ಬಾಲಿವುಡ್ ಸೆಲೆಬ್ರೆಟಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಉದಯಪುರದ ಐಷಾರಾಮಿ ಹೋಟೆಲ್ ನಲ್ಲಿ ಮದುವೆ ಆಗುವ ಮೂಲಕ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಉದಯಪುರದಿಂದ 50 ಕಿ.ಮೀ. ದೂರದಲ್ಲಿರುವ ಐಟಿಸಿ ಮೆಮೊಂಟೊಸ್ ಹೋಟೆಲ್ ನಲ್ಲಿ ಎರಡು ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ರಶ್ಮಿಕಾ-ವಿಜಯ್ ಮದುವೆ ಆಗಿದ್ದಾರೆ.
ಕೊಡಗು ಸಂಪ್ರದಾಯ ಹಾಗೂ ತೆಲುಗು ಸಂಪ್ರದಾಯದಂತೆ ಜೋಡಿ ಎರಡು ಬಾರಿ ಮದುವೆ ಆಗಿದ್ದಾರೆ. ಗುರುವಾರ ಬೆಳಿಗ್ಗೆ ವಿಜಯ್ ದೇವರಕೊಂಡ ಮನೆಯ ಸಂಪ್ರದಾಯದಂತೆ ಮದುವೆ ಆದರೆ, ಸಂಜೆ ಕೊಡವ ಸಂಪ್ರದಾಯದಂತೆ ಮತ್ತೊಮ್ಮೆ ಮದುವೆ ಆಗಲಿದ್ದಾರೆ.



