Tuesday, July 7, 2026
Google search engine
Homeಆರೋಗ್ಯಐಟಿ ಉದ್ಯೋಗಿಗಳಲ್ಲಿ ಹೆಚ್ಚಾಗುತ್ತಿರುವ ಬಂಜೆತನ: ಅತಿಯಾದ ಕಂಪ್ಯೂಟರ್‌, ಮೊಬೈಲ್‌ ಬಳಕೆಯಿಂದ ಹಾರ್ಮೋನ್ ವ್ಯತ್ಯಾಸ

ಐಟಿ ಉದ್ಯೋಗಿಗಳಲ್ಲಿ ಹೆಚ್ಚಾಗುತ್ತಿರುವ ಬಂಜೆತನ: ಅತಿಯಾದ ಕಂಪ್ಯೂಟರ್‌, ಮೊಬೈಲ್‌ ಬಳಕೆಯಿಂದ ಹಾರ್ಮೋನ್ ವ್ಯತ್ಯಾಸ

ಬೆಂಗಳೂರು: ಇಂದಿನ ಆಧುನಿಕ ಡಿಜಿಟಲ್ ಯುಗದಲ್ಲಿ ಸಾಫ್ಟ್‌ ವೇರ್ ಹಾಗೂ ಮಾಹಿತಿ ತಂತ್ರಜ್ಞಾನ (ಐಟಿ) ವಲಯದ ಉದ್ಯೋಗಿಗಳನ್ನು ಒಂದು ಅಗೋಚರ ಗಂಭೀರ ಆರೋಗ್ಯ ಸಮಸ್ಯೆ ಕಾಡತೊಡಗಿದೆ.

ಕಂಪ್ಯೂಟರ್, ಲ್ಯಾಪ್‌ ಟಾಪ್ ಹಾಗೂ ಸ್ಮಾರ್ಟ್‌ ಫೋನ್‌ ಗಳ ಅತಿಯಾದ ಬಳಕೆ ಐಟಿ ಉದ್ಯೋಗಿಗಳಲ್ಲಿ ಸಂತಾನಹೀನತೆ ಅಥವಾ ಬಂಜೆತನದ ಸಮಸ್ಯೆಯನ್ನು ತಂದೊಡ್ಡುತ್ತಿರುವುದು ಇತ್ತೀಚಿನ ಅಧ್ಯಯನಗಳಿಂದ ಬೆಳಕಿಗೆ ಬಂದಿದೆ.

ಈಗ ಬಹುತೇಕ ಐಟಿ ಉದ್ಯೋಗಿಗಳು ತಮ್ಮ ಕೆಲಸದ ಅವಧಿಯ ಬಹುಪಾಲು ಸಮಯವನ್ನು ಕಂಪ್ಯೂಟರ್ ಪರದೆಯ ಮುಂಭಾಗದಲ್ಲೇ ಕಳೆಯಬೇಕಾದ ಅನಿವಾರ್ಯತೆ ಇದೆ. ಕೇವಲ ಕಚೇರಿಯ ಅವಧಿಯಲ್ಲೇ ಇವರ ಸ್ಕ್ರೀನ್ ಸಮಯ ಸರಾಸರಿ 6.5 ಗಂಟೆಗಳನ್ನೂ ಮೀರುತ್ತಿದೆ.

ಕಚೇರಿ ಕೆಲಸ ಮುಗಿದ ನಂತರವೂ ವೈಯಕ್ತಿಕ ಮೊಬೈಲ್, ಟ್ಯಾಬ್ಲೆಟ್ ಹಾಗೂ ಟಿವಿ ವೀಕ್ಷಣೆ ಸೇರಿ, ಇವರ ದೈನಂದಿನ ಒಟ್ಟಾರೆ ಸ್ಕ್ರೀನ್ ಸಮಯ ಅಪಾಯಕಾರಿ ಮಟ್ಟವನ್ನು ತಲುಪುತ್ತಿದೆ. ತಂತ್ರಜ್ಞಾನ, ಉತ್ಪಾದಕತೆ ಮತ್ತು ನಾವೀನ್ಯತೆಯೇ ಪ್ರಮುಖ ಆಧಾರವಾಗಿರುವ ಈ ಉದ್ಯಮದಲ್ಲಿ ಡಿಜಿಟಲ್ ಪರದೆಗಳು ಅನಿವಾರ್ಯವಾಗಿದ್ದರೂ, ಇವುಗಳ ಮೇಲಿನ ಅತಿಯಾದ ಅವಲಂಬನೆ ಯುವ ಪೀಳಿಗೆಯ ವೈವಾಹಿಕ ಜೀವನದ ನೆಮ್ಮದಿಯನ್ನೇ ಕೆಡಿಸುತ್ತಿದೆ.

ಅತಿಯಾದ ಸ್ಕ್ರೀನ್ ಸಮಯವು ಪುರುಷರು ಮತ್ತು ಮಹಿಳೆಯರಿಬ್ಬರ ಮೇಲೂ ವಿಭಿನ್ನ ಜೈವಿಕ ಪ್ರಕ್ರಿಯೆಗಳ ಮೂಲಕ ತೀವ್ರ ಪರಿಣಾಮ ಬೀರುತ್ತಿದೆ. ಡಿಜಿಟಲ್ ಸಾಧನಗಳಿಂದ ಹೊರಹೊಮ್ಮುವ ಬ್ಲೂ ಲೈಟ್ ದೇಹದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ವಿಶೇಷವಾಗಿ ತಡರಾತ್ರಿಯವರೆಗೂ ಮೊಬೈಲ್ ಅಥವಾ ಲ್ಯಾಪ್‌ ಟಾಪ್ ಬಳಸುವುದರಿಂದ, ಅದು ದೇಹದ ನೈಸರ್ಗಿಕ ಜೈವಿಕ ಗಡಿಯಾರದ ಸಮತೋಲನವನ್ನು ಸಂಪೂರ್ಣವಾಗಿ ತಪ್ಪಿಸುತ್ತದೆ.

ಇದರಿಂದಾಗಿ ಗಾಢ ನಿದ್ರೆಗೆ ಜಾರಲು ನೆರವಾಗುವ ಮೆಲಟೋನಿನ್ ಹಾರ್ಮೋನ್ ಉತ್ಪಾದನೆ ದೇಹದಲ್ಲಿ ಕುಂಠಿತಗೊಳ್ಳುತ್ತದೆ. ಈ ಪ್ರಕ್ರಿಯೆಯು ನೇರವಾಗಿ ಸ್ತ್ರೀ-ಪುರುಷರ ಸಂತಾನೋತ್ಪತ್ತಿ ಹಾರ್ಮೋನ್‌ ಗಳ ಏರುಪೇರಿಗೆ ಕಾರಣವಾಗುತ್ತಿದ್ದು, ಯುವ ಉದ್ಯೋಗಿಗಳಲ್ಲಿ ಬಂಜೆತನದ ಸಮಸ್ಯೆಯನ್ನು ತೀವ್ರಗೊಳಿಸುತ್ತಿದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.

ಸಂಶೋಧನೆಗಳ ಪ್ರಕಾರ, ರಾತ್ರಿಯ ಸಮಯದಲ್ಲಿ ಸ್ಮಾರ್ಟ್‌ ಫೋನ್ ಮತ್ತು ಟ್ಯಾಬ್ಲೆಟ್‌ ಗಳ ಅತಿಯಾದ ಬಳಕೆ ಪುರುಷರಲ್ಲಿ ವೀರ್ಯಾಣುಗಳ ಸಾಂದ್ರತೆ ಮತ್ತು ಚಲನಶೀಲತೆಯನ್ನು ಕುಂಠಿತಗೊಳಿಸುತ್ತದೆ. ಅದೇ ಸಮಯದಲ್ಲಿ, ಉತ್ತಮ ನಿದ್ರೆಯು ಆರೋಗ್ಯಕರ ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ಪೂರಕವಾಗಿದೆ. ದೀರ್ಘಕಾಲದವರೆಗೆ ಲ್ಯಾಪ್‌ ಟಾಪ್‌ ಗಳನ್ನು ನೇರವಾಗಿ ಮಡಿಲ ಮೇಲೆ ಇಟ್ಟುಕೊಂಡು ಕೆಲಸ ಮಾಡುವುದರಿಂದ ವೃಷಣಗಳ ತಾಪಮಾನ ಹೆಚ್ಚಾಗುತ್ತದೆ, ಇದು ವೀರ್ಯಾಣುಗಳ ಉತ್ಪಾದನೆಯ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಇದರೊಂದಿಗೆ ಶಿಫ್ಟ್ ಆಧಾರಿತ ಕೆಲಸಗಳು, ಅನಿಯಮಿತ ದಿನಚರಿ ಮತ್ತು ನಿದ್ರಾಹೀನತೆಯು ಈ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿ, ಸ್ತ್ರೀ-ಪುರುಷರಿಬ್ಬರಲ್ಲೂ ಸಂತಾನೋತ್ಪತ್ತಿ ಚಕ್ರದ ಏರುಪೇರಿಗೆ ಕಾರಣವಾಗುತ್ತದೆ.

ಇದರ ಜೊತೆಗೆ, ಐಟಿ ಉದ್ಯೋಗಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ದೀರ್ಘಾವಧಿಯ ಜಡ ಜೀವನಶೈಲಿಯು ದೇಹದ ಚಯಾಪಚಯ ಕ್ರಿಯೆ ಮತ್ತು ಹಾರ್ಮೋನ್‌ ಗಳ ನಿಯಂತ್ರಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ದೀರ್ಘಕಾಲದವರೆಗೆ ಒಂದೇ ಕಡೆ ಕುಳಿತು ಕೆಲಸ ಮಾಡುವುದು ಬಂಜೆತನದ ಅಪಾಯವನ್ನು ಹೆಚ್ಚಿಸುತ್ತದೆ, ವಿಶೇಷವಾಗಿ ದೈಹಿಕ ಚಟುವಟಿಕೆಗಳು ತೀರಾ ಕಡಿಮೆ ಇರುವ ಮಹಿಳೆಯರಲ್ಲಿ ಈ ಅಪಾಯ ಹೆಚ್ಚು ಎಂದು ಸಂಶೋಧನೆಗಳು ಎಚ್ಚರಿಸಿವೆ.

ಹೆಚ್ಚಿನ ಒತ್ತಡವಿರುವ ಇಂದಿನ ಕೆಲಸದ ವಾತಾವರಣವು ದೇಹದಲ್ಲಿ ಕಾರ್ಟಿಸಾಲ್ (ಮಾನಸಿಕ ಒತ್ತಡದ ಹಾರ್ಮೋನ್) ಮಟ್ಟವನ್ನು ಹೆಚ್ಚಿಸುತ್ತದೆ. ಇದು ಸಹಜ ಹಾರ್ಮೋನ್‌ ಗಳ ಉತ್ಪಾದನೆಗೆ ಅಡ್ಡಿಪಡಿಸಿ, ಹತ್ತಾರು ಆರೋಗ್ಯ ಸವಾಲುಗಳಿಗೆ ದಾರಿ ಮಾಡಿಕೊಡುತ್ತದೆ. ಇನ್ನು ಕಿರಿದಾದ ಕಚೇರಿ ಸ್ಥಳಗಳು ಮತ್ತು ವರ್ಕ್ ಫ್ರಮ್ ಹೋಮ್ ಸಂಸ್ಕೃತಿಯು ದೈಹಿಕ ನಿಷ್ಕ್ರಿಯತೆಯನ್ನು ಮತ್ತಷ್ಟು ಹೆಚ್ಚಿಸುತ್ತಿರುವುದಲ್ಲದೆ, ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನದ ನಡುವಿನ ಗೆರೆಯನ್ನು ಅಳಿಸಿಹಾಕುತ್ತಿದೆ.

ಜೀವನಶೈಲಿಯ ದುಷ್ಪರಿಣಾಮಗಳ ಸರಣಿ

ಅತಿಯಾದ ಸ್ಕ್ರೀನ್ ಸಮಯವು ಕೇವಲ ದೈಹಿಕ ಆರೋಗ್ಯಕ್ಕೆ ಮಾತ್ರ ಸೀಮಿತವಾಗಿರದೆ, ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲಿನ ದುಷ್ಪರಿಣಾಮವನ್ನು ತೀವ್ರಗೊಳಿಸುವ ಇತರ ನಡವಳಿಕೆಗಳಿಗೂ ಕಾರಣವಾಗುತ್ತದೆ. ದೀರ್ಘಾವಧಿಯ ಕೆಲಸದ ಸಮಯ ಮತ್ತು ಸದಾ ಡಿಜಿಟಲ್ ಸಂಪರ್ಕದಲ್ಲಿರುವುದು ದಂಪತಿಗಳು ಪರಸ್ಪರ ಕಳೆಯುವ ಸಮಯವನ್ನು ಕಸಿದುಕೊಳ್ಳುತ್ತದೆ. ಇದು ಅವರಲ್ಲಿ ದೈಹಿಕ ನಿಕಟತೆ ಕಡಿಮೆಯಾಗಲು ಕಾರಣವಾದರೆ, ಕೆಲಸದ ದೀರ್ಘಕಾಲದ ಒತ್ತಡವು ವೈಯಕ್ತಿಕ ಸಂಬಂಧಗಳ ಮೇಲೂ ಪರಿಣಾಮ ಬೀರಿ, ಪರಸ್ಪರ ಸಂವಹನ ಮತ್ತು ಭಾವನಾತ್ಮಕ ಬಾಂಧವ್ಯವನ್ನು ಕುಂಠಿತಗೊಳಿಸುತ್ತದೆ.

