Home ತಂತ್ರಜ್ಞಾನ ಸ್ಪಾಮ್ ಸಮಸ್ಯೆಗಳಿಗೆ ಏರ್ ಟೆಲ್ ಗ್ರಾಹಕರಿಗೆ ಮುಕ್ತಿ!

ಸ್ಪಾಮ್ ಸಮಸ್ಯೆಗಳಿಗೆ ಏರ್ ಟೆಲ್ ಗ್ರಾಹಕರಿಗೆ ಮುಕ್ತಿ!

ಭಾರತಿ ಏರ್‌ಟೆಲ್, ಭಾರತದ ಮೊದಲ ಸ್ಪ್ಯಾಮ್ ವಿರೋಧಿ ನೆಟ್ವರ್ಕ್, ತನ್ನ ಎಐ-ಚಾಲಿತ, ಸ್ಪ್ಯಾಮ್ ವಿರೋಧಿ ಪರಿಹಾರವನ್ನು ಪರಿಚಯಿಸಿದ ಎರಡೂವರೆ ತಿಂಗಳುಗಳಲ್ಲಿಯೇ 8 ಬಿಲಿಯನ್ ಸ್ಪ್ಯಾಮ್ ಕರೆಗಳು ಮತ್ತು 0.8 ಬಿಲಿಯನ್ ಸ್ಪ್ಯಾಮ್ smsಗಳನ್ನು ವರದಿ ಮಾಡಿದೆ.

by Editor
0 comments
airtel

ಭಾರತಿ ಏರ್‌ಟೆಲ್, ಭಾರತದ ಮೊದಲ ಸ್ಪ್ಯಾಮ್ ವಿರೋಧಿ ನೆಟ್ವರ್ಕ್, ತನ್ನ ಎಐ-ಚಾಲಿತ, ಸ್ಪ್ಯಾಮ್ ವಿರೋಧಿ ಪರಿಹಾರವನ್ನು ಪರಿಚಯಿಸಿದ ಎರಡೂವರೆ ತಿಂಗಳುಗಳಲ್ಲಿಯೇ 8 ಬಿಲಿಯನ್ ಸ್ಪ್ಯಾಮ್ ಕರೆಗಳು ಮತ್ತು 0.8 ಬಿಲಿಯನ್ ಸ್ಪ್ಯಾಮ್ smsಗಳನ್ನು ವರದಿ ಮಾಡಿದೆ. ಈ ಸುಧಾರಿತ ಅಲ್ಗಾರಿದಮ್ ಅನ್ನು ಬಳಸಿಕೊಂಡು ಎಐ-ಚಾಲಿತ ನೆಟ್ವರ್ಕ್ ಯಶಸ್ವಿಯಾಗಿ ಪ್ರತಿ ದಿನ ಅಂದಾಜು 1 ಮಿಲಿಯನ್ ಸ್ಪ್ಯಾಮರ್ ಗಳನ್ನು ಗುರುತಿಸಿದೆ.

ಸಂಸ್ಥೆಯು, ಕಳೆದ 2.5 ತಿಂಗಳುಗಳಲ್ಲಿ, ತನ್ನ 252 ಮಿಲಿಯನ್ ವಿಶಿಷ್ಟ ಗ್ರಾಹಕರಿಗೆ ಈ ಅನುಮಾನಾಸ್ಪದ ಕರೆಗಳ ಬಗ್ಗೆ ಎಚ್ಚರಿಕೆ ನೀಡಿದೆ, ಜೊತೆಗೆ ಇಂತಹ ಕರೆಗಳನ್ನು ಸ್ವೀಕರಿಸುವ ಗ್ರಾಹಕರ ಪ್ರಮಾಣದಲ್ಲಿ 12%ರಷ್ಟು ಕುಸಿತವನ್ನು ಸಹ ಗಮನಿಸಿದೆ. ಏರ್‌ಟೆಲ್ ನೆಟ್ವರ್ಕ್ ನ ಎಲ್ಲಾ ಕರೆಗಳಲ್ಲಿ ಶೇಖಡಾ 6% ಸ್ಪ್ಯಾಮ್ ಕರೆಗಳಾಗಿವೆ ಮತ್ತು ಎಲ್ಲಾ smsಗಳ ಶೇಖಡಾ 2% ರಷ್ಟು ಸಂದೇಶಗಳು ಸ್ಪ್ಯಾಮ್ ಸಂದೇಶಗಳು ಎಂದು ಗುರುತಿಸಲಾಗಿದೆ. ಆಸಕ್ತಿದಾಯಕವಾಗಿ, ಶೇಖಡಾ 35%ರಷ್ಟು ಸ್ಪ್ಯಾಮರ್ ಗಳು ಸ್ಥಿರ ದೂರವಾಣಿಗಳನ್ನು ಬಳಸುತ್ತಾರೆ.

ಹೆಚ್ಚುವರಿಯಾಗಿ, ದೆಹಲಿಯಲ್ಲಿರುವ ಗ್ರಾಹಕರು ಅತ್ಯಧಿಕ ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸಿದರೆ, ಆಂಧ್ರಪ್ರದೇಶ ಮತ್ತು ಪಶ್ಚಿಮ ಉತ್ತರ ಪ್ರದೇಶ ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುವ ನಂತರದ ರಾಜ್ಯಗಳಾಗಿವೆ. ಗರಿಷ್ಠ ಸ್ಪ್ಯಾಮ್ ಕರೆಗಳ ಮೂಲವು ಮೊದಲು ದೆಹಲಿ, ನಂತರ ಮುಂಬೈ ಮತ್ತು ಕರ್ನಾಟಕದ್ದಾಗಿದೆ ಎಂದೂ ಸಹ ಗಮನಿಸಲಾಗಿದೆ. SMSಗಳಿಗೆ ಸಂಬಂಧಿತ ವಿಷಯದಲ್ಲಿ, ಮೊದಲು ಗುಜರಾತ್, ನಂತರ ಕೊಲ್ಕತ್ತಾ ಮತ್ತು ಉತ್ತರ ಪ್ರದೇಶದಿಂದ ಹೆಚ್ಚಿನ ಸ್ಪ್ಯಾಮ್ ಸಂದೇಶಗಳನ್ನು ಕಳುಹಿಸಲಾಗಿದೆ ಮತ್ತು ಮುಂಬೈ, ಚೆನ್ನೈ ಹಾಗೂ ಗುಜರಾತ್ ನಗರಗಳಲ್ಲಿನ ಗ್ರಾಹಕರು ಸ್ಪ್ಯಾಮ್ ಕರೆಗಳಿಗೆ ಗುರಿಯಾಗಿದ್ದಾರೆ.

ಇತ್ತೀಚಿನ ಪ್ರವೃತ್ತಿಗಳ ಪ್ರಕಾರ, ಎಲ್ಲಾ ಸ್ಪ್ಯಾಮ್ ಕರೆಗಳ ಶೇಖಡಾ 76%ರಷ್ಟು ಸ್ಪ್ಯಾಮ್ ಕರೆಗಳು ಪುರುಷ ಗ್ರಾಹಕರನ್ನು ಗುರಿಪಡಿಸುತ್ತದೆ. ಜೊತೆಗೆ, ವಯಸ್ಸಿನ ಅಂಕಿಅಂಶಗಳಾದ್ಯಂತ ಸ್ಪ್ಯಾಮ್ ಕರೆಗಳ ಆವರ್ತನದಲ್ಲಿಯೂ ಸಹ ಗಮನಾರ್ಹ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. 36-60 ವಯಸ್ಸಿನ ಗ್ರಾಹಕರು ಶೇಖಡಾ 48%ರಷ್ಟು ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುತ್ತಾರೆ, ಇನ್ನು 26-35 ವಯೋಮಿತಿಯವರು ಎಲ್ಲಾ ಕರೆಗಳ ಶೇಖಡಾ 26%ರಷ್ಟು ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುತ್ತಾರೆ, ಈ ವಯೋಮಿತಿಯವರು ಎರಡನೆಯ ಅತ್ಯಂತ ಹೆಚ್ಚಿನ ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುವವರಾಗಿದ್ದಾರೆ. ಇನ್ನು ಅಂದಾಜು, ಎಲ್ಲಾ ಸ್ಪ್ಯಾಮ್ ಕರೆಗಳ ಕೇವಲ 8%ರಷ್ಟು ಮಾತ್ರ ಹಿರಿಯ ನಾಗರಿಕರಿಗೆ ಮಾಡಲಾಗಿದೆ.

banner

ಸಂಸ್ಥೆಯ ತನಿಖೆಯು ಸ್ಪ್ಯಾಮ್ ಚಟುವಟಿಕೆಯ ಗಂಟೆಯ ವಿತರಣೆಯ ಮೇಲೆಯೂ ಸಹ ಬೆಳಕು ಚೆಲ್ಲುತ್ತದೆ. ಸ್ಪ್ಯಾಮ್ ಕರೆಗಳು ಬೆಳಗ್ಗೆ 9ರ ನಂತರ ಶುರುವಾಗುತ್ತಾ, ದಿನದ ಸಮಯ ಹೆಚ್ಚಾಗುತ್ತಿದ್ದಂತೆ ಸ್ಪ್ಯಾಮ್ ಕರೆಗಳ ಸಂಖ್ಯೆಯೂ ಸಹ ಹೆಚ್ಚುತ್ತದೆ. ಸ್ಪ್ಯಾಮ್ ಕರೆಗಳನ್ನು ಸಾಮಾನ್ಯವಾಗಿ ಮಧ್ಯಾಹ್ನ 12 ಗಂಟೆಯಿಂದ 3ರವರೆಗೆ ಬಹಳ ಹೆಚ್ಚಾಗಿ ಕಾಣಬಹುದು. ಇದಲ್ಲದೆ, ವಾರದ ದಿನಗಳು ಮತ್ತು ವಾರಾಂತ್ಯಗಳಲ್ಲಿನ ಕರೆಗಳಲ್ಲಿಯೂ ಸಹ ಸ್ಪ್ಯಾಮ್ ಕರೆಗಳ ಆವರ್ತನಗಳಲ್ಲಿ ಬಹಳ ವ್ಯತ್ಯಾಸವನ್ನು ಕಾಣಬಹುದು. ಭಾನುವಾರದ ದಿನದಂದು ಈ ಕರೆಗಳು ಶೇಖಡಾ 40%ರಷ್ಟು ಕಡಿಮೆಯಾಗುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ರೂ. 15,000 ದಿಂದ ರೂ.20,000ಗಳವರೆಗಿನ ಸಾಧನಗಳನ್ನು ಬಳಸುವವರು ಎಲ್ಲ ಸ್ಪ್ಯಾಮ್ ಕರೆಗಳ ಶೇಖಡಾ 22%ರಷ್ಟು ಕರೆಗಳನ್ನು ಸ್ವೀಕರಿಸುತ್ತಾರೆ.

ಈ ಬಹು ಆಯಾಮವುಳ್ಳ ನಿಯತಾಂಕಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುವ ಮೂಲಕ, ಎಐ-ಚಾಲಿತ ವ್ಯವಸ್ಥೆಯು ಗಮನಾರ್ಹ ನಿಖರತೆಯೊಂದಿಗೆ ನೈಜ-ಸಮಯದಲ್ಲಿ ಈ ಬೇಡದ ಒಳಬರುವ ಕರೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಈ ಅದ್ಭುತ ಉಪಕ್ರಮವು ಸ್ಪ್ಯಾಮ್‌ನ ಬೆಳೆಯುತ್ತಿರುವ ಭಯಾನಕ ದೈತ್ಯಕ್ಕೆ ಸಮಗ್ರ ಪರಿಹಾರವನ್ನು ನೀಡುವ ಭಾರತದ ಮೊದಲ ಸೇವಾ ಪೂರೈಕೆದಾರರಾಗಿ ಏರ್‌ಟೆಲ್ ಅನ್ನು ದೃಢವಾಗಿ ಸ್ಥಾಪಿಸಿದೆ. ಜೊತೆಗೆ ಇದು ತನ್ನ ವಿಶಾಲವಾದ ಗ್ರಾಹಕರ ನೆಲೆಯ ಗೌಪ್ಯತೆ ಮತ್ತು ಅನುಕೂಲಕ್ಕಾಗಿ ಆದ್ಯತೆ ನೀಡುವ ಅಂತರ್ಗತ ಭದ್ರತಾ ಕ್ರಮಗಳಿಗಾಗಿ ಹೊಸ ಉದ್ಯಮ ಮಾನದಂಡಗಳನ್ನು ಸಹ ಹೊಂದಿಸುತ್ತದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ರಷ್ಯಾ ಸೇನೆಯಲ್ಲಿದ್ದ 12 ಭಾರತೀಯರು ಸಾವು, 16 ಮಂದಿ ಕಣ್ಮರೆ: ಕೇಂದ್ರ ಕೊಟ್ಟ ಕೆಲಸ ಬಾಯಿ ಮುಚ್ಚಿಕೊಂಡು ಮಾಡಿ: ಕೈ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ಎಚ್ಚರಿಕೆ 5 ನಿಮಿಷದಲ್ಲಿ 12 ಕೋಟಿ ಚಿನ್ನಾಭರಣ ಲೂಟಿ: ದರೋಡೆಕೋರರ ಮಾಸ್ಟರ್ ಪ್ಲಾನ್! ಗರ್ಭಿಣಿಯರಿಗೆ 21,000, ಬಡ ಮಹಿಳೆಯರಿಗೆ 2500 ರೂ.: ಬಿಜೆಪಿ ಚುನಾವಣಾ ಪ್ರಣಾಳಿಕೆ ಘೋಷಣೆ ಬೀದರ್ ನಂತರ ಮಂಗಳೂರಿನಲ್ಲಿ ಹಾಡುಹಗಲೇ ಮುಸುಕುಧಾರಿಗಳಿಂದ ಬ್ಯಾಂಕ್ ದರೋಡೆ! ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿ ನುಡಿದಂತೆ ನಡೆದ ಸಿಎಂ 5 ಗಂಟೆ ಶಸ್ತ್ರಚಿಕಿತ್ಸೆ ನಂತರ ಸೈಫ್ ದೇಹದಿಂದ 2.5 ಇಂಚು ಉದ್ದದ ಚಾಕು ಹೊರತೆಗೆದ ವೈದ್ಯರು! ಫೆ.1ರಿಂದ ಏರ್ ಶೋ: ಯಲಹಂಕದ ನಿರ್ಮಾಣ ಹಂತದ ಕಟ್ಟಡಗಳ ಕ್ರೇನ್ ಚಟುವಟಿಕೆ ಸ್ಥಗಿತಕ್ಕೆ ಸೂಚನೆ ಅಬಕಾರಿ ಇಲಾಖೆಯಲ್ಲಿ ವರ್ಗಾವಣೆಗೆ ಹೊಸ ನಿಯಮ: ಸಚಿವ ಆರ್ ಬಿ ತಿಮ್ಮಾಪೂರ ನನ್ನ ಖಾಸಗಿ ವೀಡಿಯೊಗಳನ್ನು ಮರಳಿಸಿ: ಪ್ರಜ್ವಲ್ ರೇವಣ್ಣ ಮನವಿಗೆ ಹೈಕೋರ್ಟ್ ಚಾಟಿ!