Thursday, May 14, 2026
Google search engine
Homeತಾಜಾ ಸುದ್ದಿವಿಮಾನ ದುರಂತದಲ್ಲಿ ಮೃತರ ಸಂಖ್ಯೆ 274ಕ್ಕೆ ಏರಿಕೆ: ವಿಮಾನದ ಬಾಲದಲ್ಲಿ ಛಿದ್ರಗೊಂಡ ದೇಹ ಪತ್ತೆ!

ವಿಮಾನ ದುರಂತದಲ್ಲಿ ಮೃತರ ಸಂಖ್ಯೆ 274ಕ್ಕೆ ಏರಿಕೆ: ವಿಮಾನದ ಬಾಲದಲ್ಲಿ ಛಿದ್ರಗೊಂಡ ದೇಹ ಪತ್ತೆ!

ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ವಿಮಾನದಲ್ಲಿ ಇದ್ದವರು ಹಾಗೂ ಇಲ್ಲದವರೂ ಸೇರಿ ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ.

ಏರ್ ಇಂಡಿಯಾ ಎಐ 171 ಬೋಯಿಂಗ್ 787-8 ವಿಮಾನ ಗುರುವಾರ ಮಧ್ಯಾಹ್ನ 1.19ಕ್ಕೆ ಟೇಕಾಫ್ ಆದ ಕೆಲವೇ ಸೆಕೆಂಡ್ ಗಳಲ್ಲಿ ಕಟ್ಟಡಗಳ ಮೇಲೆ ಪತನಗೊಂಡಿತ್ತು. ಇದರಲ್ಲಿ ವಿಮಾನದಲ್ಲಿದ್ದ 242 ಮಂದಿಯ ಪೈಕಿ 241 ಹಾಗೂ ದುರಂತ ನಡೆದ ಜಾಗದಲ್ಲಿದ್ದ 33 ಮಂದಿ ಅಸುನೀಗಿದ್ದಾರೆ.

ಮೂಲಗಳ ಪ್ರಕಾರ ವಿಮಾನ ಪತನಗೊಂಡ ವೈದ್ಯಕೀಯ ವಿದ್ಯಾರ್ಥಿಗಳ ಮೆಸ್ ನಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದು, ಶವಗಳ ಶೋಧ ಕಾರ್ಯ ಮುಂದುವರಿದಿದೆ. ಇದೆಲ್ಲದರ ನಡುವೆ ವಿಮಾನದ ಬಾಲದ ಬಳಿ ಛಿದ್ರಗೊಂಡ ಮೃತದೇಹವೊಂದು ಪತ್ತೆಯಾಗಿದೆ.

ಮೆಡಿಕಲ್ ಕಾಲೇಜು ಬಳಿಯ ಕಟ್ಟಡದಲ್ಲಿ 10 ವೈದ್ಯರು ಹಾಗೂ ಅವರ ಸಂಬಂಧಿಕರು ಅಲ್ಲದೇ 24 ವಿದ್ಯಾರ್ಥಿಗಳು ಇದ್ದರು. ಇವರಿಗೆ ದುರಂತದಲ್ಲಿ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಟ್ಟಡದ ಮೇಲೆ ವಿಮಾನ ಪತನಗೊಂಡು ಆವಶೇಷ ಸಿಲುಕಿರುವ ರಕ್ಷಣಾ ಕಾರ್ಯ ಹಾಗೂ ಬ್ಲ್ಯಾಕ್ ಬಾಕ್ಸ್ ಪತ್ತೆಗೆ 40 ಅಧಿಕಾರಿಗಳು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಶ್ರಮ ವಹಿಸಿದ್ದಾರೆ.

230 ಮೃತದೇಹಗಳು ಇದುವರೆಗೆ ಪತ್ತೆಯಾಗಿದ್ದು, 217 ಮೃತದೇಹಗಳ ಡಿಎನ್ ಎ ಪತ್ತೆಯಾಗಿದ್ದು, ಹಲವು ಕುಟುಂಬಗಳಿಗೆ ಮೃತದೇಹ ಹಸ್ತಾಂತರಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments