Tuesday, 17 November 2026 — Kannadavahini
BREAKING NEWS
ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ
ಬೆಂಗಳೂರು

ಬೆಂಗಳೂರಿನಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ: ಜಾಲಿ ರೈಡಿಗೆ 5 ಸ್ನೇಹಿತರು ಬಲಿ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 34 ವೀಕ್ಷಣೆಗಳು
bengaluru accident

ಜಾಲಿ ರೈಡಿಗೆ 7 ಮಂದಿ ಮೃತಪಟ್ಟ ದಾರುಣ ಘಟನೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತಕ್ಕೆ 5 ಯುವಕರು ಮೃತಪಟ್ಟ ದಾರುಣ ಘಟನೆ ಮಹಾಶಿವರಾತ್ರಿಯಂದೇ ಸಂಭವಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ- ದಾಬಸ್‌ ಪೇಟೆ ಹೆದ್ದಾರಿಯಲ್ಲಿ 2 ದಿನಗಳ ಹಿಂದೆ ನಡೆದ ಜಾಲಿ ರೈಡಿಗೆ 6 ಯುವಕರು ಸೇರಿ 7 ಮಂದಿ ಅಸುನೀಗಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಜಾಲಿ ರೈಡಿಗೆ ಹೊರಟ ಯುವಕರ ಕಾರು ಅಪಘಾತಕ್ಕೆ ಒಳಗಾಗಿ 5 ಮಂದಿ ಅಸುನೀಗಿದ್ದಾರೆ.

ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಜಿಂದಾಲ್ ಬಳಿಯ ಫ್ಲೈಓವರ್ ಮೇಲೆ ಶನಿವಾರ ರಾತ್ರಿ 12 ಗಂಟೆ ಸುಮಾರಿಗೆ ಅತಿವೇಗದಲ್ಲಿ ಚಲಿಸುತ್ತಿದ್ದ ಕಾಋು ಡಿವೈಡರ್​ಗೆ ಡಿಕ್ಕಿ ಹೊಡೆದು ಎದುರಿಗೆ ಬರುತ್ತಿದ್ದ ಕೆಎಸ್​​ಆರ್​ಟಿಸಿ ಬಸ್​ಗೆ ಗುದ್ದಿದೆ.

ಅಪಘಾತದಲ್ಲಿ ದೊಡ್ಡಬಳ್ಳಾಪುರ ನಿವಾಸಿಗಳಾದ ದುರ್ಗಾ ಪ್ರಸಾದ್ (20), ಕೇಶವ್ (19), ಲಲಿತ್ (22), ಹರ್ಷಿತ್ (20) ಹಾಗೂ ಧನುಷ್ (20) ಮೃತಪಟ್ಟಿದ್ದಾರೆ.

ತುಮಕೂರು ಕಡೆಯಿಂದ ಬೆಂಗಳೂರಿನತ್ತ ಬರುತ್ತಿದ್ದ ಇಂಡಿಕಾ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಗುದ್ದಿದ್ದ ವೇಗಕ್ಕೆ ಹಾರಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಕೆಎಸ್​​ಆರ್​​ಟಿಸಿ ಬಸ್​ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಯುವಕ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಬಸ್​ನ ಮುಂಭಾಗ ಸಹ ಜಖಂ ಆಗಿದೆ. ಬಸ್​ನಲ್ಲಿದ್ದ 43 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಸ್ನೇಹಿತರೆಲ್ಲರೂ ಜೊತೆಯಾಗಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8420 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment