Monday, May 25, 2026
Google search engine
Homeಕ್ರೀಡೆಮುಂಬೈಗೆ ಸತತ 6ನೇ ಜಯ, ಹೊರಬಿದ್ದ ರಾಜಸ್ಥಾನ್ ರಾಯಲ್ಸ್

ಮುಂಬೈಗೆ ಸತತ 6ನೇ ಜಯ, ಹೊರಬಿದ್ದ ರಾಜಸ್ಥಾನ್ ರಾಯಲ್ಸ್

ಸರ್ವಾಂಗೀಣ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ 100 ರನ್ ಗಳ ಭಾರೀ ಅಂತರದಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಸತತ 6ನೇ ಗೆಲುವಿನೊಂದಿಗೆ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಗೆ ಸಮೀಪವಾದರೆ ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ರೇಸ್ ನಿಂದ ಹೊರಬಿದ್ದಿತು.

ಜೈಪುರದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 2 ವಿಕೆಟ್ ಕಳೆದುಕೊಂಡು 217 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ರಾಜಸ್ಥಾನ್ ರಾಯಲ್ಸ್ 17 ಓವರ್ ಗಳಲ್ಲಿ 117 ರನ್ ಗೆ ಆಲೌಟಾಯಿತು. ಈ ಮೂಲಕ ರಾಜಸ್ಥಾನ್ ತಂಡವನ್ನು ಅದರದ್ದೇ ನೆಲದಲ್ಲಿ 13 ವರ್ಷಗಳ ನಂತರ ಗೆದ್ದ ಸಾಧನೆಯನ್ನು ಮುಂಬೈ ಇಂಡಿಯನ್ಸ್ ಮಾಡಿತು.

ಮುಂಬೈ ಇಂಡಿಯನ್ಸ್ 11 ಪಂದ್ಯಗಳಿಂದ 7 ಜಯ ಹಾಗೂ 4 ಸೋಲಿನೊಂದಿಗೆ 14 ಅಂಕದೊಂದಿಗೆ ಮೊದಲ ಬಾರಿ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿ ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡಿತು. ರಾಜಸ್ಥಾನ್ ರಾಯಲ್ಸ್ 11 ಪಂದ್ಯಗಳಿಂದ 3 ಜಯ ಹಾಗೂ 8 ಸೋಲಿನೊಂದಿಗೆ 6 ಅಂಕದೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ನಂತರ ಟೂರ್ನಿಯಿಂದ ಅಧಿಕೃತವಾಗಿ ಎರಡನೇ ತಂಡವಾಗಿ ಹೊರಬಿದ್ದಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments