Friday, May 15, 2026
Google search engine
Homeದೇಶಬಿಹಾರ ಮತದಾರರ ಪರಿಷ್ಕೃತ ಅಂತಿಮ ಪಟ್ಟಿ ಬಿಡುಗಡೆ: 18 ಲಕ್ಷ ಮತದಾರರು ಸೇರ್ಪಡೆ

ಬಿಹಾರ ಮತದಾರರ ಪರಿಷ್ಕೃತ ಅಂತಿಮ ಪಟ್ಟಿ ಬಿಡುಗಡೆ: 18 ಲಕ್ಷ ಮತದಾರರು ಸೇರ್ಪಡೆ

ಮುಂದಿನ ಕೆಲ ತಿಂಗಳಲ್ಲಿ ಚುನಾವಣೆ ನಡೆಯಲಿರುವ ರಾಜ್ಯದ ಅಂತಿಮ ಮತದಾರರ ಅಂತಿಮ ಪರಿಷ್ಕೃತ ಪಟ್ಟಿಯನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದು, ಕೈಬಿಡಲಾಗಿದ್ದ 18 ಲಕ್ಷ ಮತದಾರರು ಮರು ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳ ಆರೋಪ ಹಾಗೂ ಸುಪ್ರೀಂಕೋರ್ಟ್ ಛಿಮಾರಿ ಹಿನ್ನೆಲೆಯಲ್ಲಿ ಹಲವು ತಿಂಗಳ ಕಾಲ ನಡೆದ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಗಿದೆ. ಅದರ ಲಿಂಕ್ ಅನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.

ಎರಡು ದಶಕಗಳ ನಂತರ (22 ವರ್ಷ) ಬಿಹಾರದಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆ ಕಾರ್ಯ (ಎಸ್​ಐಆರ್) ನಡೆದಿದೆ. ಆಗಸ್ಟ್ 1ರಂದು ಕರಡು ಮತದಾರರ ಪಟ್ಟಿ ಮುದ್ರಿಸಲಾಗಿತ್ತು. 7.25 ಕೋಟಿ ಮತದಾರರ ಹೆಸರು ಈ ಕರಡು ಪಟ್ಟಿಯಲ್ಲಿ ಇದ್ದವು. ಈ ಪಟ್ಟಿಯಲ್ಲಿ 65 ಲಕ್ಷ ಮತದಾರರನ್ನು ಕೈಬಿಡಲಾಗಿತ್ತು. ಈ ಪಟ್ಟಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು.

ದೊಡ್ಡ ಸಂಖ್ಯೆಯಲ್ಲಿ ಮತದಾರರನ್ನು ಕೈಬಿಡುವ ಹಿಂದೆ ರಾಜಕೀಯ ತಂತ್ರಗಾರಿಕೆ ಅಡಗಿದೆ. ಕೇಂದ್ರ ಸರ್ಕಾರದ ಜೊತೆ ಕೇಂದ್ರ ಚುನಾವಣಾ ಆಯೋಗ ಮತಗಳವಿಗೆ ಕೈ ಜೋಡಿಸಿವೆ ಎಂದು ಆರೋಪಿಸಿತ್ತು. ಅಲ್ಲದೇ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪರಿಷ್ಕರಿಸಲು ಸೂಚಿಸಿತ್ತು. ಈ ಕರಡು ಪಟ್ಟಿಯಲ್ಲಿ ಯಾವುದೇ ತಗಾದೆಗಳು ಇದ್ದರೆ ಅವನ್ನು ಸಲ್ಲಿಸಲು ಸೆಪ್ಟೆಂಬರ್ 1ರವರೆಗೂ ಅವಕಾಶ ಕೊಡಲಾಗಿತ್ತು.

ಎಸ್​ಐಆರ್​ಗೆ ವಿಪಕ್ಷಗಳಿಂದ ತೀವ್ರ ಆಕ್ಷೇಪ ಬಂದಿತ್ತು. ಕೋಟ್ಯಂತರ ಪ್ರಜೆಗಳನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಹೊರಗಿಡಲು ಎಸ್​ಐಆರ್ ಹೆಸರಿನಲ್ಲಿ ಮಾಡಿರುವ ಹುನ್ನಾರ ಎಂದು ಕಾಂಗ್ರೆಸ್, ಆರ್​ಜೆಡಿ ಸೇರಿದಂತೆ ವಿಪಕ್ಷಗಳು ಬಾರಿ ಬಾರಿ ಆಕ್ಷೇಪಿಸುತ್ತಿವೆ. ರಾಹುಲ್ ಗಾಂಧಿ ಅವರು ‘ಮತಕಳವು’ ಅಭಿಯಾನವನ್ನೇ ದೇಶಾದ್ಯಂತ ಆರಂಭಿಸಿದ್ದಾರೆ.

ಇದೇ ವೇಳೆ ಚುನಾವಣಾ ಆಯೋಗವು ವಿಪಕ್ಷಗಳ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದೆ. ಯಾವುದೇ ಅರ್ಹ ನಾಗರಿಕರ ಹೆಸರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರ ವಹಿಸಿದ್ದೇವೆ. ಅನರ್ಹ ವ್ಯಕ್ತಿ ಈ ಪಟ್ಟಿಗೆ ಸೇರದಂತೆಯೂ ಎಚ್ಚರ ವಹಿಸಿದ್ದೇವೆ ಎಂದು ಆಯೋಗ ಸ್ಪಷ್ಟಪಡಿಸಿದೆ.

ಬಿಹಾರ ಚುನಾವಣೆ ಯಾವಾಗ?

ಬಿಹಾರ ವಿಧಾನಸಭೆಯ ಸದಸ್ಯಬಲ 243 ಇದೆ. ಸದ್ಯ ಇಲ್ಲಿ ಬಿಜೆಪಿ-ಜೆಡಿಯು ಇರುವ ಎನ್​ಡಿಎ ಮೈತ್ರಿಕೂಟ ಅಧಿಕಾರದಲ್ಲಿದೆ. ಈ ವಿಧಾನಸಭೆಯ ಅವಧಿ ನವೆಂಬರ್ 22ಕ್ಕೆ ಮುಗಿಯುತ್ತದೆ. ಅಷ್ಟರಲ್ಲಿ ಚುನಾವಣೆ ಪ್ರಕಟಿಸುವ ನಿರೀಕ್ಷೆ ಇದೆ. ಸದ್ಯದಲ್ಲೇ ಚುನಾವಣಾ ಆಯೋಗವು ಮತದಾನಕ್ಕೆ ದಿನಾಂಕಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ.

ಬಿಹಾರ ವಿಧಾನಸಭೆಗೆ ಹಿಂದಿನ ಬಾರಿ ಚುನಾವಣೆ ಆಗಿದ್ದು ಕೋವಿಡ್ ಕಾಲಘಟ್ಟದಲ್ಲಿ. ಮೂರು ಹಂತಗಳಲ್ಲಿ ಮತದಾನ ಆಗಿತ್ತು. ಈ ಬಾರಿ ಬಿಹಾರದಲ್ಲಿ ಮಾತ್ರವೇ ಚುನಾವಣೆ ಇರುವುದರಿಂದ ಒಂದೇ ಹಂತದಲ್ಲಿ ಮತದಾನ ನಡೆಸುವ ಸಾಧ್ಯತೆ ಇಲ್ಲದಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments