ಬೆಂಗಳೂರಿನಲ್ಲಿ ಮಾರಾಟವಾಗುವ ಗೋಬಿ ಮಂಚೂರಿ, ಕಬಾಬ್, ಕಾಟನ್ ಕ್ಯಾಂಡಿಗಳಲ್ಲಿ ರಾಸಯನಿಕ ಪದಾರ್ಥಗಳು ಕಂಡು ಬಂದ ಬೆನ್ನಲ್ಲೇ ಇದೀಗ ತರಕಾರಿ ಮತ್ತು ಹಣ್ಣಿನಲ್ಲಿ ಕ್ರಿಮಿನಾಷಕಗಳು ಪತ್ತೆಯಾಗಿವೆ.
ಸಚಿವ ದಿನೇಶ್ ಗುಂಡೂರಾವ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದು, ಬೆಂಗಳೂರಿನಲ್ಲಿ 385 ಕಡೆ ತರಕಾರಿ ಮತ್ತು ಹಣ್ಣ ಮಾರಾಟ ಜಾಗದಲ್ಲಿ ತಪಾಸಣೆ ಮಾಡಲಾಗಿದ್ದು, 27 ಕಡೆ ತರಕಾರಿ ಮತ್ತು ಹಣ್ಣಿನಲ್ಲಿ ಕ್ರಿಮಿನಾಶಕಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.