Thursday, September 3, 2026
Google search engine
Homeಅಪರಾಧಬೆಂಗಳೂರಿನಲ್ಲಿ ಕಾಮಿಕ್ ಪುಸ್ತಕದಲ್ಲಿ ಅಡಗಿದ್ದ 40 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ!

ಬೆಂಗಳೂರಿನಲ್ಲಿ ಕಾಮಿಕ್ ಪುಸ್ತಕದಲ್ಲಿ ಅಡಗಿದ್ದ 40 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ!

ಮಕ್ಕಳು ಓದುವ ಕಾಮಿಕ್ಸ್ ಪುಸ್ತಕದಲ್ಲಿ ಅಡಗಿಸಿ ತರುತ್ತಿದ್ದ ಸುಮಾರು 40 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ.

ದೋಹಾ (ಕತಾರ್​) ದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 4 ಕೆಜಿ ತೂಕದ ಕೊಕೇನ್ ಅನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇದರ ಮೌಲ್ಯ 40 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಭಾರತೀಯ ಮೂಲದ ಪ್ರಯಾಣಿಕ ಜೂನ್ 18ರಂದು ಮುಂಜಾನೆ ಆಗಮಿಸಿದಾಗ ಲಗೇಜ್ ತಪಾಸಣೆ ಮಾಡಿದರು. ಈ ವೇಳೆ ಎರಡು ಕಾಮಿಕ್ಸ್ ಪುಸ್ತಕಗಳು ಹೆಚ್ಚು ತೂಕ ಇದ್ದಿದ್ದರಿದ ಅನುಮಾನಗೊಂಡ ಅಧಿಕಾರಿಗಳು ತಪಾಸಣೆ ನಡೆಸಿದಾಗ ಕಾಮಿಕ್ಸ್ ಪುಸ್ತಕಗಳ ಕವರ್ ಮೇಲೆ ಸೀಲ್ ಮಾಡಿದ ರೀತಿಯಲ್ಲಿದ್ದ ಕೋಕೆನ್ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ಪ್ರಕರಣ ಸಂಬಂಧ ಡಿಆರ್​ಐ ಅಧಿಕರಿಗಳು ಎನ್‌ಡಿಪಿಎಸ್‌ ಕಾಯ್ದೆ ಅಡಿ ಪ್ರಯಾಣಿಕನನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಪ್ರಯಾಣಿಕನನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments