ತಿಂಗಳ ಹಿಂದೆಯೇ ವಿದ್ಯುತ್ ಕಂಬದ ತಂತಿಗಳು ಹೊಲದಲ್ಲಿ ಜೋತು ಬಿದ್ದಿರುವುದನ್ನು ಸರಿಪಡಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ 6 ಎಕರೆ ಕಬ್ಬು ಬೆಂಕಿಗೆ ಆಹುತಿಯಾದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾಡ್ರಾಮಿಯಲ್ಲಿ ಸಂಭವಿಸಿದೆ.
ತಾಲೂಕಿನ ಮಾಗಣಗೇರಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 1ಗಂಟೆಗೆ ಜಮೀನಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ 6 ಎಕರೆ ಕಬ್ಬು ಬೆಂಕಿಗೆ ಆವೃತ್ತಿಯಾಗಿದೆ. 2 ದಿನದಲ್ಲಿ ಕಟಾವು ಮಾಡಬೇಕಿದ್ದಾಗ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಕಬ್ಬು ಬೆಂಕಿಗೆ ಆಹುತಿಯಾಗಿದೆ. ಇದರಿಂದ ರೈತ ಕುಟುಂಬ ಕಂಗಾಲಾಗಿದ್ದಾರೆ.
ಕಟಾವಿಗೆ ಬಂದಿದ್ದ ಕಬ್ಬು ಕೈಗೆ ಬಾರದೇ ಆಹುತಿ ಆಗಿದ್ದರಿಂದ ರೈತ ಗೊಲ್ಲಾಳಪ್ಪ ನಾಗವಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತ್ತು. ನಿರೀಕ್ಷೆ ತೋರಿದ ಅಧಿಕಾರಿಗಳ ವಿರುದ್ಧ ಸಂಬಂಧ ಪಟ್ಟ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು.
ಜೇವರ್ಗಿ ಅಗ್ನಿಶಾಮಕ ದಳ ಮಾಹಿತಿ ತಿಳಿಸಿದ ಒಂದು ತಾಸಿನಲ್ಲಿ ಬರುವಷ್ಟರಲ್ಲಿ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಯಡ್ರಾಮಿಯಲ್ಲಿ ಅಗ್ನಿಶಾಮಕ ಇಲಾಖೆ ಇದ್ದರೆ ಇಷ್ಟೊಂದು ಹಾನಿ ಸಂಭವಿಸುತ್ತಿರುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯೆಕ್ತ ಪಡಿಸಿದರು.
ಯಡ್ರಾಮಿಯಲ್ಲಿ ಅಗ್ನಿಶಾಮಕ ದಳ ಇಲಾಖೆ ಇಲ್ಲದ ಕಾರಣ ತಾಲೂಕಿನ ರೈತರ ಪರಿಸ್ಥಿತಿ ಅಂದೂ ಗತಿ.! ತಾಲೂಕಿನಲ್ಲಿ ಬೆಂಕಿ ಹತ್ತಿದರೆ ಜೇವರ್ಗಿ ಅಗ್ನಿಶಾಮಕ ದಳ ಬರಬೇಕು. 15ದಿನಗಳ ಹಿಂದೆ ನೂತನ ಅಗ್ನಿಶಾಮಕ ಇಲಾಖೆ ನಿರ್ಮಾಣಕ್ಕೆ ಸ್ಥಳ ಪರಿಶೀಲಿನೇ ಮಾಡಿದಾರೆ. ಕ್ಷೇತ್ರದ ಶಾಸಕ ಡಾ. ಅಜಯಸಿಂಗ ಮುಂಜಾಗ್ರತ ಕ್ರಮವಹಿಸಿ ತುರ್ತಾಗಿ ಅಗ್ನಿಶಾಮಕ ಇಲಾಖೆ ಪ್ರಾರಂಭಿಸ ಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.