Sunday, June 28, 2026
Google search engine
Homeಅಪರಾಧಡ್ರಗ್ಸ್ ಗೆ ಬಲಿಯಾದ ಮಗನ ತಂದೆಯಿಂದ ದೂರು: ಡ್ರಗ್ಸ್ ಮಾರುತ್ತಿದ್ದ 5 ಜನರ ಗ್ಯಾಂಗ್ ಬಲೆಗೆ!

ಡ್ರಗ್ಸ್ ಗೆ ಬಲಿಯಾದ ಮಗನ ತಂದೆಯಿಂದ ದೂರು: ಡ್ರಗ್ಸ್ ಮಾರುತ್ತಿದ್ದ 5 ಜನರ ಗ್ಯಾಂಗ್ ಬಲೆಗೆ!

ಮಗ ಡ್ರಗ್ಸ್ ನಿಂದ ಮೃತಪಟ್ಟಿದ್ದಾನೆ ಎಂದು ತಂದೆಯೊಬ್ಬರು ನೀಡಿದ ದೂರಿನ ತನಿಖೆ ನಡೆಸಿದ ಪೊಲೀಸರು ಡ್ರಗ್ಸ್ ಮಾರಾಟ ಮಾಡುತ್ತಿದ್ದ 5 ಜನರ ಗ್ಯಾಂಗ್ ಬಂಧಿಸಿದ್ದು, ಸುಮಾರು 5 ಲಕ್ಷ ರೂ. ಮೌಲ್ಯದ 5.759 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಬಿಕರ್ನಕಟ್ಟೆ ಬಳಿಯ ಅಡು ಮರೋಳಿ ನಿವಾಸಿ ತುಷಾರ್ ಸೋನು (21), ನಾಗುರಿ ನಿವಾಸಿ ಧನ್ವಿ ಶೆಟ್ಟಿ (20), ಜಲ್ಲಿಗುಡ್ಡೆ ನಿವಾಸಿ ಸಾಗರ್ ಕರ್ಕೇರ (19), ಶಕ್ತಿನಗರ ನಿವಾಸಿ ವಿಕಾಸ್ ಥಾಪಾ ಅಲಿಯಾಸ್ ಪುಚ್ಚಿ (23), ಅಳಕೆ, ಕಂಡೆಟ್ಟು ನಿವಾಸಿ ವಿಶ್ವೇಶ್ ಕಾಮತ್ (24) ಎಂಬುವವರನ್ನು ಸೆನ್​ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಾದಕ ವ್ಯಸನಕ್ಕೆ ಮಗ ಬಲಿಯಾಗಿದ್ದಾನೆ ಎಂದು ತಂದೆ ಪೊಲೀಸ್ ಕಮಿಷನರ್‌ ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಸೆನ್ ಠಾಣೆ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು.

ತನಿಖೆ ವೇಳೆ ಮಂಗಳೂರು ನಗರದ ಹೊರವಲಯದ ಪಡುಶೆಡ್ಡೆ ಗ್ರಾಮದ ಹಾಲಾಡಿ ಎಂಬಲ್ಲಿ ಮಾದಕದ್ರವ್ಯ ಮಾರಾಟ ಮಾಡಲು ತಯಾರಿ ನಡೆಸುತ್ತಿದ್ದ ಐವರು ಪೆಡ್ಲರ್‌ಗಳು ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾರೆ.

ಪ್ರತಿಯೊಬ್ಬ ಪೆಡ್ಲರ್‌ಗಳ ಬಳಿ 1 ಕೆ.ಜಿ.ಗಿಂತ ಅಧಿಕ ಪ್ರಮಾಣದ ಗಾಂಜಾ ಹಾಗೂ ಗಾಂಜಾ ಪ್ಯಾಕೇಟ್ ಸೇರಿದಂತೆ ಒಟ್ಟು 5.759 ಕೆ.ಜಿ. ತೂಕದ 5,20,000ರೂ. ಮೌಲ್ಯದ ನಿಷೇಧಿತ ಮಾದಕದ್ರವ್ಯ ಪತ್ತೆಯಾಗಿದ್ದು, ಇದನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪೆಡ್ಲರ್‌ಗಳು ಗಾಂಜಾವನ್ನು ಸಣ್ಣ ಸಣ್ಣ ಪೊಟ್ಟಣಗಳನ್ನಾಗಿ ಮಾಡಿ, ಅದನ್ನು 1000ರೂ.ನಂತೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ತನಿಖೆ ಮುಂದುವರೆದಿದ್ದು, ಆರೋಪಿಗಳಿಗೆ ಎಲ್ಲಿಂದ ಗಾಂಜಾ ಪೂರೈಕೆಯಾಗುತ್ತಿದೆ ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಆರು ಮೊಬೈಲ್ ಫೋನ್‌ಗಳು, ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ನಗರ ಪೊಲೀಸ್ ಕಮೀಷನರ್​ ಸುಧೀರ್​ ಕುಮಾರ್​ ರೆಡ್ಡಿ, “ಗಾಂಜಾ ವ್ಯಸನಿಯ ತಂದೆ ನೀಡಿದ ದೂರಿನಂತೆ ತನಿಖೆಗೆ ತಂಡ ರಚಿಸಿದಾಗ 200 ಜನರಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದ 5 ಮಂದಿ ಪೆಡ್ಲರ್ ಗಳನ್ನು ಬಂಧಿಸಲಾಗಿದೆ ಎಂದರು.

ಬಂಧಿತರು ಸಣ್ಣ‌ಸಣ್ಣ ಪ್ಯಾಕೆಟ್ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದರು. ಇವರಿಂದ 7 ಕೆ ಜಿ ಗಾಂಜಾ ವಶಪಡಿಸಲಾಗಿದೆ. ಒಬ್ಬರು‌ ಬಂದು‌ ದೂರು ಕೊಟ್ಟಾಗ 200 ಮಂದಿಗೆ ಡ್ರಗ್ಸ್ ಸಪ್ಲೈ ಮಾಡುವುದನ್ನು ತಡೆಯಲಾಗಿದೆ. ಅದೇ ರೀತಿ ನೂರು ಮಂದಿ ಕಂಪ್ಲೆಂಟ್ ಕೊಟ್ಟರೆ ಮಂಗಳೂರಿನಲ್ಲಿ ಡ್ರಗ್ಸ್ ಸಪ್ಲೈ ಇಲ್ಲದಂತೆ ಮಾಡಬಹುದು ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments