Wednesday, July 1, 2026
Google search engine
Homeಜಿಲ್ಲಾ ಸುದ್ದಿಪ್ರೀತಿಸುವಂತೆ ಬಾಲಕರ ಕಿರುಕುಳ: 15 ವರ್ಷದ ಬಾಲಕಿ ಆತ್ಮಹತ್ಯೆ

ಪ್ರೀತಿಸುವಂತೆ ಬಾಲಕರ ಕಿರುಕುಳ: 15 ವರ್ಷದ ಬಾಲಕಿ ಆತ್ಮಹತ್ಯೆ

ಪ್ರೀತಿಸುವಂತೆ ಇಬ್ಬರು ಬಾಲಕರು ದುಂಬಾಲು ಬಿದ್ದಿದ್ದರಿಂದ ನೊಂದ 15 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ಗಜೇಂದ್ರಗಡ ಪಟ್ಟಣದ ಬಣಗಾರ ಕಾಲೋನಿಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಖುಷಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವಿದ್ಯಾರ್ಥಿಗಳಾದ 18 ವರ್ಷದ ಮುತ್ತುರಾಜ್ ಮ್ಯಾಗೇರಿ ಹಾಗೂ 19 ವರ್ಷದ ಜುನೇದಸಾಬ್ ಕಂದಗಲ್ ಲವ್ ಮಾಡುವಂತೆ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತ ಖುಷಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬವರು ಆರೋಪಿಸಿದ್ದಾರೆ.

ಇಬ್ಬರು ಖುಷಿಯನ್ನು ಲವ್ ಮಾಡ್ತಿದ್ದರು. ಈ ವಿಷಯ ಗೊತ್ತಾಗಿ ಇಬ್ಬರಿಗೂ ತಾಕೀತು ಮಾಡಲಾಗಿತ್ತು. ಆದರೂ ಇಬ್ಬರು ಆಗಾಗ ಭೇಟಿಯಾಗಿ ಮಾತನಾಡಿ ಟಾರ್ಚರ್ ನೀಡುತ್ತಿದ್ದರು. ಈ ಟಾರ್ಚರ್‌ನಂದ ಬೇಸತ್ತು ಬಾಲಕಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ದೂರಿದ್ದಾರೆ.

ಗಜೇಂದ್ರಗಢ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments