ಅದೆನೋ ಒಂಥರಾ ವಿಚಿತ್ರವಾದ ನಗು, ವಿಲಕ್ಷಣ ನಟನೆ, ವಿಶಿಷ್ಟ ಶೈಲಿಯ ಡೈಲಾಗ್… ಹೀರೋ ಆಗುವ ಯಾವುದೇ ಲಕ್ಷಣಗಳಿಲ್ಲದೇ ಇದ್ದರೂ ಹೀರೋ ಆಗಿದ್ದೂ ಮಾತ್ರವಲ್ಲ, ಬಾಲಿವುಡ್ ನ ಸೂಪರ್ ಸ್ಟಾರ್ ನಟರ ಸಾಲಿನಲ್ಲಿ ನಿಂತ ದಿಗ್ಗಜ ನಟ ನಾನಾ ಪಾಟೇಕರ್ ಇಹಲೋಕ ತ್ಯಜಿಸಿದ್ದಾರೆ. ಸಿನಿಮಾಗಳಲ್ಲಿ ನಟ ವಿಚಿತ್ರ ವಿಶಿಷ್ಟ ಹಾಗೂ ವಿಲಕ್ಷಣ ನಟನೆ ಹೇಗೋ ಹಾಗೆ ಅವರ ಜೀವನಶೈಲಿ ಕೂಡ ಆಗಿತ್ತು. ಅಂತಹ ವಿಚಿತ್ರ ವಿಶಿಷ್ಟ ಶೈಲಿಯ ಸಿನಿಮಾ ಹಾಗೂ ಜೀವನಶೈಲಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೋಳ್ಳೋಣ.
ಇಡೀ ಕುಟುಂಬವೇ ರೌಡಿಯಂ ಜೀವನ ನಡೆಸುತ್ತಿತ್ತು. ಆದರೆ ಮಕ್ಕಳು ಈ ವೃತ್ತಿ ಮಾಡಬಾರದು ಎಂದು ಪುಣೆಯಿಂದ ಮುಂಬೈಗೆ ಬಂದ ತಾಯಿ ನಾಲ್ಕು ಗೋಡೆಗಳ ಮಧ್ಯೆ ಇದ್ದರೂ ತಾಯಿಗೆ ಅದೇ ಜೀವನವಾಗಿತ್ತು. ಮಕ್ಕಳು ಸರಿಯಾದ ದಾರಿಯಲ್ಲಿ ಸಾಗಬೇಕು ಎಂಬುದು ಅವರ ಹೋರಾಟವಾಗಿತ್ತು. ಕೊನೆಯ ಮಗ ಕಲಾವಿದ ಆಗುತ್ತಾನೆ, ಸೂಪರ್ ಸ್ಟಾರ್ ಆಗುತ್ತಾನೆ ಅನ್ನೋ ಊಹೆಯೂ ಇರಲಿಲ್ಲ. ಆದರೆ ಅದೇ ಮಗ ಸೂಪರ್ ಸ್ಟಾರ್ ಆಗಿದ್ದರೂ ಅಮ್ಮ ಕೊತ್ತಂಬರಿ ಸೊಪ್ಪು ತಗೊಂಡು ಬಾ ಅಂದರೆ ಚಿಲ್ಲರೆ ಕಾಸು ಹಿಡಿದು ಅಂಗಡಿಗೆ ಹೋಗಿ ತಂದು ತಗೊಂಡು ಬಂದು ಕೊಡುತ್ತಿದ್ದರು. ಅಂತಹ ನಟ ಮತ್ತಾರೂ ಅಲ್ಲ. ಬಾಲಿವುಡ್ ನ ದಿಗ್ಗಜ ನಟ ನಾನಾ ಪಾಟೇಕರ್.
ಹೌದು ಅಂತಹ ಒಬ್ಬ ಬಾಲಿವುಡ್ ನಲ್ಲಿ ಮತ್ತೆ ಕಾಣಿಸುವುದಿಲ್ಲವೇನೋ? ಬಾಲಿವುಡ್ ನಲ್ಲಿ ಸೂಪರ್ ಸ್ಟಾರ್ ಆಗಿ ಕೋಟಿ ಕೋಟಿ ಆಸ್ತಿ ಸಂಪಾದಿಸಿದರೂ ಸರಳ ಜೀವನ ನಡೆಸುತ್ತಾ, ಮಾನವೀಯತೆ, ಕಳಕಳಿ, ಕಾಳಜಿ ತೋರುತ್ತಿದ್ದ ಅಪರೂಪದ ನಟ. ಅಕ್ಟೋಬರ್ 7ರಂದು ರಾತ್ರಿ 75 ವರ್ಷದ ನಾನಾ ಪಾಟೇಕರ್ ಗೋವಾದ ತಮ್ಮ ಮನೆಯಲ್ಲಿದ್ದಾಗ ಹೃದಯ ಸ್ತಂಭನದಿಂದ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸುಮಾರು 45 ನಿಮಿಷಗಳ ಕಾಲ ಅವರಿಗೆ ಸಿಪಿಆರ್ ಸೇರಿದಂತೆ ಹಲವು ತುರ್ತು ಚಿಕಿತ್ಸೆ ನೀಡಿದರೂ ಫಲ ನೀಡದೇ ಸೆಪ್ಟೆಂಬರ್ 8ರಂದು ಮುಂಜಾನೆ 5.30ರ ಸುಮಾರಿಗೆ ನಿಧನರಾಗಿದ್ದಾರೆ ಎಂದು ವೈದ್ಯರು ಘೋಷಿಸಿದರು.
ವಿಶ್ವನಾಥ್ ನಾನಾ ಪಾಟೇಕರ್ ನೋಡಲು ಸ್ಫುರದ್ರೂಪಿಯೇನಲ್ಲ. ನೋಡಲು ಸುಂದರವಾಗಿಲ್ಲ ಅನ್ನೋ ಕಾರಣಕ್ಕೆ ಎಲ್ಲರೂ ಕಡೆಗಣಿಸುತ್ತಿದ್ದಾರೆ ಎಂದೇ ಭಾವಿಸಿದ್ದರು. ಮನೆಯಲ್ಲಿ ಕಷ್ಟ ನೋಡಲು ಆಗದೇ ಸೇನೆ ಸೇರಿದರು. ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಸಿಕ್ಕ ಸಿಕ್ಕ ಕೆಲಸ ಮಾಡಿದರು. ಯಾವುದೂ ಸರಿಯಾಗಿ ಕೈ ಹಿಡಿಯಲಿಲ್ಲ. ಅದೆನೂ ಅದೃಷ್ಟವೋ ಏನೋ ಸಿನಿಮಾಗೆ ಕರೆ ಬಂದಿದ್ದೇ ಬಂತು. ಕೆಲವೇ ದಿನಗಳಲ್ಲಿ ವಿಚಿತ್ರ ಮ್ಯಾನರಿಸಂ, ಡೈಲಾಗ್ ಹೇಳುವ ವಿಶಿಷ್ಟ ಶೈಲಿ, ವಿಲಕ್ಷಣ ನಟನೆಗಳಿಂದ ಮನೆಮಾತಾದರು. ಅಮಿತಾಬ್ ಬಚ್ಚನ್, ರಾಜ್ ಕುಮಾರ್, ದಿಲೀಪ್ ಕುಮಾರ್, ಪರೇಶ್ ರಾವಲ್, ಅಕ್ಷಯ್ ಕುಮಾರ್, ಅನಿಲ್ ಕಪೂರ್, ಸಲ್ಮಾನ್ ಖಾನ್ ಸೇರಿದಂತೆ ದೊಡ್ಡ ದೊಡ್ಡ ನಟರ ಜೊತೆ ನಟಿಸಿ ಸೈ ಎನಿಸಿಕೊಂಡರು.
ಮಹಾರಾಷ್ಟ್ರದಲ್ಲಿ ೧೯೫೧ರಲ್ಲಿ ಜನಿಸಿದ ನಾನಾ ಪಾಟೇಕರ್ ೧೯೭೮ರಲ್ಲಿ ಗಮನ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಸಲಾಂ ಬಾಂಬೆ ಹಾಗೂ ಪರಿಂದ ಚಿತ್ರದ ಮೂಲಕ ಪ್ರಖ್ಯಾತರಾದ ನಾನಾ ಪಾಟೇಕರ್ ಪರಿಂದ ಚಿತ್ರದಲ್ಲಿ ಭೂಗತ ಲೋಕದ ದೊರೆ ಅಣ್ಣಾ ಸೇಥ್ ಪಾತ್ರಕ್ಕಾಗಿ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಗೆ ಪಾತ್ರರಾಗಿದ್ದರು.
ನಂತರ ನಿರ್ಮಾಪಕ, ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ ನಾನಾ ಪಾಟೇಕರ್ ಅಂಗಾರ್, ತಿರಂಗ, ಕ್ರಾಂತಿವೀರ್, ಅಗ್ನಿಸಾಕ್ಷಿ, ಖಾಮೋಷಿ, ಯಶವಂತ್, ಅಬ್ ತಕ್ ಚಪ್ಪನ್, ಅಪಹರಣ್, ಹೌಸ್ ಫುಲ್, ರಾಜನೀತಿ ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದರು. ಅಲ್ಲದೇ ಮೂರು ವಿಭಾಗಗಳಲ್ಲಿ ಚಲನ ಚಿತ್ರ ಪ್ರಶಸ್ತಿ ಪಡೆದ ಮೊದಲ ನಟ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಶ್ರೇಷ್ಠ ಪೋಷಕ ನಟ (ಪರಿಂದ), ಶ್ರೇಷ್ಠ ನಟ (ಕ್ರಾಂತಿವೀರ್), ಅತ್ಯುತ್ತಮ ಖಳನಟ (ಅಂಗಾರ್ ಮತ್ತು ಅಪಹರಣ್) ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದ್ದಾರೆ. ಅಗ್ನಿ ಸಾಕ್ಷಿ ಚಿತ್ರಕ್ಕಾಗಿ ಎರಡನೇ ಬಾರಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಪಾತ್ರರಾದರು. ೨೦೧೩ರಲ್ಲಿ ಚಲನಚಿತ್ರಗಳಲ್ಲಿ ಸಲ್ಲಿಸಿದ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿ ನೀಡಿ ಕೇಂದ್ರ ಸರ್ಕಾರ ಪುರಸ್ಕಾರ ನೀಡಿತ್ತು.
ಹಾಗಾಂತ ನಾನಾ ಪಾಟೇಕರ್ ಸಿನಿಮಾದಲ್ಲಿ ಯಶಸ್ಸು ಸಿಕ್ಕಿದಾಗ ಆಕಾಶದಲ್ಲಿ ತೇಲಾಡಲಿಲ್ಲ. ಸ್ಟಾರ್ ನಟರಾಗಿದ್ದರೂ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದರು. ಅಂಗಡಿಗೆ ಹೋಗಿ ತರಕಾರಿ ತರುತ್ತಿದ್ದರು. ದೊಡ್ಡ ದೊಡ್ಡ ನಿರ್ಮಾಪಕರ ಜೊತೆ ಮನೆಯಲ್ಲಿ ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿದ್ದಾಗಲೇ ತಾಯಿ ಕರೆದಾಗ ಹೋಗಿ ಅವರಿಗೆ ನೆರವಾಗುತ್ತಿದ್ದರು. ರೈತರು ಸಂಕಷ್ಟದಲ್ಲಿದ್ದಾರೆ ಅಂತ ಗೊತ್ತಾದಾಗ ಅವರಿಗೆ ಹಣಕಾಸಿನ ನೆರವು ನೀಡುತ್ತಿದ್ದರು. ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ದೇಶ ಅಪಾಯದಲ್ಲಿದೆ ಅಂತ ಗೊತ್ತಾದಾಗ ಸೇನೆ ಸೇರಿ ದೇಶ ಕಾಯುವ ಕೆಲಸವನ್ನು ಮಾಡಿದರು. ಹೀಗೆ ನಾನಾ ಪಟೇಕರ್ ಅವರ ಜೀವನದ ಬಗ್ಗೆ ಹೇಳುತ್ತಾ ಹೋದರೆ ಒಂದೆರಡು ದಿನಗಳು ಸಾಕಾಗುವುದಿಲ್ಲ.
೧೯೮೦ರಲ್ಲಿ ಟೆರಿಟೋರಿಯಲ್ ಸೇನೆಗೆ ಸೇರಿದ್ದ ನಾನಾ ಪಾಟೇಕರ್ ೧೯೯೦ರ ಮೂರು ವರ್ಷ ತರಬೇತಿ ಪಡೆದಿದ್ದರು. ೧೯೯೧ರಲ್ಲಿ ಪ್ರಹಾರ ಚಿತ್ರಕ್ಕಾಗಿ ಭಾರತೀಯ ಸೇನೆಯಲ್ಲಿ ಶೂಟಿಂಗ್ ಅಭ್ಯಾಸ ಆರಂಭಿಸಿದ ನಾನಾ ಪಟೇಕರ್ ನಂತರ ಅದನ್ನು ಹಾವ್ಯಾಸವಾಗಿ ಮುಂದುವರಿಸಿದರು. ೨೦೦೪ರಲ್ಲಿ ಇಂದೋರ್ ನಲ್ಲಿ ನಡೆದ ಬಿಎಸ್ ಎಫ್ ರೆಯೊಟಿ ರೇಂಜ್ ನಲ್ಲಿ ನಡೆದ ೪೮ನೇ ರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದ ಅವರು, ೩೦೦ ಮೀ.ಬಿಗ್ ಬೋರ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು. ಅಲ್ಲದೇ ಮೂರು ವರ್ಷಗಳ ನಂತರ ಅಂದರೆ ೨೦೦೭ರಲ್ಲಿ ತಂಡ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದರೆ ೬೦೦ ಅಂಕಗಳ ಪೈಕಿ ೫೪೯ ಅಂಕ ಪಡೆದು ವೈಯಕ್ತಿಕ ವಿಭಾಗದಲ್ಲಿ ೧೨ನೇ ಸ್ಥಾನ ಗಳಿಸಿದ್ದರು.
೧೯೯೯ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕಾರ್ಗಿಲ್ ಯುದ್ಧ ನಡೆದಾಗ ಅಂದಿನ ಗೃಹ ಸಚಿವ ಜಾರ್ಜ್ ಫೆರ್ನಾಂಡೀಸ್ ಅವರನ್ನು ಭೇಟಿ ಮಾಡಿ ಸೇನೆಗೆ ಸೇರಿಕೊಂಡು ಕಾರ್ಗಿಲ್ ಯುದ್ಧದಲ್ಲಿ ಹೋರಾಡಲು ಮನವಿ ಮಾಡಿದ್ದರು. ಅಲ್ಲದೇ ತಮಗೆ ಶೂಟಿಂಗ್ ನಲ್ಲಿ ಇರುವ ಅನುಭವಗಳನ್ನು ಮನದಟ್ಟು ಮಾಡಿದರು. ಕೇಂದ್ರ ಸರ್ಕಾರ ನಾನಾಗೆ ಸೇನೆಯ ತುರ್ತು ಪ್ರತಿಕ್ರಿಯೆ ತಂಡ ಅಂದರೆ ಕ್ವಿಕ್ ರಿಯಾಕ್ಷನ್ ಟೀಂನಲ್ಲಿ ಸ್ಥಾನ ನೀಡಿದರು. ಸುಮಾರು ೬೦ ದಿನಗಳ ಕಾಲ ಜಮ್ಮು ಕಾಶ್ಮೀರದ ವಿವಿದೆಡೆ ಸೇವೆ ಸಲ್ಲಿಸಿದ ನಾನಾ ೨೦ ಕೆಜಿ ತೂಕ ಇಳಿಸಿಕೊಂಡಿದ್ದರು.
ನಾನಾ ಪಾಟೇಕರ್ ಕಲಾವಿದರಾಗಿ ಅಲ್ಲದೇ ರೈತರು ಸಂಕಷ್ಟದಲ್ಲಿದ್ದಾಗ ಅವರಿಗೆ ನೆರವಾಗಿ ಮಾನವೀಯತೆ ಮೆರೆದಿದ್ದರು. ಕೆಲವು ವರ್ಷಗಳ ಹಿಂದೆ ಬೆಳೆ ನಷ್ಟದಿಂದ ರೈತರು ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಗ ನೆರವು ನೀಡಲು ಸರ್ಕಾರ ಮೀನಮೇಷ ಎಣಿಸುತ್ತಿತ್ತು. ಆಗ ತಾನೇ ೧೬ ಕೋಟಿ ರೂ. ಮೌಲ್ಯದ ಕಾರು ಖರೀದಿಸಲು ಮುಂದಾಗಿದ್ದ ನಾನಾ ಪಾಟೇಕರ್ ಈ ವಿಷಯ ತಿಳಿದು ಕಾರು ಖರೀದಿಸುವ ದುಡ್ಡನ್ನು ಒಬ್ಬೊಬ್ಬ ರೈತನಿಗೆ ತಲಾ ೧೫ ಸಾವಿರದಂತೆ ಹಂಚಿದರು. ಹಣ ಹಂಚಿಕೆ ವೇಳೆ ಸ್ಥಳಕ್ಕೆ ಆಗಮಿಸದೇ ಪ್ರಚಾರ ಪಡೆಯಲು ಹಿಂದೇಟು ಹಾಕಿದರು. ಕರ್ನಾಟಕ ಹಾಗೂ ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ನಾನಾ ಸ್ವರ ಸಾಮ್ರಾಜ್ಞಿ ಗಂಗೂ ಬಾಯಿ ಹಾನಗಲ್ ಅವರ ಅಭಿಮಾನಿಯಾಗಿ ಬೆಳಗಾವಿಗೂ ಬಂದು ಹೋಗುತ್ತಿದ್ದರು.
ಹೀಗೆ ವಿಶಿಷ್ಟ, ವಿಚಿತ್ರ ಹಾಗೂ ವಿಲಕ್ಷಣ ರೀತಿಯ ನಟನೆ ಜೊತೆಗೆ ಸರಳ, ಸಜ್ಜನಿಕೆ ಹಾಗೂ ಮಾನವೀಯತೆ ಹೊಂದಿದ್ದ ಅಪರೂಪದ ನಟನನ್ನು ಚಿತ್ರರಂಗ ಕಳೆದುಕೊಂಡಿದೆ. ಅಪರೂಪದ ನಟನನ್ನು ಕಳೆದುಕೊಂಡ ಚಿತ್ರರಂಗ ಬಡವಾಗಿದೆ. ಪರಶ್ ರಾವಲ್, ರಜನಿಕಾಂತ್, ಅಕ್ಷಯ್ ಕುಮಾರ್, ಅಮಿತಾಬ್ ಬಚ್ಚನ್ ಸೇರಿದಂತೆ ಬಾಲಿವುಡ್ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.
