಿಮಾ ನೀತಿ ಸಂಹಿತೆ ರಚನಾ ಸಂಸ್ಥೆಯಿಂದ ವಜಾ ಮಾಡಲಾಗಿದೆ.

ನಟಿ ಮೀನು ಮುನೀರ್ 2013ರ ಚಿತ್ರೀಕರಣದ ವೇಳೆ ಮುಖೇಶ್, ಜಯಸೂರ್ಯ, ಮುನಿಯಪ್ಪಿಲ್ಲಾ ರಾಜು ಮತ್ತು ಇಡವೆಲ್ಲಾ ಬಾಬು ಸಿನಿಮಾ ಶೂಟಿಂಗ್ ವೇಳೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಇದೀಗ ಬೆದರಿಕೆ ಮೆಸೇಜ್ ಗಳು ಬರುತ್ತಿವೆ ಎಂದು ಆರೋಪಿಸಿದ್ದರು.

ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಕುರಿತ ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಮೋಹನ್ ಲಾಲ್ ನೇತೃತ್ವದ ಕಲಾವಿದ ಸಂಘದ (ಅಮ್ಮಾ) ಆಡಳಿತ ಮಂಡಳಿ ವಿಸರ್ಜಿಸಲಾಗಿದೆ. ಅಲ್ಲದೇ ಚಿತ್ರರಂಗದ ಬಹುತೇಕರು ವಿಚಾರಣೆ ಎದುರಿಸುವ ಸಾಧ್ಯತೆ ಇದೆ.

ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ನಾನು ಚೆನ್ನೈಗೆ ಆಗಮಿಸಿದೆ. ಆದರೆ ಯಾರೊಬ್ಬರು ಕೂಡಾ ಮಲಯಾಳಂ ಚಿತ್ರರಂಗದಿಂದ ದೂರ ಯಾಕೆ ಹೋದೆ ಎಂದು ಪ್ರಶ್ನಿಸಲಿಲ್ಲ ಎಂದು ಅವರು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments