Tuesday, 17 November 2026 — Kannadavahini
BREAKING NEWS
ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ
ಮನರಂಜನೆ

ಮಾರ್ಚ್ 9ರಿಂದ ಜೀ ಟಿವಿಯಲ್ಲಿ ಹೊಸ ಧಾರವಾಹಿ `ಕೃಷ್ಣ ರುಕ್ಕು’ ಪ್ರಸಾರ ಆರಂಭ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 21 ವೀಕ್ಷಣೆಗಳು
krishna rukku

ಬೆಂಗಳೂರು: ಕನ್ನಡ ನಂ.1 ಮರಂಜನಾ ಚಾನೆಲ್ ಜೀ ಟಿವಿಯಲ್ಲಿ ಮಾರ್ಚ್ 9ರಿಂದ ಪ್ರೀತಿ, ಪ್ರತೀಕಾರ ಮತ್ತು ವಿಧಿಯಾಟದ ಸುತ್ತ ನಡೆಯುವ ಹೊಚ್ಚಹೊಸ ಧಾರಾವಾಹಿ ‘ಕೃಷ್ಣ ರುಕ್ಕು’ ಪ್ರಸಾರವಾಗಲಿದೆ.

ಕುಟುಂಬದ ಒಗ್ಗಟ್ಟು, ಜವಾಬ್ದಾರಿ, ಪ್ರೀತಿ ಜೊತೆಗೆ ಅನಿರೀಕ್ಷಿತ ತಿರುವುಗಳು ಕೂಡ ಕೃಷ್ಣ-ರುಕ್ಕು ಧಾರಾವಾಹಿಯಲ್ಲಿ ಕಾಣಸಿಗಲಿದೆ. ಅಣ್ಣನ ಅಕಾಲಿಕ ನಿಧನದ ನಂತರ ತನ್ನ ಇಡೀ ಕುಟುಂಬದ ಜವಾಬ್ದಾರಿಯನ್ನು ತನ್ನ ಹೆಗಲಮೇಲೆ ಹಾಕಿಕೊಂಡ ರುಕ್ಕು ಏನೆಲ್ಲಾ ಸವಾಲುಗಳನ್ನು ಎದುರಿಸುತ್ತಾಳೆ ಎಂಬುದನ್ನು ಇಲ್ಲಿ ಸುಂದರವಾಗಿ ತೋರಿಸಲಾಗಿದೆ.

ಪ್ರೀತಿ, ದ್ವೇಷ ಮತ್ತು ವಿಧಿಯಾಟದ ನಡುವೆ ಕೃಷ್ಣ-ರುಕ್ಕುವಿನ ಜೀವನ ಹೀಗೆ ಸಾಗಲಿದೆ ಎನ್ನುವುದು ಈ ಧಾರಾವಾಹಿಯ ಮತ್ತೊಂದು ಕುತೂಹಲಕಾರಿ ಅಂಶ.

ಮೌನ ಗುಡ್ಡೇಮನೆ ರುಕ್ಕು ಆಗಿ ನಟಿಸಿದರೆ, ಅಕ್ಷಯ್ ನಾಯಕ್ ಕೃಷ್ಣನ ಪಾತ್ರ ನಿರ್ವಹಿಸಲಿದ್ದಾರೆ. ಖ್ಯಾತ ನಿರ್ದೇಶಕ, ನಿರ್ಮಾಪಕ , ಬರಹಗಾರ , ನಟ, ಕಲಾ ಸಾಮ್ರಾಟ್  ಎಸ್.ನಾರಾಯಣ್ ಸೂರ್ಯ ಪ್ರಕಾಶ್ ಎಂಬ ಮಹತ್ವದ ಪಾತ್ರ ನಿರ್ವಹಿಸುವ ಮೂಲಕ ತಂಡಕ್ಕೆ ಬಲ ನೀಡಿದ್ದಾರೆ. ಹಲವು ವರ್ಷಗಳ ನಂತರ ಕನ್ನಡ ಕಿರುತೆರೆಗೆ ಕಮ್ ಬ್ಯಾಕ್ ಆಗಿದ್ದಾರೆ ಖ್ಯಾತ ನಟಿ ಸುಚಿತ್ರ, ಗಾಯಕ ನವೀನ ಸಜ್ಜು ಹೀಗೆ ಮುಂತಾದ ಅತ್ಯದ್ಭುತ ಕಲಾವಿದರುಗಳು ನಟಿಸಿರುವುದು ಈ ಧಾರಾವಾಹಿಯ ತೂಕವನ್ನು ಹೆಚ್ಚಿಸುತ್ತದೆ. ಧೃತಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲೀಪ್ ರಾಜ್ ಹಾಗೂ ಶ್ರೀ ವಿದ್ಯಾ ನಿರ್ಮಿಸಿರುವ ಕೃಷ್ಣ ರುಕ್ಕು ಧಾರಾವಾಹಿಯಲ್ಲಿ ಮನಸೆಳೆಯುವ ಕಥೆ ಮತ್ತು ಭಾವನಾತ್ಮಕ ಅಭಿನಯಗಳು ಪ್ರೇಕ್ಷಕರಿಗೆ ಕಾಣಸಿಗಲಿದೆ.

ಕೃಷ್ಣ-ರುಕ್ಕು ಧಾರಾವಾಹಿ ಬಗ್ಗೆ ಮಾತನಾಡಿದ ಜೀ ಕನ್ನಡ ವಾಹಿನಿಯ ಚೀಫ್ ಚಾನೆಲ್ ಆಫೀಸರ್ ದೀಪಕ್ ಶ್ರೀರಾಮುಲು, ” ಜೀ ಕನ್ನಡ ವಾಹಿನಿ ಯಾವಾಗಲೂ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವ ನೈಜ ಭಾವನೆಗಳು ಮತ್ತು ಕೌಟುಂಬಿಕ ಮೌಲ್ಯಗಳನ್ನೊಳಗೊಂಡ ಕಥೆಗಳನ್ನು ವೀಕ್ಷಕರಿಗೆ ತಲುಪಿಸಲು ಇಚ್ಚಿಸುತ್ತದೆ.’ಕೃಷ್ಣ ರುಕ್ಕು’ ಧಾರಾವಾಹಿಯು ಪ್ರೀತಿ, ಜವಾಬ್ದಾರಿ ಮತ್ತು ವಿಧಿಯಾಟದ ಸುತ್ತ ನಡೆಯುವ ಒಂದು ಸುಂದರವಾದ ಕಥೆಯಾಗಿದೆ. ಈ ಧಾರಾವಾಹಿಯಲ್ಲಿನ ವೈವಿಧ್ಯಮಯ ಪಾತ್ರಗಳು ಮತ್ತು ಕುತೂಹಲಕಾರಿ ಕಥೆಯು ವೀಕ್ಷಕರ ಮನಸ್ಸನ್ನು ಗೆಲ್ಲುವುದಲ್ಲದೆ, ನಮ್ಮ ಕಾರ್ಯಕ್ರಮಗಳನ್ನು ಇನ್ನಷ್ಟು ಬಲಪಡಿಸಲಿದೆ ಎಂಬ ನಂಬಿಕೆ ನಮಗಿದೆ” ಎಂದರು.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8420 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment