Tuesday, 17 November 2026 — Kannadavahini
BREAKING NEWS
ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ
ಅಪರಾಧ

ನಕಲಿ ಸಹಿಯ ಚೆಕ್ ನೀಡಿ ವಂಚಿಸಿದ ನಟಿ ವಿಸ್ಮಯ ಗೌಡ ಅರೆಸ್ಟ್

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 22 ವೀಕ್ಷಣೆಗಳು
vismaya gowda
vismaya gowda

ಬೆಂಗಳೂರು: ಸಾಲ ಪಡೆದು ವಂಚಿಸಿದ ಆರೋಪದ ಮೇಲೆ ಚಿತ್ರನಟಿ ಹಾಗೂ ನಿರ್ದೇಶಕಿ ವಿಸ್ಮಯ ಗೌಡ ವಿರುದ್ಧ ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ವಿಸ್ಮಯ ಗೌಡ ಅವರು ಶಕ್ತಿಗಣಪತಿ ನಗರದ ಬಿಂದು ಎಂಬ ಮಹಿಳೆಯಿಂದ 6.5 ಲಕ್ಷ ರೂ. ಸಾಲ ಪಡೆದು, ನಕಲಿ ಸಹಿ ಮಾಡಿದ ಚೆಕ್‌ ಕೊಟ್ಟು ವಂಚಿಸಿದ್ದರು. ಈ ಸಂಬಂಧ ಬಿಂದು ನೀಡಿದ ದೂರು ಆಧರಿಸಿ ವಿಸ್ಮಯ ಗೌಡ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ.
ವಿಸ್ಮಯ ಗೌಡ, 2019 ರಲ್ಲಿಇನ್‌ಸ್ಟಾಗ್ರಾಂ ಮೂಲಕ ಬಿಂದುಗೆ ಪರಿಚಯವಾಗಿದ್ದರು. ತಾನು ಸಿನಿಮಾ ನಿರ್ದೇಶಕಿ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಲೈಫ್‌ ಕೋಚ್‌ ಆಗಿರುವುದಾಗಿ ಹೇಳಿಕೊಂಡಿದ್ದರು. ವಿಸ್ಮಯ ಗೌಡ ನಡೆಸುತ್ತಿದ್ದ ತರಗತಿಗಳಿಗೆ ಬಿಂದು ಹಾಜರಾಗಿದ್ದರು. ಬಳಿಕ ಅವರ ನಡುವೆ ಆತ್ಮೀಯತೆ ಬೆಳೆದು, ದೂರುದಾರರ ಕ್ಲಿನಿಕ್‌ಗೂ ಭೇಟಿ ಕೊಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪೋಸ್ಟ್‌ ಡೇಟೆಡ್‌ ಚೆಕ್‌:
ವಿಸ್ಮಯ ಗೌಡ 2024ರ ಫೆಬ್ರವರಿಯಲ್ಲಿ ಬಿಂದುರ ಮನೆಗೆ ಹೋಗಿ, ತನಗೆ ಹಣಕಾಸಿನ ತೊಂದರೆಯಿದೆ. ಸಾಲ ಕೊಡುವಂತೆ ಕೇಳಿದ್ದರು. ಪರಿಚಯವಿದ್ದ ಕಾರಣ ಬಿಂದು ಅವರು ತಮ್ಮ ತಾಯಿಯ ಬ್ಯಾಂಕ್‌ ಖಾತೆಯಿಂದ 5 ಲಕ್ಷ ರೂ. ಮತ್ತು ಉಳಿತಾಯದ 1.50 ಲಕ್ಷ ರೂ. ಸೇರಿ ಒಟ್ಟಾರೆ 6.50 ಲಕ್ಷ ರೂ. ಸಾಲ ನೀಡಿದ್ದರು. ಇದಕ್ಕೆ ಪ್ರತಿಯಾಗಿ ವಿಸ್ಮಯ, ಪೋಸ್ಟ್‌ ಡೇಟೆಡ್‌ ಚೆಕ್‌ ಕೊಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೆಲ ತಿಂಗಳ ನಂತರ ಬಿಂದು ಅವರು ಹಣ ವಾಪಸ್‌ ಕೇಳಿದಾಗ ವಿಸ್ಮಯ ಗೌಡ ಸಬೂಬು ಹೇಳಿ ಸತಾಯಿಸಿದ್ದರು. ನಂತರ ಬಿಂದು ಅವರು ವಿಸ್ಮಯ ಗೌಡ ಕೊಟ್ಟಿದ್ದ ಚೆಕ್‌ ಅನ್ನು ಬ್ಯಾಂಕ್‌ಗೆ ಹಾಕಿದ್ದರು. ಆಗ ಬ್ಯಾಂಕ್‌ ಸಿಬ್ಬಂದಿಯು ಚೆಕ್‌ನಲ್ಲಿ ಸಹಿ ವ್ಯತ್ಯಾಸವಿದೆ ಎಂದು ಹೇಳಿ ಚೆಕ್‌ ವಾಪಸ್‌ ಕೊಟ್ಟಿದ್ದರು. ಬಳಿಕ ವಿಸ್ಮಯ ಗೌಡರ ಮೋಸ ಗೊತ್ತಾಗಿ ಬಿಂದು ಅವರು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8420 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment