ಸೂಕ್ತ ದಾಖಲೆಗಳೊಂದಿಗೆ ಭಾರತಕ್ಕೆ ಮರಳುತ್ತಿದ್ದ 54 ಇಸ್ಕಾನ್ ಸದಸ್ಯರನ್ನು ಬಾಂಗ್ಲಾದೇಶ ವಲಸೆ ಅಧಿಕಾರಿಗಳು ಗಡಿಯಲ್ಲಿ ತಡೆದಿದ್ದಾರೆ.
ಬಾಂಗ್ಲಾದೇಶ ವಸಲೆ ನಿಯಮದ ಪ್ರಕಾರ ದಾಖಲೆಗಳನ್ನು ತೋರಿಸಿ ಭಾರತಕ್ಕೆ ವಲಸೆ ಬರಲು ಯತ್ನಿಸಿದರೂ ಅನುಮಾನಸ್ಪದ ವಲಸೆ ಎಂಬ ಕಾರಣ ನೀಡಿ ಅವರನ್ನು ತಡೆದು ನಿಲ್ಲಿಸಲಾಗಿದೆ.
ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಇಸ್ಕಾನ್ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಇಸ್ಕಾನ್ ನ 54 ಸದಸ್ಯರು ಸೇರಿದಂತೆ 70 ಜನರು ಭಾರತಕ್ಕೆ ವಲಸೆ ಬರಲು ಯತ್ನಿಸುತ್ತಿದ್ದರು ಎಂದು ಹೇಳಲಾಗಿದೆ.
ಇಸ್ಕಾನ್ ನ ಮುಖ್ಯಸ್ಥರನ್ನು ಬಂಧಿಸಿದ ಬೆನ್ನಲ್ಲೇ ಅವರನ್ನು ನೋಡಲು ಜೈಲಿಗೆ ಹೋಗಿದ್ದ ಮತ್ತೊಬ್ಬ ಇಸ್ಕಾನ್ ಸದಸ್ಯರನ್ನು ಬಾಂಗ್ಲಾದೇಶ ಬಂಧಿಸಿತ್ತು. ನಂತರ ಇಸ್ಕಾನ್ ಹಾಗೂ ಸದಸ್ಯರ ಹೆಸರಿನಲ್ಲಿ ವಿವಿಧ ಬ್ಯಾಂಕ್ ಗಳಲ್ಲಿ ಹೊಂದಿದ್ದ ಖಾತೆಗಳನ್ನು 30 ದಿನಗಳ ಕಾಲ ಫ್ರೀಜ್ ಮಾಡಲಾಗಿದೆ.
ಬಾಂಗ್ಲಾದೇಶದಲ್ಲಿ ಇಸ್ಕಾನ್ ನಿಷೇಧಿಸಲು ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಇಸ್ಕಾನ್ ಸದಸ್ಯರನ್ನು ಕಟ್ಟಿಹಾಕುವ ಪ್ರಯತ್ನ ನಡೆದಿದೆ. ಈ ಬಗ್ಗೆ ಭಾರತ ಸರ್ಕಾರ ಕೂಡ ಆಕ್ಷೇಪ ವ್ಯಕ್ತಪಡಿಸಿದೆ.