ಉದ್ಯೋಗದ ಸವಾಲುಗಳು ಮತ್ತು ವೃತ್ತಿಜೀವನದ ಮಹತ್ವಾಕಾಂಕ್ಷೆಯಿಂದಾಗಿ, ವಿಶೇಷವಾಗಿ ನಗರ ಪ್ರದೇಶದ ವೃತ್ತಿಪರರಲ್ಲಿ ತಡವಾಗಿ ಮದುವೆಯಾಗುವುದು ಮತ್ತು ತಡವಾಗಿ ಮಕ್ಕಳನ್ನು ಹೆರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರೊಂದಿಗೆ, ಜಡ ಜೀವನಶೈಲಿಯು ಅನಾರೋಗ್ಯಕರ ಆಹಾರ ಪದ್ಧತಿ, ಸಂಸ್ಕರಿಸಿದ ಆಹಾರಗಳ ಮೇಲಿನ ಅತಿಯಾದ ಅವಲಂಬನೆ ಹಾಗೂ ಧೂಮಪಾನ ಮತ್ತು ಮದ್ಯಪಾನದಂತಹ ದುರಭ್ಯಾಸಗಳಿಗೆ ಪ್ರೇರೇಪಿಸುತ್ತದೆ. ಈ ಎಲ್ಲಾ ಅಂಶಗಳು ಒಟ್ಟಾಗಿ ಸೇರಿ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಭಾರಿ ಪೆಟ್ಟು ನೀಡುತ್ತವೆ.

ಐಟಿ ವೃತ್ತಿಪರರಲ್ಲೇ ಈ ಅಪಾಯ ಹೆಚ್ಚಿರುವುದಕ್ಕೆ ಕಾರಣಗಳೇನು?

ಈ ಎಲ್ಲಾ ಅಪಾಯಗಳು ಒಂದೇ ಕಡೆ ಒಟ್ಟಾಗುವುದರಿಂದ ಐಟಿ ವೃತ್ತಿಪರರು ಇದಕ್ಕೆ ಸುಲಭವಾಗಿ ತುತ್ತಾಗುತ್ತಾರೆ. ಇವರ ಉದ್ಯೋಗದ ಸ್ವರೂಪವೇ ಜಡ ವಾತಾವರಣದಲ್ಲಿ ದೀರ್ಘಕಾಲದವರೆಗೆ ಸ್ಕ್ರೀನ್ ಮುಂದೆ ಕುಳಿತುಕೊಳ್ಳುವುದನ್ನು ಬಯಸುತ್ತದೆ. ಇದು ದೈಹಿಕ ಚಟುವಟಿಕೆಯ ಕೊರತೆ ಮತ್ತು ಡಿಜಿಟಲ್ ಸಾಧನಗಳ ಮೇಲಿನ ಅತಿಯಾದ ಅವಲಂಬನೆಯ ನಿರಂತರ ಚಕ್ರವನ್ನು ಸೃಷ್ಟಿಸುತ್ತದೆ. ಇದರ ಜೊತೆಗೆ, ನಗರ ಜೀವನಶೈಲಿ ಮತ್ತು ವೃತ್ತಿಜೀವನಕ್ಕೆ ಹೆಚ್ಚಿನ ಆದ್ಯತೆ ನೀಡುವ ಕಾರಣದಿಂದಾಗಿ ಕುಟುಂಬ ಯೋಜನೆಯನ್ನು ಮುಂದೂಡುವುದು, ಇವರನ್ನು ಇತರೆ ಉದ್ಯೋಗಿಗಳಿಗೆ ಹೋಲಿಸಿದರೆ ಹೆಚ್ಚಿನ ಅಪಾಯದ ಅಂಚಿಗೆ ತಳ್ಳುತ್ತದೆ.
ಆದಾಗ್ಯೂ, ಸಮಾಧಾನಕರ ಸಂಗತಿಯೆಂದರೆ ನಮ್ಮ ದೈನಂದಿನ ಜೀವನಶೈಲಿಯಲ್ಲಿ ಕೆಲವು ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಈ ಬಹುತೇಕ ಅಪಾಯಗಳನ್ನು ಸುಲಭವಾಗಿ ತಡೆಗಟ್ಟಬಹುದಾಗಿದೆ:

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments