ಇಬ್ಬರು ಹಣ್ಣಿನ ವ್ಯಾಪಾರಿಗಳ ಮಧ್ಯೆ ತಮಾಷೆಗೋಸ್ಕರ ನಡೆದ ಜಗಳವು ವಿಕೋಪಕ್ಕೆ ತಿರುಗಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ದುರ್ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ತಾಮಣಿಯಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ಅಕ್ಕಪಕ್ಕದಲ್ಲೇ ಕೂತು ವ್ಯಾಪಾರ ಮಾಡುತ್ತಿದ್ದ ಯುವಕರ ನಡುವೆ ತಮಾಷೆಯಲ್ಲೇ ಶುರುವಾದ ಜಗಳ, ನೋಡ ನೋಡುತ್ತಿದ್ದಂತೆ ವಿಕೋಪಕ್ಕೆ ತಿರುಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ.
ಚಿಂತಾಮಣಿಯ ಎಂಜಿ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆ ಎದುರು ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಅರ್ಬಾಜ್ ಕೊಲೆಗೈದ ಫರ್ಹಾದ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಅರ್ಬಾಜ್ ಮತ್ತು ಫರ್ಹಾದ್ ನಿನ್ನೆ ಕೂಡ ಎಂದಿನಂತೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದು, ಇಬ್ಬರ ನಡುವೆ ಮಂಗಳವಾರ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಅರ್ಬಾಜ್‌ನ ಕೊಲೆ ಆಗಿದೆ. ನಿತ್ಯವೂ ಇಬ್ಬರು ಪರಸ್ಪರ ಮಾತಿನ ಮೂಲಕ ಕಾಲೆಳೆಯುತ್ತಿದ್ದರು, ಅದರಂತೆಯೇ ನಿನ್ನೆ ಮಾತುನಾಡುತ್ತಾ ಗಲಾಟೆಗೆ ನಿಂತಿದ್ದಾರೆ. ತಮಾಷೆಯಿಂದಲೇ ಆರಂಭವಾದ ಜಗಳ ವಿಕೋಪಕ್ಕೆ ಹೋಗಿದೆ. ಫರ್ಹಾದ್ ಸೀದಾ ಕತ್ತರಿಯಿಂದ ಅರ್ಬಾಜ್ ಕುತ್ತಿಗೆಗೆ ಇರಿದಿದ್ದಾನೆ.
ರಕ್ತಸ್ರಾವವಾಗಿ ಅಲ್ಲೇ ಕುಸಿದು ಬಿದ್ದಿದ್ದ ಅರ್ಬಾಜ್‌ನನ್ನು ಎದುರಲ್ಲೇ ಇರುವ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಪ್ರಾಣ ಬಿಟ್ಟಿದ್ದಾನೆ. ಚಿಂತಾಮಣಿ ನಗರ ಪೊಲೀಸರು ಆರೋಪಿ ಫರ್ಹಾದ್‌ನನ್ನು ಬಂಧಿಸಿದ್ದಾರೆ.



