ಕೇದಾರನಾಥಕ್ಕೆ ಹೊರಟ್ಟಿದ್ದ ಖಾಸಗಿ ಹೆಲಿಕಾಫ್ಟರ್ ತಾಂತ್ರಿಕ ದೋಷದಿಂದ ಹೆದ್ದಾರಿ ಮಧ್ಯೆದಲ್ಲೇ ತುರ್ತು ಭೂಸ್ಪರ್ಶ ಮಾಡಿದ ಘಟನೆ ಉತ್ತರಾಖಂಡದ ರುದ್ರಪ್ರಯಾಗದಲ್ಲಿ ನಡೆದಿದೆ.
ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಹೆಲಿಕಾಫ್ಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ಘಟನೆಯಲ್ಲಿ ಪೈಲೆಟ್ ಸೇರಿದಂತೆ ಹೆಲಿಕಾಫ್ಟರ್ ನಲ್ಲಿದ್ದ 5 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
#WATCH | Uttarakhand | A private helicopter en route to Kedarnath Dham made an emergency landing in Guptkashi of Rudraprayag district due to a technical fault. All the people on board the helicopter are safe: Uttarakhand ADG Law and Order Dr V Murugeshan
CEO of UCADA has… pic.twitter.com/Zj1SLluZ7N
— ANI (@ANI) June 7, 2025
ಕ್ರೆಸ್ಟೆಲ್ ವಿಮಾನಯಾನ ಸಂಸ್ಥೆಗೆ ಸೇರಿದ ಈ ಹೆಲಿಕಾಫ್ಟರ್ ಹೆದ್ದಾರಿ ಮಧ್ಯೆದಲ್ಲಿ ಇಳಿದ ಕಾರಣ ಹೆಲಿಕಾಫ್ಟರ್ ಹಾಗೂ ಕಾರು ಜಖಂಗೊಂಡಿದೆ. ಉಳಿದಂತೆ ಯಾವುದೇ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಹೆಲಿಕಾಪ್ಟರ್ ರುದ್ರಪ್ರಯಾಗ ಜಿಲ್ಲೆಯ ಬಡಾಸು ಪ್ರದೇಶದ ಹೆಲಿಪ್ಯಾಡ್‌ನಿಂದ ಮಧ್ಯಾಹ್ನ 12:52ಕ್ಕೆ ಹೊರಟಿತ್ತು. ಆದರೆ ಟೇಕ್ ಆಫ್ ನಂತರ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪೈಲಟ್ ಹೆದ್ದಾರಿಯಲ್ಲಿಯೇ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



