Tuesday, May 19, 2026
Google search engine
Homeದೇಶಬೆಂಗಳೂರಿನಿಂದ ಹೊರಟ ವಿಮಾನದಲ್ಲಿ ತಾಂತ್ರಿಕ ದೋಷ: ಮಾರ್ಗದಲ್ಲಿ ಬದಲಾವಣೆ!

ಬೆಂಗಳೂರಿನಿಂದ ಹೊರಟ ವಿಮಾನದಲ್ಲಿ ತಾಂತ್ರಿಕ ದೋಷ: ಮಾರ್ಗದಲ್ಲಿ ಬದಲಾವಣೆ!

ಬೆಂಗಳೂರಿನಿಂದ ಲಂಡನ್‌ ಗೆ ಹೊರಟ ಪ್ರಯಾಣಿಕ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಜೆಡ್ಡಾಗೆ ಮಾರ್ಗ ಬದಲಿಸಿದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ.

ಏರ್‌ ಇಂಡಿಯಾ ಬೋಯಿಂಗ್‌ 787-ಬಿ ವಿಮಾನ ಬೆಂಗಳೂರಿನಿಂದ ಲಂಡನ್‌ ನ ಹೀತ್ರೋ ವಿಮಾನ ನಿಲ್ದಾಣದ ಕಡೆ ಪ್ರಯಾಣ ಬೆಳೆಸಿದ್ದು, ವಿಮಾನ ಹೊರಟ 6 ಗಂಟೆಗಳ ನಂತರ ಏರ್‌ ಬೋರ್ನ್‌ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು.

ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆಯಾಗುತ್ತಿದ್ದಂತೆ ಜೆಡ್ಡಾ ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಾಯಿಸಲಾಗಿದ್ದು, ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೆಡ್ಡಾ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿನಿಂದ ಹೊರಟ ವಿಮಾನದ ಬಗ್ಗೆ ಪ್ರತಿ ಕ್ಷಣದ ಮಾಹಿತಿ ಪಡೆಯಲಾಗುತ್ತಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರ ಮಾಹಿತಿ ಬಹಿರಂಗಪಡಿಸಲಾಗಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments