ಗೃಹ ಸಚಿವರ ತವರಿನಲ್ಲಿ ರಸ್ತೆಯಲ್ಲಿ ತುಂಡು ತುಂಡಾಗಿ ಬಿದ್ದಿದ್ದ ಮಾಂಸದ ತುಂಡು ಪ್ರಕರಣವನ್ನು ಭೇದಿಸಿ ತುಮಕೂರು ಪೊಲೀಸರು ಕೊಲೆ ಆರೋಪಿ ದಂತ ವೈದ್ಯನನ್ನು ಬಂಧಿಸಿದ್ದಾರೆ.
ಮೃತಪಟ್ಟ ಮಾಂಸದ ತುಂಡುಗಳು ಲಕ್ಷ್ಮಿದೇವಮ್ಮ(42) ಎಂಬ ಮಹಿಳೆಯದ್ದಾಗಿದ್ದು, ಪತಿ ದಂತ ವೈದ್ಯ ರಾಮಚಂದ್ರಯ್ಯ, ಸತೀಶ್ ಮತ್ತು ಕಿರಣ್ ಅವರನ್ನು ಬಂಧಿಸಲಾಗಿದೆ.
ಅತ್ತೆ ಕಾಟಕ್ಕೆ ಬೇಸತ್ತು ಅಳಿಯ ರಾಮಚಂದ್ರಯ್ಯ ಪತ್ನಿಯನ್ನು ಕೊಂದು ತುಂಡು ತುಂಡಾಗಿ ರಸ್ತೆಯಲ್ಲಿ ಬಿಸಾಡಿದ್ದ ಎಂಬುದು ತಿಳಿದು ಬಂದಿದೆ.
ಇತ್ತೀಚೆಗೆ ಕೊರಟಗೆರೆಯ ಚಿಂಪುಗಾನಹಳ್ಳಿಯ ಮುತ್ಯಾಲಮ್ಮ ದೇವಸ್ಥಾನದ ಬಳಿಯಿಂದ ಸಿದ್ದರಬೆಟ್ಟದ ರಸ್ತೆ ತನಕ, ಅಂದರೇ ಸರಿಸುಮಾರು 30ಕ್ಕೂ ಹೆಚ್ಚು ಕಿಲೋ ಮೀಟರ್ ವ್ಯಾಪ್ತಿಯಲ್ಲಿ, 17 ಸ್ಥಳಗಳಲ್ಲಿ ಕಪ್ಪು, ಹಳದಿ ಕವರ್ ಗಳಲ್ಲಿ ಮಹಿಳೆ ದೇಹದ ಅಂಗಾಂಗಳು ದೊರಕಿದ್ದವು. ಈ ಘಟನೆಯಿಂದ ಇಡೀ ತುಮಕೂರೇ ಬೆಚ್ಚಿಬಿದ್ದಿತ್ತು.
ಅತ್ತೆ ಕಾಟಕ್ಕೆ ಬೇಸತ್ತ ದಂತ ವೈದ್ಯ ಅಳಿಯ ರಾಮಚಂದ್ರಯ್ಯ, ತನ್ನ ಸ್ನೇಹಿತರಾದ ಸತೀಶ್ ಮತ್ತು ಕಿರಣ್ ಜೊತೆ ಸೇರಿ ಕೊಲೆ ಮಾಡಿ ಮೂರು ದಿನಗಳ ಶವವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಆಗಸ್ಟ್ 6ರಂದು ದೇಹವನ್ನು ತುಂಡು ಮಾಡಿ ಕವರ್ ನಲ್ಲಿ ಸುತ್ತಿ ರಸ್ತೆಯಲ್ಲಿ ಬಿಸಾಡಿಕೊಂಡು ಹೋಗಿದ್ದರು. ಬಳಿಕ ರಾಮಚಂದ್ರ ಧರ್ಮಸ್ಥಳಕ್ಕೆ ತೆರಳಿದ್ದ. ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಣೆ ಮಾಡಿದ ಪೊಲೀಸರು, ಈ ವೇಳೆ ಸಂಗತಿ ಬಯಲಾಗಿದೆ.
ಆ.3ರಂದು ಮೃತರ ಕುಟುಂಬಸ್ಥರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಆ.7ರಂದು ಚಿಂಪುಗಾನಹಳ್ಳಿ ಬಳಿ ದೇಹದ ಒಂದು ಕೈ ಪತ್ತೆಯಾಗಿತ್ತು. ಕೈ ಕಂಡ ಕುಟುಂಬಸ್ಥರು ಲಕ್ಷ್ಮೀದೇವಮ್ಮಳದ್ದಲ್ಲ ಎಂದಿದ್ದರು. ಬಳಿಕ ಅದು ಲಕ್ಷ್ಮೀದೇವಮ್ಮಳದ್ದು ಎಂಬುದಾಗಿ ಗೊತ್ತಾಗಿದೆ. ಇನ್ನು 30 ಕಿ.ಮೀ ವ್ಯಾಪ್ಯಿಯ ಹಲವೆಡೆ ದೇಹದ ತುಂಡು ಪತ್ತೆಯಾಗಿದ್ದವು. ಪೊಲೀಸರ ದಿಕ್ಕು ತಪ್ಪಿಸಲು ಹಂತಕರು ಯತ್ನಿಸಿದ್ದರು. ಬಳಿಕ ಕಾರ್ಯಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.



