Monday, May 25, 2026
Google search engine
Homeದೇಶಪಿಂಚಣಿ ಹಣಕ್ಕಾಗಿ 9 ಕಿ.ಮೀ. ದೂರದ ಬ್ಯಾಂಕ್‌ ಗೆ 90 ವರ್ಷದ ಅತ್ತೆ ಹೊತ್ತು ತಂದ...

ಪಿಂಚಣಿ ಹಣಕ್ಕಾಗಿ 9 ಕಿ.ಮೀ. ದೂರದ ಬ್ಯಾಂಕ್‌ ಗೆ 90 ವರ್ಷದ ಅತ್ತೆ ಹೊತ್ತು ತಂದ ಸೊಸೆ!

ಪಿಂಚಣಿ ಹಣ ಪಡೆಯಲಿ 9 ಕಿ.ಮೀ. ದೂರದ ಬ್ಯಾಂಕ್‌ ಗೆ 90 ವರ್ಷದ ವೃದ್ದ ಅತ್ತೆಯನ್ನು ಬೆನ್ನು ಮೇಲೆ ಕೂರಿಸಿಕೊಂಡು ಸೊಸೆ ಹೊತ್ತು ತಂದ ಹೃದಯ ವಿದ್ರಾವಕ ಘಟನೆ ಛತ್ತೀಸ್‌ ಗಢದಲ್ಲಿ ನಡೆದಿದೆ.

ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಬೀಳದಂತೆ ಬಟ್ಟೆಯಿಂದ ಸೊಂಟಕ್ಕೆ ಕಟ್ಟಿಕೊಂಡ ಮಹಿಳೆ ಅತ್ತೆಯನ್ನು ದಟ್ಟವಾದ ಕಾಡು, ಕಿರಿದಾದ ಹಾಗೂ ಕಡಿದಾದ ರಸ್ತೆಗಳಲ್ಲಿ ನಡೆದು ಬ್ಯಾಂಕ್‌ ಗೆ ಕರೆದುಕೊಂಡು ಬಂದಿದ್ದಾರೆ. ಮಹಿಳೆ ಅತ್ತೆಯನ್ನು ಹೊತ್ತುಕಂಡು ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸುರುಜಾ ಜಿಲ್ಲೆಯ ಮನಿಪಟ್‌ ಎಂಬಲ್ಲಿ ಸುಕುಮಾನ ಬಾಯಿ ಎಂಬ ಮಹಿಳೆ ಅತ್ತೆಯ ಪಿಂಚಣಿ ಹಣ ಪಡೆಯಲು ಅವರನ್ನು ಹೆಗಲಮೇಲೆ ಹೊತ್ತು ಸಾಗಿದ್ದಾರೆ ಎಂದು ತಿಳಿದು ಬಂದಿದೆ.

ಅತ್ಯಂತ ದಟ್ಟವಾದ ಕಾಡುಗಳಿಗೆ ಹೆಸರಾದ ಛತ್ತೀಸಗಢದಲ್ಲಿ ಸೂಕ್ತವಾದ ಸಾರಿಗೆ ವ್ಯವಸ್ಥೆ ಇಲ್ಲವಾಗಿದೆ. ಅಲ್ಲದೇ ತೀರ ಬಡತನದಲ್ಲಿರುವ ಕುಟುಂಬಗಳಿಗೆ ಸಣ್ಣ ಮೊತ್ತವೂ ಮಹತ್ವದ್ದಾಗಿದೆ. ಆದ್ದರಿಂದ ಈ ರೀತಿಯ ಘಟನೆಗಳು ಸಹಜ ಎಂದು ಸ್ಥಳೀಯರು ಆರೋಪಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments