Sunday, June 28, 2026
Google search engine
Homeರಾಜ್ಯರಾಸಲೀಲೆ ವಿಡಿಯೋ ಬೆನ್ನಲ್ಲೇ ಆಡಿಯೋ ಬಹಿರಂಗ: 10 ದಿನ ರಜೆ ಹಾಕಿದ ಡಿಜಿಪಿ ರಾಮಚಂದ್ರ ರಾವ್!

ರಾಸಲೀಲೆ ವಿಡಿಯೋ ಬೆನ್ನಲ್ಲೇ ಆಡಿಯೋ ಬಹಿರಂಗ: 10 ದಿನ ರಜೆ ಹಾಕಿದ ಡಿಜಿಪಿ ರಾಮಚಂದ್ರ ರಾವ್!

ಪೊಲೀಸ್ ಕಚೇರಿಯಲ್ಲಿಯೇ ಸಮವಸ್ತ್ರದಲ್ಲಿದ್ದಾಗಲೇ ಮಹಿಳೆಯರ ಜೊತೆ ರಾಸಲೀಲೆಯ ವೀಡಿಯೋ ಬೆನ್ನಲ್ಲೇ ಆಡಿಯೋ ಕೂಡ ಬಿಡುಗಡೆ ಆಗಿದ್ದು, ಸರ್ಕಾರದ ಶಿಸ್ತುಕ್ರಮದ ಎಚ್ಚರಿಕೆ ಬೆನ್ನಲ್ಲೆ ಡಿಜಿಪಿ ರಾಮಚಂದ್ರ ರಾವ್ 10 ದಿನ ರಜೆ ಹಾಕಿ ತೆರಳಿದ್ದಾರೆ.

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟಿ ರನ್ಯಾ ರಾವ್‌ ತಂದೆ ಆಗಿರುವ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ 8 ವರ್ಷಗಳ ಹಿಂದೆ ಬೆಳಗಾವಿ ಪೊಲೀಸ್ ಅಧಿಕಾರಿ ಆಗಿದ್ದಾಗ ನಡೆದ ರಾಸಲೀಲೆಯ ವೀಡಿಯೋ ಇದು ಎಂದು ಹೇಳಲಾಗಿದೆ.

ರಾಸಲೀಲೆಯ ವೀಡಿಯೊ ಬಹಿರಂಗ ಬೆನ್ನಲ್ಲೇ ಮಹಿಳೆ ಜೊತೆ ಅಶ್ಲೀಲವಾಗಿ ಮಾತನಾಡಿರುವ ಆಡಿಯೋ ಕೂಡ ಬಿಡುಗಡೆ ಆಗಿದೆ. ಇದರ ಬೆನ್ನಲ್ಲೇ ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಲು ತೆರಳಿದಾಗ ಭೇಟಿಗೆ ಅವಕಾಶ ಸಿಗದೇ ಮರಳಿದ್ದಾರೆ.

ಈ ಬೆಳವಣಿಗೆಗಳ ಕುರಿತು ಬಾದಾಮಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಈ ವಿಷಯ ನನ್ನ ಗಮನಕ್ಕೂ ಬಂದಿದ್ದು, ವರದಿ ನೀಡಲು ಸೂಚಿಸಿದ್ದೇನೆ. ವರದಿ ಬಂದ ಕೂಡಲೇ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಾಮಚಂದ್ರ ರಾವ್ ಪರೋಕ್ಷವಾಗಿ ಈ 8 ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಇದ್ದಾಗ ಎಂದು ಒಪ್ಪಿಕೊಂಡರೂ ನಂತರ ಈ ವೀಡಿಯೋ ನಕಲಿ. ಈಗಿನ ಕಾಲದಲ್ಲಿ ಏನು ಬೇಕಾದರೂ ಮಾಡಬಹುದು. ಎಐ ಬಳಸಿ ಮಾಡಿದ ವೀಡಿಯೋ ಎಂದು ತಪ್ಪಿಸಿಕೊಳ್ಳಲು ಯತ್ನಿಸಿದರು.

ಹಾಗೂ ಕರ್ನಾಟಕದ ಐಜಿಪಿ (ಡಿಜಿಪಿ ಶ್ರೇಣಿ) ರಾಮಚಂದ್ರ ರಾವ್ ಪೊಲೀಸ್ ಕಚೇರಿಯಲ್ಲಿ ಸಮವಸ್ತ್ರದಲ್ಲಿದ್ದಾಗಲೇ ಮಹಿಳೆಯರ ಜೊತೆ ರಾಸಲೀಲೆಯಲ್ಲಿ ತೊಡಗಿರುವ ವೀಡಿಯೊಗಳು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಕುರಿತು ಸಮಗ್ರ ವರದಿ ನೀಡುವಂತೆ ಗೃಹ ಇಲಾಖೆಗೆ ಸಿಎಂ ಸೂಚಿಸಿದ್ದಾರೆ.

ಮಾಡೆಲ್ ಜೊತೆ ಸರಸವಾಡುವಾಗ ವೀಡಿಯೊ ಮಾಡಿಕೊಂಡಿದ್ದು, ಕ್ಯಾಮೆರಾ ಎದುರೇ ವಿವಸ್ತ್ರರಾಗಿ ವಿಕೃತಿ ಮೆರೆದಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಕಚೇರಿಗೆ ಕೆಲಸದ ನಿಮಿತ್ತ ಬರುವ ಮಹಿಳೆಯರ ಜೊತೆಗೂ ಈ ಅಧಿಕಾರಿ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಡಿಜಿಪಿ ನಡೆಯನ್ನು ಟೀಕಿಸಿರುವ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಈ ಅಧಿಕಾರಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಅಮಾನತು ಮಾಡಬೇಕು ಎಂಬ ಒತ್ತಾಯಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments