ಮನೆಯೊಂದಕ್ಕೆ ನುಗ್ಗಿದ 5 ಮಂದಿ ದುಷ್ಕರ್ಮಿಗಳು ಮನೆ ಮಾಲೀಕನನ್ನು ಕಟ್ಟಿ ಹಾಕಿ ಆಕೆಯ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬಿಹಾರದಲ್ಲಿ ನಡೆದಿದೆ.
ದುಷ್ಕರ್ಮಿಗಳ ದಾಳಿಯಿಂದ ಜರ್ಜರಿತಳಾಗಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಖಾಸಗಿ ಭಾಗದಲ್ಲಿ ಜೀವಂತ ಗುಂಡು, ಕಲ್ಲು ಹಾಗೂ ಮರದ ತುಂಡು ಪತ್ತೆಯಾಗಿರುವ ವೈದ್ಯರು ಆಘಾತಕ್ಕೆ ಒಳಗಾಗಿದ್ದಾರೆ.
ಬೇಗುಸರಾಯಿ ಜಿಲ್ಲೆಯ ಚಾಣಕ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂನ್ 11ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಂದು ರಾತ್ರಿ 11.30ರ ಸುಮಾರಿಗೆ ಶೌಚಾಯಕ್ಕೆ ಹೋಗಿದ್ದ ವೇಳೆ ಮನೆಗೆ 5 ಮಂದಿ ದುಷ್ಕರ್ಮಿಗಳು ನುಗ್ಗಿದ್ದಾರೆ. ನನ್ನ ಗಂಡನನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು. ನಾನು ಹೊರಗೆ ಬರುತ್ತಿದ್ದಂತೆ ಹಿಡಿದುಕೊಂಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ಘಟನೆಯನ್ನು ವಿವರಿಸಿದ್ದಾರೆ.
ಮನೆಯ ಬಳಿಯ ನಿರ್ಜನ ಪ್ರದೇಶಕ್ಕೆ ನನ್ನನ್ನು ಕರೆದೊಯ್ದ ಅವರು, ಅತ್ಯಾಚಾರ ಎಸಗಿದ್ದಾರೆ. ನಾನು ಕಿರುಚಿಕೊಂಡಾಗ ನನ್ನ ಎದೆ ಭಾಗ ಹಾಗೂ ತೊಡೆಯ ಬಳಿ ಬ್ಲೇಡ್ ನಿಂದ ಕೊಯ್ದಿದ್ದಾರೆ.
ಅತ್ಯಾಚಾರದ ವೇಳೆ ನಾನು ಪ್ರಜ್ಞೆ ತಪ್ಪಿದ್ದೆ. ಹಾಗಾಗಿ ಅವರು ನಂತರ ಏನು ಮಾಡಿದರು ಎಂಬುದು ತಿಳಿಯಲಿಲ್ಲ. ಆದರೆ ಆಸ್ಪತ್ರೆಯಲ್ಲಿ ಬುಲೆಟ್, ಕಲ್ಲು ಹಾಗೂ ಮರದ ತುಂಡು ಪತ್ತೆಯಾಗಿದೆ ಎಂದು ಹೇಳಿದರು ಎಂದು ಆಕೆ ವಿವರಿಸಿದ್ದಾರೆ.
ನನಗೆ ಎಚ್ಚರವಾದ ಕೂಡಲೇ ನಾನು ನನ್ನ ಸಂಬಂಧಿಯನ್ನು ಕರೆದೆ. ಆತ ಬಂದು ಗಂಡನನ್ನು ಕೋಣೆಯಿಂದ ಬಿಡುಗಡೆ ಮಾಡಿದ. ನಂತರ ಅವರೆಲ್ಲಾ ಸೇರಿ ನನ್ನನ್ನು ಆಸ್ಪತ್ರೆಗೆ ಸಾಗಿಸಿದರು. ಈಗಲೂ ನನಗೆ ನೋವಿದೆ ಎಂದು ಆಕೆ ಹೇಳಿದ್ದಾರೆ.



