Tuesday, 17 November 2026 — Kannadavahini
BREAKING NEWS
ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ
ಬೆಂಗಳೂರು

ಟ್ಯಾಲಿ ಸಲ್ಯೂಶನ್ಸ್ ನಿಂದ ಎಂಎಸ್‌ಎಂಇಗಳಲ್ಲಿ ಡಿಜಿಟಲ್ ಆವಿಷ್ಕಾರ ವರ್ಧಿಸಿದ ಬೆಂಗಳೂರಿನ ತೆರಿಗೆ ತಜ್ಞೆರಿಗೆ ಸನ್ಮಾನ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
3 ನಿಮಿಷ ಓದು 32 ವೀಕ್ಷಣೆಗಳು
msme
msme

ಬಿಜಿನೆಸ್ ಮ್ಯಾನೇಜ್ಮೆಂಟ್ ಸಾಫ್ಟ್‌ವೇರ್(BMS) ಪರಿಸರವ್ಯವಸ್ಥೆಯಲ್ಲಿ ಮುಂಚೂಣಿ ತಂತ್ರಜ್ಞಾನ ಸಂಸ್ಥೆಯಾದ ಟ್ಯಾಲಿ ಸಲ್ಯೂಶನ್ಸ್, ಲೆಕ್ಕಪತ್ರ ನಿರ್ವಹಣೆಯನ್ನು ಹಾಗೂ ಭಾರತದ ಮೈಕ್ರೋ, ಸ್ಮಾಲ್ ಮತ್ತು ಮೀಡಿಯಮ್ ಎಂಟರ್ ಪ್ರೈಸಸ್(MSME)ಗಳ ಅನುಸರಣಾ ಅಗತ್ಯಗಳನ್ನು ಹೆಚ್ಚಿಸಲು ತಂತ್ರಜ್ಞಾನದ ಅಳವಡಿಕೆಯನ್ನು ಮುನ್ನಡೆಸುವಲ್ಲಿ ಬೆಂಗಳೂರಿನ ತೆರಿಗೆ ಮತ್ತು ಲೆಕ್ಕಪತ್ರ ಸಮುದಾಯದ ಮಹತ್ತರ ಕೊಡುಗೆಗಳನ್ನು ಗುರುತಿಸಿ ಆಚರಿಸಿದೆ.

GSTPಗಳು, ಲೆಕ್ಕಪತ್ರ ಪರಿಶೋಧಕರು, ತೆರಿಗೆ ಪ್ರತಿಪಾದಕರು ಹಾಗೂ ಇತರ ವೃತ್ತಿಪರರ ಅಮೋಘ ಕೆಲಸವನ್ನು ಗುರುತಿಸಿ ಟ್ಯಾಲಿ ಸಲ್ಯೂಶನ್ಸ್, ಅವರ ಶ್ರಮಗಳಿಗೆ ಗೌರವ ಸಲ್ಲಿಸುವುದಕ್ಕಾಗಿ ‘Tax and Accounting Titans’ ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು. ಕಾರ್ಯಕ್ರಮವು, ತಮ್ಮ ವೃತ್ತಿಗೆ ನಿದರ್ಶನೀಯ ಬದ್ಧತೆ ಹಾಗೂ ನಿಷ್ಠೆ ಪದರ್ಶಿಸಿರುವ ಬೆಂಗಳೂರಿನ 10 ಪ್ರತಿಷ್ಠಿತ ವೃತ್ತಿಪರರ ಸಾಧನೆಗಳನ್ನು ಗುರುತಿಸಿ ಆಚರಿಸಿತು.

ಈ ಉಪಕ್ರಮದ ಕುರಿತು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಳ್ಳುತ್ತಾ, ಟ್ಯಾಲಿ ಸಲ್ಯೂಶನ್ಸ್‌ನ ದಕ್ಷಿಣ ವಲಯದ ಜನರಲ್ ಮ್ಯಾನೇಜರ್ ಅನಿಲ್ ಭಾರ್ಗವನ್, “ಬೆಂಗಳೂರಿನ ತೆರಿಗೆ ಮತ್ತು ಲೆಕ್ಕಪತ್ರ ಸಮುದಾಯದ ಅದ್ವಿತೀಯ ಕೊಡುಗೆಗಳನ್ನು ಆಚರಿಸುವುದಕ್ಕೆ ನಮಗೆ ಅತ್ಯಂತ ಹರ್ಷವಾಗುತ್ತಿದೆ. ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಮಾಡಿದ ಅವರ ಬದ್ಧತೆಯು, ಸವಾಲುಗಳನ್ನು ಎದುರಿಸಿ ಇಂದಿನ ಕ್ರಿಯಾಶೀಲ ಪರಿಸರದಲ್ಲಿ ಬದುಕುಳಿಯಲು ಎಮ್‌ಎಸ್‌ಎಮ್‌ಇಗಳಿಗೆ ಬಲನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ನಮ್ಮ ‘Tax and Accounting Titans’ ಉಪಕ್ರಮದ ಮೂಲಕ ನಾವು ಕೇವಲ ವೈಯಕ್ತಿಕ ಅತ್ಯುತ್ಕೃಷ್ಟತೆಯನ್ನು ಮಾತ್ರವಲ್ಲದೆ, ನಮ್ಮ ಉದ್ದಿಮೆಯಲ್ಲಿ ಪ್ರಗತಿಯನ್ನು ಮುನ್ನಡೆಸುವ ಸಂಘಟಿತ ಪ್ರಯತ್ನಗಳನ್ನೂ ಗೌರವಿಸುತ್ತಿದ್ದೇವೆ. ಒಂದುಗೂಡಿ ನಾವು, ಎಲ್ಲಾ ವ್ಯಾಪಾರ ಸಂಸ್ಥೆಗಳಿಗೂ ದೀರ್ಘಕಾಲ ಉಳಿಯುವಂತಹ ಬೆಳವಣಿಗೆ ಹಾಗೂ ಅನುಸರಣೆಗಾಗಿ ತಂತ್ರಜ್ಞಾನ ಅಳವಡಿಕೆಗೆ ಎಡೆಮಾಡಿಕೊಡುವ ಪರಿಸರವ್ಯವಸ್ಥೆಯನ್ನು ಪ್ರೋತ್ಸಾಹಿಸುವುದಕ್ಕೆ ಬದ್ಧರಾಗಿದ್ದೇವೆ.” ಎಂದು ಹೇಳಿದರು.

ವಹಿಸಿದೆ. ನಮ್ಮ ‘Tax and Accounting Titans’ ಉಪಕ್ರಮದ ಮೂಲಕ ನಾವು ಕೇವಲ ವೈಯಕ್ತಿಕ ಅತ್ಯುತ್ಕೃಷ್ಟತೆಯನ್ನು ಮಾತ್ರವಲ್ಲದೆ, ನಮ್ಮ ಉದ್ದಿಮೆಯಲ್ಲಿ ಪ್ರಗತಿಯನ್ನು ಮುನ್ನಡೆಸುವ ಸಂಘಟಿತ ಪ್ರಯತ್ನಗಳನ್ನೂ ಗೌರವಿಸುತ್ತಿದ್ದೇವೆ. ಒಂದುಗೂಡಿ ನಾವು, ಎಲ್ಲಾ ವ್ಯಾಪಾರ ಸಂಸ್ಥೆಗಳಿಗೂ ದೀರ್ಘಕಾಲ ಉಳಿಯುವಂತಹ ಬೆಳವಣಿಗೆ ಹಾಗೂ ಅನುಸರಣೆಗಾಗಿ ತಂತ್ರಜ್ಞಾನ ಅಳವಡಿಕೆಗೆ ಎಡೆಮಾಡಿಕೊಡುವ ಪರಿಸರವ್ಯವಸ್ಥೆಯನ್ನು ಪ್ರೋತ್ಸಾಹಿಸುವುದಕ್ಕೆ ಬದ್ಧರಾಗಿದ್ದೇವೆ.” ಎಂದು ಹೇಳಿದರು.

ವಿಜೇತರನ್ನು ಮೂರು ವರ್ಗಗಳಾದ್ಯಂತ ಗೌರವಿಸಲಾಯಿತು-ಅಕೌಂಟಿಂಗ್ ಮಾಸ್ಟ್ರೊ: ಕಾಲದೊಡನೆ ಗಟ್ಟಿಯಾಗಿ ನಿಂತ ಮತ್ತು 15ಕ್ಕಿಂತ ಹೆಚ್ಚಿನ ವರ್ಷಗಳಿಂದ ಎಮ್‌ಎಸ್‌ಎಮ್‌ಇಗಳು ಬೆಳೆಯಲು ನೆರವಾಗುತ್ತಲೇ ಇರುವ ಧುರೀಣರನ್ನು ಗೌರವಿಸುವುದು. ಎಮರ್ಜಿಂಗ್ ಸ್ಟಾರ್ಸ್(ವಿಕಸನಶೀಲ ತಾರೆಗಳು): 5 ವರ್ಷಕ್ಕಿಂತ ಕಡಿಮೆ ಸಮಯದ ಹಿಂದೆ ತಮ್ಮ ವೃತ್ತಿಯನ್ನು ಆರಂಭಿಸಿ, ಮಾರುಕಟ್ಟೆ ಅಂತರವನ್ನು ಗುರುತಿಸಿ, ತಮ್ಮ ಗ್ರಾಹಕರಿಗೆ ನೆರವಾಗಿರುವ ಹೊಸ ಪೀಳಿಗೆGSTPಗಳನ್ನು ಗೌರವಿಸುವುದು. ಮತ್ತು, ಟೆಕ್ ಇನೋವೇಟರ್: ಅತ್ಯುತ್ಕೃಷ್ಟ ಫಲಿತಾಂಶಗಳನ್ನು ನೀಡುವ ಆಧುನಿಕ ತಂತ್ರಜ್ಞಾನಗಳಲ್ಲಿ ಪರಿಣಿತರಾದ GSTPಗಳನ್ನು ಗೌರವಿಸುವುದು.

ಭಾರತದ ಸಿಲಿಕಾನ್ ಕಣಿವೆ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರು, ತಂತ್ರಜ್ಞಾನ, ಆವಿಷ್ಕಾರ ಮತ್ತು ಉದ್ಯಮ ಸ್ಟಾರ್ಟ್_ಅಪ್‌ಗಳಿಗೆ ಸೂಕ್ತವಾದ ವ್ಯಾಪಾರ ಗಮ್ಯವಾಗಿದೆ. ತನ್ನ ಪ್ರಖರ ಐಟಿ ಕ್ಷೇತ್ರ, ಶೈಕ್ಷಣಿಕ ಸಂಸ್ಥೆಗಳು ಹಾಗೂ ಸ್ಟಾರ್ಟ್-ಅಪ್ ಪರಿಸರವ್ಯವಸ್ಥೆಗೂ ಇದು ಹೆಸರುವಾಸಿಯಾಗಿದೆ. GSTP ಸಮುದಾಯದ ಜೊತೆಗೂಡಿ, ಟ್ಯಾಲಿ ಸಲ್ಯೂಶನ್ಸ್, ವ್ಯಾಪಾರ ಸಂಸ್ಥೆಗಳಿಗಾಗಿ ತಂತ್ರಜ್ಞಾನ ಅಳವಡಿಕೆಯನ್ನು ಮುನ್ನಡೆಸಿ ಅನುಸರಣಾ ಪ್ರಕ್ರಿಯೆಗಳನ್ನು ಸ್ಟ್ರೀಮ್‌ಲೈನ್ ಮಾಡಿ, ಡಿಜಿಟಲ್ ಯುಗದಲ್ಲಿ ಅವರು ಸದಾ ಬದಲಾಗುತ್ತಿರುವ ಮಾರುಕಟ್ಟೆ ಪರಿಸರದಲ್ಲಿ ಸ್ಪರ್ಧಾತ್ಮಕವಾಗಿ ಉಳಿದುಕೊಳ್ಳಲು ನೆರವಾಗುವಲ್ಲಿ ಮಾರ್ಗಪಥಿಕರಾಗಿದ್ದಾರೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8420 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment