Sunday, June 28, 2026
Google search engine
Homeರಾಜ್ಯಬಿಜೆಪಿ ಮುಖಂಡ ಆರ್.ಅಶೋಕ್‌ ಬೆಂಗಾವಲು ಪಡೆ ಚಾಲಕ ಆತ್ಮಹತ್ಯೆ

ಬಿಜೆಪಿ ಮುಖಂಡ ಆರ್.ಅಶೋಕ್‌ ಬೆಂಗಾವಲು ಪಡೆ ಚಾಲಕ ಆತ್ಮಹತ್ಯೆ

ಬಿಜೆಪಿ ಮುಖಂಡ ಹಾಗೂ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಅವರ ಪೊಲೀಸ್‌ ಬೆಂಗಾವಲು ಪಡೆಯ ಚಾಲಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬಾಪೂಜಿನಗರದ ಮನೆಯಲ್ಲಿ ಪೊಲೀಸ್‌ ಪೇದೆ ಶರಣಪ್ಪ ರಾಮಗೋಳ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬ್ಯಾಟರಾಯನಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕಲಬರುಗಿ ಮೂಲದ ಪೇದೆ ಶರಣಪ್ಪ ರಾಮಗೋಳ್ ಬ್ಯಾಟರಾಯನಪುರದ ಕವಿಕಾ ಲೇಔಟ್ ನಲ್ಲಿ ಪತ್ನಿ ಹಾಗೂ 2, 4 ವರ್ಷದ 2 ಮಕ್ಕಳಿದ್ದಾರೆ., ಮಕ್ಕಳು ಹಾಗೂ ಸಹೋದರನ ಜೊತೆ ನೆಲೆಸಿದ್ದರು. ಸಿಎಆರ್‌ನಲ್ಲಿ ಮುಖ್ಯಪೇದೆ ಆಗಿದ್ದ ಶರಣಪ್ಪ, ಕಳೆದ 5 ವರ್ಷದಿಂದ ಆರ್.ಅಶೋಕ್‌ ಅವರ ಬೆಂಗಾವಲು ವಾಹನದ ಚಾಲಕರಾಗಿದ್ದರು.

ದಸರಾ ರಜೆ ಅಂಗವಾಗಿ ಮಕ್ಕಳನ್ನು ಕಲಬುರಗಿಗೆ ಕಳುಹಿಸಲಾಗಿದ್ದು, ಪತ್ನಿ ಕೆಲಸಕ್ಕೆ ಹೋದ್ದ ವೇಳೆ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಪೇದೆ ಶರಣಾಗಿದ್ದಾರೆ ಶರಣಪ್ಪ. ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಾಳೆ ಬೆಳಗ್ಗೆ ಪೋಸ್ಟ್ ಮಾರ್ಟಂ ನಡೆಯಲಿದೆ. ಅತ್ತ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments