Sunday, August 30, 2026
Google search engine
Homeಕಾನೂನುಧಾರ್ಮಿಕ ಸ್ಥಳ ಕಾಯ್ದೆ ವಿಚಾರಣೆ ಮುಗಿಯದೇ ಹೊಸ ಮೊಕದ್ದಮೆ ದಾಖಲಿಸುವಂತಿಲ್ಲ: ಸುಪ್ರೀಂಕೋರ್ಟ್

ಧಾರ್ಮಿಕ ಸ್ಥಳ ಕಾಯ್ದೆ ವಿಚಾರಣೆ ಮುಗಿಯದೇ ಹೊಸ ಮೊಕದ್ದಮೆ ದಾಖಲಿಸುವಂತಿಲ್ಲ: ಸುಪ್ರೀಂಕೋರ್ಟ್

ಧಾರ್ಮಿಕ ಪೂಜಾ ಸ್ಥಳಗಳ ಕಾಯ್ದೆ ಕುರಿತು ವಿಚಾರಣೆ ಮುಗಿಯುವವರೆಗೂ ಯಾವುದೇ ಹೊಸ ಮೊಕದ್ದಮೆ ದಾಖಲಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಪಿವಿ ಸಂಜಯ್ ಕುಮಾರ್, ನ್ಯಾಯಮೂರ್ತಿ ವಿಶ್ವನಾಥನ್ ಅವರನ್ನೊಳಗೊಂಡ ವಿಭಾಗೀಯ ಪೀಠ 1991ರ ಧಾರ್ಮಿಕ ಪೂಜಾ ಕೇಂದ್ರ ಕಾಯ್ದೆ ಕುರಿತ ವಿಚಾರಣೆ ಮುಗಿಯುವವರೆಗೂ ಹೊಸ ಮೊಕದ್ದಮೆ ದಾಖಲಿಸುವಂತಿಲ್ಲ ಎಂದು ತಿಳಿಸಿದೆ.

ಧಾರ್ಮಿಕ ಪೂಜಾ ಸ್ಥಳ ಕುರಿತ ಕಾಯ್ದೆ ಕುರಿತ ಅರ್ಜಿ ಜೊತೆಗೆ ರಾಮಜನ್ಮಭೂಮಿ ವಿವಾದವೂ ನಮ್ಮ ಮುಂದಿದೆ. ಈ ಪ್ರಕರಣಗಳು ಇತ್ಯರ್ಥ ಆಗುವವರೆಗೂ ಹೊಸದಾಗಿ ಯಾವುದೇ ಧಾರ್ಮಿಕ ಪೂಜಾ ಸ್ಥಳ ವಿವಾದ ಕುರಿತು ಪ್ರಕರಣ ಕೈಗೆತ್ತಿಕೊಳ್ಳುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments