Wednesday, July 1, 2026
Google search engine
Homeದೇಶಬಿಆರ್‌ಎಸ್ ನಾಯಕ ರಾಮರಾವ್, ಹರೀಶ್‌ಗೆ ಗೃಹಬಂಧನ

ಬಿಆರ್‌ಎಸ್ ನಾಯಕ ರಾಮರಾವ್, ಹರೀಶ್‌ಗೆ ಗೃಹಬಂಧನ

ಬಿಆರ್‌ಎಸ್ ಪಕ್ಷದ ಶಾಸಕ ಪಿ.ಕೌಶಿಕ್ ರೆಡ್ಡಿ ಅವರ ಬಂಧನದ ಬೆನ್ನಲ್ಲೇ ಮಾಜಿ ಸಿಎಂ ಕೆಸಿಆರ್ ಪುತ್ರ ಕೆ.ಟಿ.ರಾಮರಾವ್ ಮತ್ತು ಸೋದರಳಿಯ ಟಿ.ಹರೀಶ್ ರಾವ್ ಅವರನ್ನು ಮಂಗಳವಾರ ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದಾರೆ.

ಮಾಜಿ ಸಚಿವರಾದ ರಾಮರಾವ್ ಹಾಗೂ ಹರೀಶ್ ರಾವ್ ಅವರನ್ನು ಹೈದರಾಬಾದ್ ಅವರ ನಿವಾಸದಲ್ಲಿ ಗೃಹಬಂಧನಕ್ಕೆ ಒಳಪಡಿಸಲಾಗಿದೆ ಎಂದು ಬಿಆರ್‌ಎಸ್ ತಿಳಿಸಿದೆ.

ಕರೀಂ ನಗರದಲ್ಲಿ ನಡೆದ ಜಿಲ್ಲಾ ಪರಿಶೀಲನಾ ಸಮಿತಿ ಸಭೆಯಲ್ಲಿ ಜಗ್ತಿಯಾಲ್ ಶಾಸಕ ಸಂಜಯ್ ಕುಮಾರ್ ಅವರನ್ನು ನಿಂದಿಸಿದ ಆರೋಪದ ಮೇಲೆ ಹುಜೂರಾಬಾದ್‌ನ ಬಿಆರ್‌ಎಸ್ ಶಾಸಕ ಕೌಶಿಕ್ ರೆಡ್ಡಿ ಅವರನ್ನು ಬಂಧಿಸಲಾಗಿತ್ತು.

ಪರಿಶೀಲನಾ ಸಮಿತಿ ಸಭೆಯಲ್ಲಿ ಕೌಶಿಕ್ ರೆಡ್ಡಿ ಮತ್ತು ಸಂಜಯ್ ಕುಮಾರ್ ನಡುವೆ ತೀವ್ರ ವಾಗ್ವಾದ ನಡೆದ ನಂತರ ಅವರ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಸಂಜಯ್ ಕುಮಾರ್ ಅವರ ಪಕ್ಷಾಂತರದ ಬಗ್ಗೆ ಕೌಶಿಕ್ ರೆಡ್ಡಿ ಪ್ರಶ್ನೆ ಎ್ತಿದ್ದು, ಕೂಡಲೇ ಅಲ್ಲೇ ಇದ್ದ ಸಂಜಯ್ ಕುಮಾರ್ ಹಾಗೂ ಕೌಶಿಕ್ ರೆಡ್ಡಿ ನಡುವೆ ಮಾತಿನ ಚಕಮಕಿ ನಡೆಯಿತು.

ಶಾಸಕ ಸಂಜಯ್ ಕುಮಾರ್ ಅವರ ಪಿಎ, ನಿಂದನೆ ಹಾಗೂ ದೈಹಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಿರುವ ದೂರಿನ ಆಧಾರದಲ್ಲಿ ಕೌಶಿಕ್ ರೆಡ್ಡಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

೨೦೨೪ರ ಜೂನ್ನಲ್ಲಿ ಬಿಆರ್‌ಎಸ್ ಪಕ್ಷದಿಂದ ಆಡಳಿತಾರೂಢ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಸಂಜಯ್ ಕುಮಾರ್, ಸೋಮವಾರ ತೆಲಂಗಾಣ ವಿಧಾನಸಭಾ ಸ್ಪೀಕರ್ ಜಿ.ಪ್ರಸಾದ್ ಕುಮಾರ್ ಅವರಿಗೆ ಕೌಶಿಕ್ ರೆಡ್ಡಿ ವಿರುದ್ಧ ದೂರು ನೀಡಿದ್ದರು. ಕೌಶಿಕ್ ರೆಡ್ಡಿ ಬಂಧನವನ್ನು ಬಿಆರ್‌ಎಸ್ ನಾಯಕರು ತೀವ್ರವಾಗಿ ಖಂಡಿಸಿದ್ದರು.

ಇಡಿಯಿಂದ ಸಮನ್ಸ್ ಜಾರಿ

2023ರ ಫಾರ್ಮುಲಾ ಇ- ರೇಸ್‌ನಲ್ಲಿನ ಅಕ್ರಮ ಹಣ ಪಾವತಿ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ವಿವರಣೆ ಪಡೆಯುವ ಸಂಬಂಧ ಜಾರಿ ನಿರ್ದೇಶನಾಲಯವು ರಾಮ್ ರಾವ್‌ಗೆ ಸಮನ್ಸ್ ಜಾರಿ ಮಾಡಿತ್ತು.

ತೆಲಂಗಾಣ ಪೊಲೀಸ್ ಭ್ರಷ್ಟಚಾರ ವಿರೋಧಿ ಬ್ಯೂರೋ ದೂರನ್ನು ಗಮನದಲ್ಲಿರಿಸಿಕೊಂಡು ಪಿಎಂಎಲ್‌ಎನ ವಿವಿಧ ಸೆಕ್ಷನ್‌ಗಳ ಅಡಿ ಕಳೆದ ವಾರ ಇಡಿ ಎಫ್‌ಐಆರ್ ದಾಖಲಿಸಿತ್ತು.

ಈ ಸಂಬಂಧ ಜನವರಿ 7ರಂದು ಬಿಆರ್‌ಎಸ್ ಕಾರ್ಯಕಾರಿ ಅಧ್ಯಕ್ಷ ಕೆಟಿಆರ್ ಇಡಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸಮನ್ಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇವರ ಜೊತೆಗೆ ಹಿರಿಯ ಐಎಎಎಸ್ ಅಧಿಕಾರಿ ಅರವಿಂದ್ ಕುಮಾರ್ ಮತ್ತು ಎಚ್‌ಎಂಡಿಎ ನಿವೃತ್ತ ಮಾಜಿ ಇಂಜಿನಿಯರ್ ಬಿಎಲ್‌ಎನ್ ರೆಡ್ಡಿಗೆ ಕ್ರಮವಾಗಿ ಇಡಿ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments