Sunday, June 28, 2026
Google search engine
Homeಮನರಂಜನೆಬೆಟ್ಟಿಂಗ್ ಆಪ್ ಪ್ರಮೋಷನ್: 100ಕ್ಕೂ ರೀಲ್ಸ್ ಸ್ಟಾರ್ ಗಳಿಗೆ ನೋಟಿಸ್ ಜಾರಿ!

ಬೆಟ್ಟಿಂಗ್ ಆಪ್ ಪ್ರಮೋಷನ್: 100ಕ್ಕೂ ರೀಲ್ಸ್ ಸ್ಟಾರ್ ಗಳಿಗೆ ನೋಟಿಸ್ ಜಾರಿ!

ಅಕ್ರಮ ಬೆಟ್ಟಿಂಗ್ ಆಪ್ ಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಿಂದ ಪ್ರಮೋಷನ್ ಮಾಡಿದ್ದಕ್ಕಾಗಿ 100ಕ್ಕೂ ಹೆಚ್ಚು ರೀಲ್ಸ್ ಸ್ಟಾರ್ ಗಳಿಗೆ ಬೆಂಗಳಳೂರು ಕ್ರೈಂ ಬ್ರ್ಯಾಂಚ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಂ ಪೇಜ್‌ಗಳಲ್ಲಿ ಜನರನ್ನು ವಂಚಿಸುವ ಐಪಿಎಲ್ ಬೆಟ್ಟಿಂಗ್ ಆಪ್ ಪರ ಜಾಹೀರಾತು ಬಿತ್ತರಿಸಿದ್ದ ಸೋನು ಗೌಡ ಸೇರಿದಂತೆ ಹಲವು ರೀಲ್ಸ್ ಸ್ಟಾರ್‌ಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಸೋನು ಶ್ರೀನಿವಾಸ್‌ಗೌಡ, ದೀಪಕ್‌ಗೌಡ, ವರುಣ್ ಆರಾದ್ಯ, ದಚ್ಚು ಸೇರಿ ನೂರಕ್ಕು ಹೆಚ್ಚು ಮಂದಿ ರೀಲ್ಸ್ ಸ್ಟಾರ್‌ಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿದ್ದಾರೆ.
ವಿಚಾರಣೆ ವೇಳೆ ಮುಂದಿನ ದಿನಗಳಲ್ಲಿ ಇಂತಹ ಜಾಹೀರಾತುಗಳನ್ನು ನಾವು ಪ್ರಮೋಷನ್ ಮಾಡುವುದಿಲ್ಲ. ಈ ಜಾಹೀರಾತುಗಳು ಜನರನ್ನು ವಂಚಿಸುತ್ತವೆ ಎಂಬ ಮಾಹಿತಿ ಅಥವಾ ಅರಿವು ಇರಲಿಲ್ಲ. ಈಗಾಗಲೇ ಅಂತಹ ಜಾಹಿರಾತುಗಳನ್ನು ಡಿಲಿಟ್ ಮಾಡಲಾಗಿದೆ ಎಂದು ರೀಲ್ಸ್ ಸ್ಟಾರ್ ಗಳು ಹೇಳಿಕೊಂಡಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments