Monday, 16 November 2026 — Kannadavahini
BREAKING NEWS
ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ!
ಜಿಲ್ಲಾ ಸುದ್ದಿ

ಕ್ಯಾಪ್ಟನ್ ಅಭಿಮನ್ಯು ಆನೆಗೆ ರಾಜೋಚಿತ ಬೀಳ್ಕೊಡುಗೆ ನೀಡಲು ಸಚಿವ ಈಶ್ವರ ಖಂಡ್ರೆ ಸೂಚನೆ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 519 ವೀಕ್ಷಣೆಗಳು
mysore dasara

ಬೆಂಗಳೂರು: ಆರು ಬಾರಿ ಚಿನ್ನದಂಬಾರಿ ಹೊತ್ತ 60 ವರ್ಷದ ಕ್ಯಾಪ್ಟನ್ ಅರ್ಜುನ ಆನೆಗೆ ಈ ಬಾರಿ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ ರಾಜೋಚಿತ ಬೀಳ್ಕೊಡುಗೆ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಮನವಿ ಮಾಡಿದ್ದಾರೆ.

ಈ ಸಂಬಂಧ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದಿರುವ ಅವರು, ದಸರಾ ಮಹೋತ್ಸವದಲ್ಲಿ ನಾಡದೇವಿ ಚಾಮುಂಡೇಶ್ವರಿ ವಿರಾಜಮಾನಳಾದ 750 ಕೆ.ಜಿ. ತೂಕದ ಚಿನ್ನದಂಬಾರಿ ಹೊತ್ತು ಗಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದ ಅಭಿಮನ್ಯುವಿಗೆ ನಾಡಿನಾದ್ಯಂತ ದೊಡ್ಡ ಅಭಿಮಾನಿ ಬಳಗವೇ ಇದೆ. ಏಕಾ ಏಕಿ ಅಭಿಮನ್ಯುವನ್ನು ದಸರಾ ಮಹೋತ್ಸವದಿಂದ ಹೊರಗಿಡುವ ಬದಲು ನಿಶಾನೆ ಆನೆಯಾಗಿ ಬಳಸಿ, ಗೌರವಪೂರ್ವಕವಾಗಿ ಹಾಗೂ ರಾಜೋಚಿತವಾಗಿ ಬೀಳ್ಕೊಡುಗೆ ನೀಡಬೇಕು ಎಂದು ಕೋರಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಧಾನ ಆಕರ್ಷಣೆಯೇ ವಿಜಯದಶಮಿ ಜಂಬೂಸವಾರಿ. ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಬಗ್ಗೆ ರಾಜ್ಯದ ಜನತೆಗೆ ಅವಿನಾಭಾವ ಸಂಬಂಧವಿದೆ. ಚಿನ್ನದಂಬಾರಿ ಹೊರುವ ಆನೆಗಳ ಬಗ್ಗೆಯಂತೂ ವಿಶೇಷ ಪ್ರೀತಿ ಇದೆ. ಬಾರಿ ದಸರಾ ಮಹೋತ್ಸವದಿಂದ ಕ್ಯಾಪ್ಟನ್ ಅಭಿಮನ್ಯುವನ್ನು ಕೈಬಿಟ್ಟಿರುವುದು ಲಕ್ಷಾಂತರ ಅಭಿಮಾನಿಗಳಿಗೆ ಆಘಾತ ತಂದಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ನಾಗರಹೊಳೆಯ ಮತ್ತಿಗೋಡು ಶಿಬಿರದ 59 ವರ್ಷ ವಯಸ್ಸಿನ ಅಭಿಮನ್ಯು 300ಕ್ಕೂ ಹೆಚ್ಚು ಆನೆ ಸೆರೆ ಕಾರ್ಯಾಚರಣೆ ಹಾಗೂ 80ಕ್ಕೂ ಹೆಚ್ಚು ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವುದಲ್ಲದೆ, 6 ಬಾರಿ ಅಂಬಾರಿಹೊತ್ತು ರಾಜ್ಯದ ಜನರ ಹೃದಯದಲ್ಲಿ ನೆಲೆಸಿದ್ದಾನೆ ಎಂದೂ ಈಶ್ವರ ಖಂಡ್ರೆ ತಿಳಿಸಿದ್ದಾರೆ.

1968ರಲ್ಲಿ ಕಾಕನಕೋಟೆ ಖೆಡ್ಡಾ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿದ್ದ ಅರ್ಜುನ 22 ಬಾರಿ ಜಂಬೂಸವಾರಿಯಲ್ಲಿ ಭಾಗಿಯಾಗಿ, 8 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ. 60 ವರ್ಷ ತುಂಬಿದ ಬಳಿಕವೂ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ. ಅದೇ ರೀತಿ ಬಲರಾಮ ಕೂಡ ಪಾಲ್ಗೊಂಡಿದ್ದ. ಈ ಗೌರವವನ್ನು ಅಭಿಮನ್ಯುವಿಗೂ ನೀಡಿ, ಗೌರವಪೂರ್ವಕವಾಗಿ ಬೀಳ್ಕೊಡುಗೆ ನೀಡುವಂತೆ ಕೋರಿದ್ದಾರೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8419 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment