Tuesday, June 30, 2026
Google search engine
Homeಅಪರಾಧಜಾತ್ರೆ ವೇಳೆ ಗವಿಮಠದ ಆವರಣದಲ್ಲಿ ಚಾಕು ಇರಿದು ಪತ್ನಿ ಕೊಂದ ಪತ್ನಿ!

ಜಾತ್ರೆ ವೇಳೆ ಗವಿಮಠದ ಆವರಣದಲ್ಲಿ ಚಾಕು ಇರಿದು ಪತ್ನಿ ಕೊಂದ ಪತ್ನಿ!

ಜಾತ್ರೆಯ ವೇಳೆ ಗವಿಮಠದ ಆವರಣದಲ್ಲಿ ಪತ್ನಿಗೆ ಚಾಕು ಇರಿದು ಪತಿಯೇ ಕೊಲೆಗೈದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ತುರವೇಕೇರೆ ಬಳಿಯ ಭುವನಹಳ್ಳಿಯ ಗೀತಾ ರಾಜೇಶ್ (25) ಮೃತಪಟ್ಟವರು.

ಮಠದ ಆವರಣದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿದ್ದು ಸಾಕಷ್ಟು ‌ಸಂಖ್ಯೆಯಲ್ಲಿ ಜನ ಸೇರಿದ್ದರು. ಗೀತಾ ಹಾಗೂ ರಾಜೇಶ್ ನಡುವೆ ಹಿಂದೆಯೂ ಅನೇಕ ಬಾರಿ ವೈ ಮನಸ್ಸು ಉಂಟಾಗಿತ್ತು. ಇವರು ಇಲ್ಲಿ ಜಾತ್ರೆಯಲ್ಲಿ ಸ್ಟೀಲ್ ಸಾಮಗ್ರಿ ಮಾರಾಟ ಮಾಡಲು ಬಂದಿದ್ದರು. ಶನಿವಾರ ಇಬ್ಬರ ನಡುವಿನ ಜಗಳ ತಾರಕಕ್ಕೆ ಎರಿತ್ತು.

ಘಟನೆ ನಡೆದಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಮಠದ ಸಮೀಪದಲ್ಲಿಯೇ ಜಾತ್ರೆಯ ಸಿದ್ದತಾ ಕಾರ್ಯ ಪರಿಶೀಲನೆಯಲ್ಲಿ ತೊಡಗಿದ್ದರು.

ಮಾಧ್ಯಮಗಳಿಗೆ ಮಾಹಿತಿ ನೀಡಿದ ಅರಸಿದ್ದಿ ‘ಅಕ್ರಮ ಸಂಬಂಧದ ಶಂಕೆ ಹಾಗೂ ಪತ್ನಿಯ ಮೇಲೆ ಪದೇ ಪದೇ ಸಂಶಯ ಪಡುತ್ತಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ’ ಎಂದರು. ಇವರು ಆರು ವರ್ಷಗಳ ಹಿಂದೆ ಪ್ರೀತಿಸಿ ಮದಯವೆಯಾಗಿದ್ದರು ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments