Thursday, May 14, 2026
Google search engine
Homeದೇಶಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನಕ್ಕೆ ಚೀನಾ ಮಾಹಿತಿ: ಭಾರತೀಯ ಸೇನಾ ಜನರಲ್

ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನಕ್ಕೆ ಚೀನಾ ಮಾಹಿತಿ: ಭಾರತೀಯ ಸೇನಾ ಜನರಲ್

ನವದೆಹಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಭಾರತದ ಪ್ರತಿ ಕ್ಷಣದ ಮಾಹಿತಿ ಪಾಕಿಸ್ತಾನಕ್ಕೆ ಚೀನಾ ರವಾನಿಸುತ್ತಿತ್ತು ಎಂದು ಭಾರತೀಯ ಸೇನಾ ಜನರಲ್ ರಾಹುಲ್ ಸಿಂಗ್ ಹೇಳಿದ್ದಾರೆ.

ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಇಂಡಸ್ಟ್ರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಪರೇಷನ್ ಸಿಂಧೂರ್ ಕುರಿತು ಹಲವು ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡ ಅವರು, ಒಂದು ಗಡಿ ಮೂರು ಶತ್ರುಗಳ ವಿರುದ್ಧ ಹೋರಾಟ ನಡೆಸಿದ್ದೇವೆ ಎಂದರು.

ಪಾಕಿಸ್ತಾನ ನಮಗೆ ನೇರ ಶತ್ರುವಾದರೆ, ಚೀನಾ ಪಾಕಿಸ್ತಾನಕ್ಕೆ ಮಾಹಿತಿ ನೀಡುತ್ತಿತ್ತು. ಇದೇ ವೇಳೆ ಟರ್ಕಿ ಕೂಡ ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಪೂರೈಸುವ ಮೂಲಕ ನಮ್ಮ ವಿರುದ್ಧ ಪರೋಕ್ಷ ಯುದ್ಧ ಸಾರಿದ್ದರು ಎಂದು ರಾಹುಲ್ ಸಿಂಗ್ ವಿವರಿಸಿದರು.

ಪಾಕಿಸ್ತಾನ ಮುಂದುವರಿಯಲು ಸಿದ್ಧವಿರಲಿಲ್ಲ. ಆದರೆ ಚೀನಾ ಸಾಧ್ಯವಾದ ಎಲ್ಲಾ ನೆರವನ್ನು ನೀಡಿತ್ತು. ಟರ್ಕಿ ಸಾಕಷ್ಟು ನೆರವು ನೀಡಿತ್ತು. ಆದ್ದರಿಂದ ನಾವು ಒಂದಲ್ಲ ಎರಡಲ್ಲ, ಮೂರು ಶತ್ರುರಾಷ್ಟ್ರಗಳ ವಿರುದ್ಧ ಹೋರಾಟ ನಡೆಸಬೇಕಾಯಿತು ಎಂದು ಅವರು ಹೇಳಿದರು.

ನಾವು ಪಾಕಿಸ್ತಾನದ ಮೇಲೆ ದಾಳಿ ಮಾಡುವ ಕುರಿತು ಉನ್ನತ ಮಟ್ಟದ ಮಾತುಕತೆ ನಡೆಸುತ್ತಿದ್ದಾಗ ಅದರ ನೇರ ಪ್ರಸಾರದ ಮಾಹಿತಿಯನ್ನು ಚೀನಾ ಪಾಕಿಸ್ತಾನಕ್ಕೆ ರವಾನಿಸುತ್ತಿತ್ತು. ಇದರಿಂದ ಪಾಕಿಸ್ತಾನ ಪ್ರತಿದಾಳಿ ನಡೆಸಲು ಸಜ್ಜಾಗಿತ್ತು. ಇದನ್ನು ಅರಿತ ನಾವು ದಾಳಿಯನ್ನು ತಡವಾಗಿ ಮಾಡಲು ನಿರ್ಧರಿಸಿದೆವು ಎಂದು ಅವರು ವಿವರಿಸಿದರು.

ಕಳೆದ 5 ವರ್ಷಗಳ ಬೆಳವಣಿಗೆ ಗಮನಿಸಿದರೆ ಪಾಕಿಸ್ತಾನಕ್ಕೆ ಚೀನಾ ಬೆಂಬಲ ಅನಿರೀಕ್ಷಿತವೇನೂ ಆಗಿರಲಿಲ್ಲ. ಚೀನಾ ತಾನು ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರಗಳ ಪ್ರಯೋಗಕ್ಕೆ ಪಾಕಿಸ್ತಾನವನ್ನು ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

ಕಳೆದ 5 ವರ್ಷಗಳ ಅಂಕಿ ಅಂಶ ಗಮನಿಸಿದರೆ ಪಾಕಿಸ್ತಾನಕ್ಕೆ ಬರುತ್ತಿರುವ ಹಾರ್ಡ್ ವೇರ್ ತಂತ್ರಜ್ಞಾನದ ಶೇ.85 ಭಾಗ ಚೀನಾದ್ದಾಗಿದೆ. ಚೀನಾ ತಾನು ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರಗಳನ್ನು ಮತ್ತೊಂದು ಶಸ್ತ್ರಾಸ್ತ್ರದ ಜೊತೆ ಪರೀಕ್ಷಿಸಲು ಪಾಕಿಸ್ತಾನವನ್ನು ಬಳಸಿಕೊಳ್ಳುತ್ತಿದೆ ಎಂದು ರಾಹುಲ್ ಸಿಂಗ್ ವಿವರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments