Wednesday, May 20, 2026
Google search engine
Homeಕ್ರೀಡೆಆಸ್ಟ್ರೇಲಿಯಾ ತೊರೆಯಲು 58 ಕೋಟಿ ಆಮೀಷ ತಿರಸ್ಕರಿಸಿದ ಪ್ಯಾಟ್‌ ಕಮಿನ್ಸ್‌, ಟ್ರಾವಿಸ್‌ ಹೆಡ್!

ಆಸ್ಟ್ರೇಲಿಯಾ ತೊರೆಯಲು 58 ಕೋಟಿ ಆಮೀಷ ತಿರಸ್ಕರಿಸಿದ ಪ್ಯಾಟ್‌ ಕಮಿನ್ಸ್‌, ಟ್ರಾವಿಸ್‌ ಹೆಡ್!

ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿ ಕ್ರಿಕೆಟ್‌ ಆಸ್ಟ್ರೇಲಿಯಾ ತೊರೆಯಲು ಐಪಿಎಲ್‌ ತಂಡವೊಂದು ನೀಡಿದ್ದ ವಾರ್ಷಿಕ 58 ಕೋಟಿ ರೂ.ಗಳ ಆಮೀಷವನ್ನು ಸ್ಟಾರ್‌ ಆಟಗಾರರಾದ ಪ್ಯಾಟ್‌ ಕಮಿನ್ಸ್‌ ಮತ್ತು ಟ್ರಾವಿಸ್‌ ತಿರಸ್ಕರಿಸಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಟಿ-20ಯ ವಿವಿಧ ಟೂರ್ನಿಗಳಲ್ಲಿ ತಂಡವನ್ನು ಪ್ರತಿನಿಧಿಸುವಂತೆ ಐಪಿಎಲ್‌ ತಂಡ ನೀಡಿದ್ದ ಆಮೀಷವನ್ನು ನಯವಾಗಿ ತಿರಸ್ಕರಿಸಿರುವ ಈ ಇಬ್ಬರೂ ಆಟಗಾರರು ದೇಶದ ಪರ ಆಡುವುದನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದರು.

ಕಳೆದ ಐಪಿಎಲ್‌ ನಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಪ್ಯಾಟ್‌ ಕಮಿನ್ಸ್‌ ಮತ್ತು ಟ್ರಾವಿಸ್‌ ಹೆಡ್‌ ಆಟವಾಡಿದ್ದರು. ಇಬ್ಬರು ಆಟಗಾರರು ತಲಾ 18 ಮತ್ತು 14 ಕೋಟಿ ರೂ.ಗೆ ಖರೀದಿಸಲಾಗಿತ್ತು.

ವಾರ್ಷಿಕ ಗುತ್ತಿಗೆ ಪ್ರಕಾರ ಈ ಇಬ್ಬರೂ ಆಟಗಾರರು ಕ್ರಿಕೆಟ್‌ ಆಸ್ಟ್ರೇಲಿಯಾದಿಂದ ಒಟ್ಟಾರೆ 8.24 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಪ್ಯಾಟ್‌ ಕಮಿನ್ಸ್‌ ಆಸ್ಟ್ರೇಲಿಯಾ ಪರ ಆಡಲು ಎಲ್ಲಾ ಮಾದರಿಯ ಕ್ರಿಕೆಟ್‌ ನಿಂದ 3 ದಶಲಕ್ಷ ಡಾಲರ್‌ ಅಂದರೆ ಸುಮಾರು 17.48 ಕೋಟಿ ರೂ. ಗಳಿಸುತ್ತಿದ್ದಾರೆ.

ಆಸ್ಟ್ರೇಲಿಯಾ ಐಪಿಎಲ್‌ ಗೆ ಪ್ರತಿಯಾಗಿ ಬಿಬಿಎಲ್‌ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಇಲ್ಲಿ ಆಸ್ಟ್ರೇಲಿಯಾ ಆಟಗಾರರು ಟಿ20 ಕ್ರಿಕೆಟ್‌ ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಕಾರಿ ಆಗುತ್ತಿದೆ.

ಐಪಿಎಲ್‌ ತಂಡ ನೀಡಿದ ಆಮೀಷ ಅತೀ ದೊಡ್ಡ ಮೊತ್ತವಾಗಿದ್ದು, ಆಸ್ಟ್ರೇಲಿಯಾ ಪರ ಅತ್ಯಧಿಕ ಸಂಭಾವನೆ ಪಡೆಯುತ್ತಿರುವ ಈ ಇಬ್ಬರೂ ಆಟಗಾರರಿಗೆ ಮೂರು ಪಟ್ಟು ಹೆಚ್ಚು ಮೊತ್ತ ನೀಡುವುದಾಗಿ ಭರವಸೆ ನೀಡಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments