ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಟೌನ್ ಶಿಪ್ ವಿವಾದದ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪಂಥಾಹ್ವಾನ ಸ್ವೀಕರಿಸಿರುವ ಸಿಎಂ ಡಿಕೆ ಶಿವಕುಮಾರ್ ಜೂನ್ 26ರಂದು ಬಹಿರಂಗ ಚರ್ಚೆಗೆ ಸಮಯ ನಿಗದಿಪಡಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಟೌನ್ ಶಿಪ್ ವಿವಾದದ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪಂಥಾಹ್ವಾನ ಸ್ವೀಕರಿಸಿರುವ ಸಿಎಂ ಡಿಕೆ ಶಿವಕುಮಾರ್ ಜೂನ್ 26ರಂದು ಬಹಿರಂಗ ಚರ್ಚೆಗೆ ಸಮಯ ನಿಗದಿಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್ ಶಿಪ್ ಬಗ್ಗೆ ನೇರಾನೇರ ಚರ್ಚಿಸಲು ಜೂನ್ 26 ಬೆಳಿಗ್ಗೆ 11 ಗಂಟೆಗೆ ವಿಧಾನಸೌಧಕ್ಕೆ ಕುಮಾರಸ್ವಾಮಿ ಅವರನ್ನು ಬರಲು ಹೇಳಿ ಎಂದು ಹೇಳಿದ್ದಾರೆ.
ಐವರು ಜನಪ್ರತಿನಿಧಿಗಳ ಜೊತೆ ಬಿಡದಿ ಟೌನ್ ಶಿಪ್ ಗೆ ಸಂಬಂಧಿಸಿದ ದಾಖಲೆಗಳ ಸಮೇತ ಪಂಥಾಹ್ವಾನಕ್ಕೆ ಬರುವಂತೆ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ. ಈ ಮೂಲಕ ಬಿಡದಿ ಟೌನ್ ಶಿಪ್ ವಿವಾದಕ್ಕೆ ಹೊಸ ತಿರುವು ಲಭಿಸಿದ್ದು, ಈ ಪಂಥಾಹ್ವಾನವನ್ನು ಕುಮಾರಸ್ವಾಮಿ ಸ್ವೀಕರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.
ಇದಕ್ಕೂ ಮುನ್ನ ಮಾತನಾಡಿದ ಅವರು, ಈ ಹಿಂದೆಯೇ ನಾವು ವಿಧಾನಸಭೆಯಲ್ಲಿ ಮಾತನಾಡಿದ್ದೇವೆ. ಬೇಕಾದರೆ ವಿಧಾನಸಭೆಯಲ್ಲಿ ಚರ್ಚೆಗೆ ಸಿದ್ಧ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಬಿಡದಿ ಟೌನ್ ಶಿಪ್ ಬಗ್ಗೆ ನನ್ನ ಬಳಿ ರೈತರ ದಾಖಲೆಗಳಿವೆ. ನನ್ನ ದಾಖಲೆಗಳು ಅಲ್ಲ. ನಾನು ಬಹಿರಂಗ ಚರ್ಚೆಗೆ ಯಾವಾಗ ಬರೆದರೂ ಬರಲು ಸಿದ್ಧ. ನಾವು ಫ್ರೀ ಆಗಿ ಇದ್ದೀನಿ. ಸಿಎಂ ಆಗಿ ಅವರೇ ಬ್ಯುಸಿ ಇರೋದು ತಾನೆ? ಸಮಯ ನೋಡಿಕೊಂಡು ಅವರೇ ಸಮಯ ತಿಳಿಸಲಿ ಎಂದು ಹೇಳಿದ್ದರು.



