ಬೆಂಗಳೂರು: ತನ್ನ ಹೊಸತನದಿಂದ ಯಾವಾಗಲೂ ವೀಕ್ಷಕರಿಗೆ ಹೊಸತನವನ್ನು ಕೊಟ್ಟು ಮನರಂಜಿಸುವ ಜೀ ಕನ್ನಡ ಈಗ ಎಲ್ಲರ ಅಚ್ಚುಮೆಚ್ಚಿನ ನಾನ್-ಫಿಕ್ಷನ್ ಶೋ ಕಾಮಿಡಿ ಕಿಲಾಡಿಗಳನ್ನು ಮತ್ತೆ ತಂದಿದೆ.
ಇಡೀ ರಾಜ್ಯವನ್ನೇ ನಗಿಸಿದ ಯಶಸ್ವಿ ಸೀಸನ್‌ಗಳನ್ನು ನೀಡಿದ ನಂತರ, ಕಾಮಿಡಿಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ವಾಹಿನಿ ಸಿದ್ಧವಾಗಿದೆ. ಕಾಮಿಡಿ ಕಿಲಾಡಿಗಳು ಅಕ್ಟೋಬರ್ 25 ರಂದು ರಾತ್ರಿ 9 ಗಂಟೆಗೆ ಶುರುವಾಗಲಿದ್ದು, ಪ್ರತಿ ವಾರಾಂತ್ಯದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.
ತರ್ಲೆ ಮಾತು, ವಿಭಿನ್ನ ನಿರೂಪಣಾ ಶೈಲಿಯಿಂದ ಕನ್ನಡಿಗರ ಮನಗೆದ್ದ ನಿರಂಜನ್ ದೇಶಪಾಂಡೆ ಕಾಮಿಡಿ ಖಿಲಾಡಿಗಳು ಕಾರ್ಯಕ್ರಮದ ನಿರೂಪಣಾ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಕಾಮಿಡಿ ಕಿಂಗ್ ಜಗ್ಗೇಶ್ ಮತ್ತು ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್, ಎಲ್ಲರ ಅಚ್ಚುಮೆಚ್ಚಿನ ಹಿರಿಯ ನಟಿ ತಾರಾ ಅನುರಾಧ ಇರಲಿದ್ದಾರೆ. ಒಟ್ಟಾರೆಯಾಗಿ ಇವೆರಲ್ಲರೂ ನಿಮ್ಮ ನಗುವನ್ನು ಡಬಲ್ ಮಾಡೋದರಲ್ಲಿ ಯಾವುದೇ ಸಂದೇಹವಿಲ್ಲ.
ಸತತ 19 ವರ್ಷಗಳಿಂದ ಜೀ ಕನ್ನಡ ವಾಹಿನಿ ಕನ್ನಡಿಗರನ್ನು ಮನರಂಜಿಸುವಲ್ಲಿ ಮುಂಚೂಣಿಯಲ್ಲಿದೆ. ಇದೀಗ ಈ ಪರಂಪರೆಯನ್ನು ಮುಂದುವರೆಸುತ್ತ ಜೀ ಕನ್ನಡ ವಾಹಿನಿ ಪ್ರೇಕ್ಷಕರನ್ನು ನಕ್ಕು ನಗಿಸಲು ‘ಕಾಮಿಡಿ ಖಿಲಾಡಿಗಳು’ ಹೊಚ್ಚ ಹೊಸ ಸೀಸನ್ ಅನ್ನು ತರಲು ಸಜ್ಜಾಗಿದೆ. ಈ ಶೋನಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಪ್ರತಿಭಾನ್ವಿತ ನವಹಾಸ್ಯನಟರು ಪಾಲ್ಗೊಳ್ಳಲಿದ್ದು, ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಲಿದ್ದಾರೆ. ಹಾಸ್ಯಮಯ, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ನೂತನ ಸ್ಕಿಟ್ ಗಳನ್ನೂ ಈ ಪ್ರತಿಭೆಗಳು ಪ್ರದರ್ಶಿಸಲಿದ್ದಾರೆ.
ಈ ಸೀಸನ್ ನ ಕಾಮಿಡಿ ಖಿಲಾಡಿಗಳು ಕ್ರಿಯೇಟಿವಿಟಿ ಮತ್ತು ಹೊಸತನದ ಪ್ರತಿರೂಪವಾಗಿದೆ. ಇನ್ನು ಪ್ರತಿಸಂಚಿಕೆಯಲ್ಲೂ ಹಾಸ್ಯ, ತರ್ಲೆ, ನಗುವಿನ ಚಟಾಕಿ ಇರಲಿದೆ. ಹೊಸಪ್ರತಿಭೆಗಳು ಕಾಮಿಡಿ ಸ್ಕಿಟ್ ಗಳ ಮೂಲಕ ಕನ್ನಡಿಗರ ಮನಕ್ಕೆ ಲಗ್ಗೆ ಇಡಲು ಸಜ್ಜಾಗಿದ್ದಾರೆ.



