Wednesday, May 20, 2026
Google search engine
Homeಅಪರಾಧಬೆಂಗಳೂರು: ಗಂಡನಿಗೆ ಬುದ್ದಿ ಕಲಿಸಲು ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ

ಬೆಂಗಳೂರು: ಗಂಡನಿಗೆ ಬುದ್ದಿ ಕಲಿಸಲು ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ

ಗಂಡನಿಗೆ ಬುದ್ದಿ ಕಲಿಸಲು ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೋಡಿಗೆಹಳ್ಳಿ ಗೇಟ್ ಬಳಿ ತುಮಕೂರು ಮೂಲದ ಸುರೇಶ್ ಹಾಗೂ ಬೆಂಗಳೂರಿನ ಮತ್ತಿಕೆರೆ ಮೂಲದ ಕುಸುಮಾ ದಂಪತಿ ವಾಸವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು ಇದ್ದರು.

ವೈಟ್ ಫೀಲ್ಡ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಸುರೇಶ್ ತಾಯಿ ನಿಧನರಾದ ಮಾರನೇ ದಿನವೇ ಪತ್ನಿ ಕುಸುಮಾ [೩೫] ತನ್ನ ಇಬ್ಬರು ಮಕ್ಕಳಾದ ಶ್ರೀಯಾನ್ (6) ಹಾಗೂ ಮಗಳು ಚಾರ್ವಿ (1 ವರ್ಷ) ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸುರೇಶ್ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿದ್ದಾನೆ. ಇದರಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕುಸುಮಾ ನನ್ನನ್ನು ಕಡೆಗಣಿಸಿದ್ದಾರೆ ಎಂದು ಅಸಮಾಧಾನಕ್ಕೆ ಒಳಗಾಗಿದ್ದಾರೆ.

ಗಂಡನಿಗೆ ಹೆಂಡತಿ ಮಕ್ಕಳು ಇಲ್ಲದಿದ್ದರೆ ಹೇಗೆ ಎಂದು ಬುದ್ದಿ ಕಲಿಸಲು ಈ ವಿಪರೀತದ ನಿರ್ಧಾರಕ್ಕೆ ಹೋಗಿದ್ದಾಳೆ ಎಂದು ಪೊಲೀಸರು ಹೇಳಿದ್ದು, ಮೃತರ ಶವಗಳನ್ನು ಮೃಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಕುಸಮಾ ಬರೆದಿಟ್ಟ ಡೆತ್ ನೋಟ್‌ನಲ್ಲಿ ‘Congrats your ego wins’ ಎಂದು ಉಲ್ಲೇಖ ಮಾಡಿದ್ದಾಳೆ. ಅಂದರೆ, ಗಂಡನಿಗೆ ನಿನ್ನ ಇಗೋ ಗೆದ್ದಿದೆ ಎಂದು ಹೇಳಿದ್ದಾಳೆ. ಜೊತೆಗೆ, ಗಂಡನಿಗೆ ಬುದ್ಧಿ ಕಲಿಸಲು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಅತ್ತೆ (ಗಂಡನ ತಾಯಿ) ಸತ್ತ ದಿನವೇ ಮಕ್ಕಳನ್ನು ಸಾಯಿಸಿ ತಾನು ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದಾಳೆ. ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments