Friday, May 15, 2026
Google search engine
Homeವಾಣಿಜ್ಯ26% ಭಾರತೀಯರಿಗೆ ಚಿಕನ್ ಮೋಮೋಸ್ ಎಂದರೆ ಬಲು ಪ್ರೀತಿ!

26% ಭಾರತೀಯರಿಗೆ ಚಿಕನ್ ಮೋಮೋಸ್ ಎಂದರೆ ಬಲು ಪ್ರೀತಿ!

ಮೋಮೋಸ್ ಬಗ್ಗೆ ಭಾರತಕ್ಕೆ ಇರುವ ಪ್ರೀತಿಯನ್ನು ಅಲ್ಲಗೆಳೆಯಲಾಗದು, ಏಕೆಂದರೆ, ಈ ನೆಚ್ಚಿನ ಸ್ಟ್ರೀಟ್‌ ಫುಡ್‌ನ ಬಿಸಿ ಸ್ವಾದಿಷ್ಟ ತಟ್ಟೆ ಎತ್ತಿಕೊಳ್ಳುವುದಕ್ಕಿಂತ ಉತ್ತಮ ಸಂಗತಿ ಮತ್ತೊಂದಿಲ್ಲ. ಈ ಅನುಭವವನ್ನು ಇನ್ನಷ್ಟು ಅನುಕೂಲಕರ ಹಾಗೂ ರುಚಿಮಯಗೊಳಿಸಲು ಗೋದ್ರೆಜ್ ಯಮ್ಮೀಜ್ ತನ್ನ ಇತ್ತೀಚಿನ ಕೊಡುಗೆ ಚಿಕನ್ ಮೋಮೋಸ್‌ಅನ್ನು ಪರಿಚಯಿಸಿದೆ.

ಅನಾಯಾಸ ತಯಾರಿಕೆಗಾಗಿಯೇ ರಚಿತಗೊಂಡಿರುವ ಈ ಬೇಯಿಸಲು ಸಿದ್ಧವಾದ ಮೋಮೋಸ್ ಸ್ಟ್ರೀಟ್-ಸ್ಟೈಲ್ ಒಳ್ಳೆಯತನದ ನಿಜವಾದ ರುಚಿಯನ್ನು ನೇರವಾಗಿ ನಿಮ್ಮ ಮನೆಗೇ ತರುತ್ತದೆ.

STTEM 2.0 ವರದಿಯ ಪ್ರಕಾರ, 26% ಭಾರತೀಯರು ಮಾಂಸಾಹಾರಿ ಮೋಮೋಸ್ ತಿನ್ನುವುದಕ್ಕೆ ಇಷ್ಟಪಡುವುದರಿಂದ, ಇದು ದೇಶದ ಅತ್ಯಂತ ಬೇಡಿಕೆಯ ತಿಂಡಿ ಆಯ್ಕೆಯಾಗಿದೆ. ಈ ಬೆಳೆಯುತ್ತಿರುವ ಬೇಡಿಕೆಯನ್ನು ಗುರುತಿಸಿ ಗೋದ್ರೆಜ್ ಯಮ್ಮೀಜ್, ತನ್ನ ವೈವಿಧ್ಯಮಯವಾದ ಫ್ರೋಜನ್ ಫುಡ್ ಪೋರ್ಟ್‌ಫೋಲಿಯೋವನ್ನು ವಿಸ್ತರಿಸಿ, ಮೋಮೋ ಪ್ರೇಮಿಗಳು ತಮ್ಮ ನೆಚ್ಚಿನ ತಿಂಡಿಯನ್ನು, ಕೇವಲ ಕೆಲವೇ ಕೆಲವು ನಿಮಿಷಗಳ ತಯಾರಿಕೆಯಲ್ಲಿ ಯಾವುದೇ ಸಮಯದಲ್ಲಾದರೂ ಎಲ್ಲಾದರೂ ಆನಂದಿಸುವುದನ್ನು ಖಾತರಿಪಡಿಸುತ್ತಿದೆ.

ಗೋದ್ರೆಜ್ ಫುಡ್ಸ್ ಲಿಮಿಟೆಡ್‌ನ ಸಿಇಒ ಅಭಯ್ ಪರ್ಣೇಕರ್ ಮಾತನಾಡುತ್ತಾ, “ಮೋಮೋಸ್, ಭಾರತದಾದ್ಯಂತ ಅತಿನೆಚ್ಚಿನ ತಿನಿಸಾಗಿದೆ. ಮತ್ತು ನಮ್ಮ ಹೊಸ ಚಿಕನ್ ಮೋಮೋಸ್, ಆ ಅನುಭವವನ್ನು ಮನೆಗೇ ತರುತ್ತಿದೆ. 26% ಭಾರತೀಯರು ಮಾಂಸಾಹಾರ ಮೋಮೋಸ್ ಇಷ್ಟಪಡುತ್ತಿರುವಂತಹ ಸಂದರ್ಭದಲ್ಲಿ ಈ ಪರಿಚಯವು ನಮ್ಮ ಅಡುಗೆ ಮಾಡಲು ಸಿದ್ಧವಾದ ಶ್ರೇಣಿಗೆ ಸಹಜ ಸೇರ್ಪಡೆಯಾಗಿದೆ. ಪ್ರತಿಯೊಬ್ಬರೂ ಸ್ವಾದಿಷ್ಟ, ರೆಸ್ಟಾರೆಂಟ್ ಶೈಲಿಯ ಮೋಮೋವನ್ನು ಮನೆಯಲ್ಲೇ, ಅದೂ ಬಿಸಿಬಿಸಿಯಾಗಿ ತಿಂದು ಆನಂದಿಸುವಂತಗಾಲು, ಅತಿಸುಲಭವಾಗಿ ನಿಜವಾದ ಸ್ವಾದಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ ಎಂದರು.

ಬೀದಿಬದಿಯ ಮೋಮೋಗಳೆಂದರೆ ನಮಗೂ ಇಷ್ಟ, ಆದರೆ, ಶುಚಿತ್ವ ಬಹಳವಾಗಿಯೇ ವ್ಯತ್ಯಾಸವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ರಹಸ್ಯ. ಗೋದ್ರೆಜ್ ಯಮ್ಮೀಜ್‌ನಲ್ಲಿ ನಾವು ಹೊಂದಿರುವ ತೋಟದಿಂದ ಫೋರ್ಕ್‌ವರೆಗಿನ ಮಾಡಲ್‌ನೊಂದಿಗೆ ನಾವು ಅತ್ಯಂತ ಎಚ್ಚರಿಕೆಯಿಂದ ಪಡೆದುಕೊಂಡ ಮೂಲಸಾಮಗ್ರಿಗಳನ್ನು ಬಳಸಿ ನಿಜವಾಗಿಯೇ ರುಚಿಕರವಾದ ಹಾಗೂ ಸುರಕ್ಷಿತವಾದ ಸ್ವಾದವನ್ನು ಖಾತರಿಪಡಿಸುತ್ತೇವೆ. ಗೋದ್ರೆಜ್‌ನ ಗುಣಮಟ್ಟ ಹಾಗೂ ವಿಶ್ವಾಸದೊಂದಿಗೆ ಬೀದಿಬದಿಯ ಅದ್ಭುತ ಸ್ವಾದಗಳನ್ನು ಯಾರು ಬೇಕಾದರೂ ಆನಂದಿಸಬಹುದು.” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments