ಉದ್ಯಮಿ ಅನಿಲ್ ಅಂಬಾನಿಗೆ ಸೇರಿದ ಮುಂಬೈನ 3716 ಕೋಟಿ ರೂ. ಮೌಲ್ಯದ ನಿವಾಸವನ್ನು ಜಾರಿ ನಿರ್ದೇಶನಾಲಯ ಜಫ್ತಿ ಮಾಡಿಕೊಂಡಿದೆ.
ಅಕ್ರಮ ಹಣ ವರ್ಗಾವಣೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ `ಅಬೋಡ್’ ಹೆಸರಿನ ಅನಿಲ್ ಅಂಬಾನಿಗೆ ಸೇರಿದ ನಿವಾಸವನ್ನು ಜಫ್ತಿ ಮಾಡಿದೆ. ಈ ಮೂಲಕ ಅನಿಲ್ ಗೆ ಸೇರಿದ ಒಟ್ಟಾರೆ 12,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಜಫ್ತಿ ಮಾಡಿಕೊಂಡಿದೆ.
ಅಂಬಾನಿ ರಿಲಾಯನ್ಸ್ ಕಮ್ಯೂನಿಕೇಷನ್ ಮೂಲಕ ಅನಿಲ್ ಅಂಬಾನಿ ದೊಡ್ಡ ಪ್ರಮಾಣದ ಸಾಲ ಪಡೆಯಲು ಬ್ಯಾಂಕ್ ಅಧಿಕಾರಿಗಳಿಗೆ ಲಂಚದ ಆಮೀಷವೊಡ್ಡಿದ್ದರು ಎಂಬ ಆರೋಪ ಕೇಳಿಬಂದಿದ್ದು, ಈ ಪ್ರಕರಣದ ಕುರಿತು ಇಡಿ ತನಿಖೆ ನಡೆಸುತ್ತಿದೆ.



