Friday, May 15, 2026
Google search engine
Homeಮನರಂಜನೆಪುನೀತ್ ರಾಜ್ ಕುಮಾರ್ ಜೊತೆ ಡ್ಯಾನ್ಸ್ ಮಾಡಿದ್ದ ನಟಿ ಶೆಫಾಲಿ ಅನುಮಾನಸ್ಪದ ಸಾವು

ಪುನೀತ್ ರಾಜ್ ಕುಮಾರ್ ಜೊತೆ ಡ್ಯಾನ್ಸ್ ಮಾಡಿದ್ದ ನಟಿ ಶೆಫಾಲಿ ಅನುಮಾನಸ್ಪದ ಸಾವು

ಮುಂಬೈ: ಪುನೀತ್ ರಾಜ್​ಕುಮಾರ್ ಜೊತೆ ‘ನಾ ಬೋರ್ಡು ಇರದ ಬಸ್ಸನು..’ ಹಾಡಿಗೆ ಡ್ಯಾನ್ಸ್ ಮಾಡಿದ್ದ ನಟಿ ಶೆಫಾಲಿ ಜರಿವಾಲಾ 42ನೇ ವಯಸ್ಸಿಗೆ ಮೃತಪಟ್ಟಿದ್ದು, ಸಾವಿಗೆ ಕಾರಣ ದೃಢಪಟ್ಟಿಲ್ಲ.

ಮುಂಬೈನ ಅಂಧೇರಿ ಲೋಖಂಡ್‌ವಾಲಾ ಪ್ರದೇಶದಲ್ಲಿ ವಾಸಿಸುತ್ತಿದ್ದ ನಟಿ ಶೆಫಾಲಿ ಶುಕ್ರವಾರ ರಾತ್ರಿ ದಿಢೀರನೆ ಅಸ್ವಸ್ಥರಾಗಿದ್ದು, ಪತಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದ ಶೆಫಾಲಿ ಮೃತಪಟ್ಟಿದ್ದಾರೆ.

ಪ್ರಾಥಮಿಕ ಮೂಲಗಳ ಪ್ರಕಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ ವೈದ್ಯರು ಸಾವಿಗೆ ನಿರ್ದಿಷ್ಟ ಕಾರಣ ಪತ್ತೆಯಾಗಿಲ್ಲ. ಮೃತದೇಹವನ್ನು ಹೆಲಿಕಾಫ್ಟರ್ ಮೂಲಕ ಮತ್ತೊಂದು ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಕಾರಣ ತಿಳಿದು ಬರಲಿದೆ ಎಂದು ಹೇಳಿದ್ದಾರೆ.

2004ರಲ್ಲಿ ಕಾಂಟಾ ಲಾಗಾ ಆಲ್ಬಂ ಸಾಂಗ್ ಮೂಲಕ ರಾತ್ರೋರಾತ್ರಿ ಸ್ಟಾರ್ ಆಗಿ ಉದಯಿಸಿದ್ದ ಶೆಫಾಲಿ 2013 ಬಿಗ್ ಬಾಸ್ 13ನೇ ಆವೃತ್ತಿಯಲ್ಲಿ ಸ್ಪರ್ಧಿಸಿದ್ದರು. ಶೆಫಾಲಿ 1982ರ ಡಿಸೆಂಬರ್ 15ರಂದು ಮುಂಬೈನಲ್ಲಿ ಜನಿಸಿದ್ದು, 2004ರಲ್ಲಿ ಹರ್ಮೀತ್ ಸಿಂಗ್​ ಅವರನ್ನು ಮದುವೆ ಆಗಿದ್ದರು. 2009ರಲ್ಲಿ ವಿಚ್ಚೇಧನ ಪಡೆದು 2014ರಲ್ಲಿ ಪರಾಗ್ ತ್ಯಾಗಿ ಅವರನ್ನು ವಿವಾಹ ಆದರು.

ಶೆಫಾಲಿ ಸಾವಿನ ಸುದ್ದಿ ಕೇಳಿದ ಅಭಿಮಾನಿಗಳು ಮತ್ತು ಆಪ್ತರು ಆಘಾತಕ್ಕೊಳಗಾಗಿದ್ದಾರೆ. ಗಾಯಕ ಮಿಕಾ ಸಿಂಗ್ ಸೇರಿದಂತೆ ಬಾಲಿವುಡ್ ಸೆಲೆಬ್ರೆಟಿಗಳು ಶೋಕ ವ್ಯಕ್ತಪಡಿಸಿದ್ದರು.

ಕೆಲ ದಿನಗಳ ಹಿಂದಷ್ಟೇ ಶೆಫಾಲಿ ಫೋಟೋಶೂಟ್ ಮಾಡಿಸಿದ್ದರು. ಅವರ ಸಾವಿಗೆ ಬೇರೆ ಏನಾದರೂ ಕಾರಣ ಇದೆಯೇ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಮರಣೋತ್ತರ ವರದಿ ಬಂದ ಬಳಿಕ ಈ ಬಗ್ಗೆ ತಿಳಿಯಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments