Home ವಿದೇಶ ಕಜಕಿಸ್ತಾನದಲ್ಲಿ ಭೀಕರ ವಿಮಾನ ಪತನ: 37 ಮಂದಿ ಸಾವು, 22 ಪ್ರಯಾಣಿಕರ ರಕ್ಷಣೆ

ಕಜಕಿಸ್ತಾನದಲ್ಲಿ ಭೀಕರ ವಿಮಾನ ಪತನ: 37 ಮಂದಿ ಸಾವು, 22 ಪ್ರಯಾಣಿಕರ ರಕ್ಷಣೆ

77 ಪ್ರಯಾಣಿಕರಿದ್ದ ಪ್ರಯಾಣಿಕ ವಿಮಾನ ಪತನಗೊಂಡ ಪರಿಣಾಮ ಸ್ಫೋಟ ಸಂಭವಿಸಿದ್ದು, 37 ಮಂದಿ ಮೃತಪಟ್ಟಿ ಘನೆ ಕಜಕಿತಸ್ತಾನದಲ್ಲಿ ಸಂಭವಿಸಿದೆ.

by Editor
0 comments
kazakistan

77 ಪ್ರಯಾಣಿಕರಿದ್ದ ಪ್ರಯಾಣಿಕ ವಿಮಾನ ಪತನಗೊಂಡ ಪರಿಣಾಮ ಸ್ಫೋಟ ಸಂಭವಿಸಿದ್ದು, 37 ಮಂದಿ ಮೃತಪಟ್ಟಿ ಘನೆ ಕಜಕಿತಸ್ತಾನದಲ್ಲಿ ಸಂಭವಿಸಿದೆ.

ಅಜರ್ ಬೈಜಾನ್ ಏರ್ ಲೈನ್ಸ್ ಬಕು ನಗರದಿಂದ ರಷ್ಯಾದ ಗ್ರೋಜ್ನಿ ನಗರಕ್ಕೆ ಹೊರಟ್ಟಿತ್ತು. ಆದರೆ ಕಜಕಿಸ್ತಾನದ ಅಕ್ತಾವು ಬಳಿ ಪೈಲೆಟ್ ನಿಯಂತ್ರಣ ಕಳೆದುಕೊಂಡ ವಿಮಾನ ಪತನಗೊಂಡಿದೆ. ವಿಮಾನಪತನ ಪತನಗೊಂಡ ಬೆನ್ನಲ್ಲೇ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ.

ಕೊನೆಯ ಕ್ಷಣದಲ್ಲಿ ಮಾರ್ಗ ಬದಲಾವಣೆ ಇನ್ನು ಮೂಲಗಳ ಪ್ರಕಾರ ದಟ್ಟ ಮಂಜಿನ ಕಾರಣ ವಿಮಾನದ ಮಾರ್ಗ ಕೊನೆಯ ಕ್ಷಣದಲ್ಲಿ ಬದಲಾಯಿಸಲಾಗಿತ್ತು. ರಷ್ಯಾದ ಗ್ರೋಜ್ನಿಗೆ ಹೊರಟಿದ್ದ ವಿಮಾನಕ್ಕೆ ಮಾರ್ಗ ಬದಲಾವಣೆ ಸೂಚನೆ ನೀಡಲಾಗಿತ್ತು. ಆದರೆ ಅಕ್ತಾವು ಬಳಿ ವಿಮಾನ ಆಗಮಸದಲ್ಲೇ ಕೆಲ ಸುತ್ತು ಹೊಡದಿದೆ. ವಿಮಾನ ಲ್ಯಾಂಡಿಂಗ್ ಮಾಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಲ್ಯಾಂಡಿಂಗ್ ಸಾಧ್ಯವಾಗಿಲ್ಲ. ನೇರವಾಗಿ ವಿಮಾನ ನೆಲಕ್ಕೆ ಅಪ್ಪಳಿಸಿದೆ. ಇದರ ಪರಿಣಾಮ ವಿಮಾನ ಪತನಗೊಂಡಿದೆ.

ವಿಮಾನ ಅಪಘಾತದಲ್ಲಿ ಅಚ್ಚರಿ ರೀತಿಯಲ್ಲಿ ಹಲವು ಪ್ರಯಾಣಿಕರು ಪಾರಾಗಿದ್ದು ಸುಮಾರು 25 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ವಿಮಾನ ಪತನವಾದ ಕೂಡಲೇ ಸ್ಥಳೀಯರು ವಿಮಾನದೊಳಗಿದ್ದ 14 ಪ್ರಯಾಣಿಕರನ್ನು ಹೊರಗೆಳೆದಿದ್ದು, ಬಳಿಕ ಇತರರನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ. ಈ ಪೈಕಿ ಐದು ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
7ನೇ ಮದುವೆ ಆಗುವಾಗ ಸಿಕ್ಕಿಬಿದ್ದ ಚಾಲಕಿ ಮಹಿಳೆಯರ ಗ್ಯಾಂಗ್! ಕಾಲ್ತುಳಿತದಲ್ಲಿ ಮೃತ ಕುಟಂಬಕ್ಕೆ 2 ಕೋಟಿ ರೂ. ಪರಿಹಾರ: ಅಲ್ಲು ಅರ್ಜುನ್ ತಂದೆ ಘೋಷಣೆ ಕಜಕಿಸ್ತಾನದಲ್ಲಿ ಭೀಕರ ವಿಮಾನ ಪತನ: 37 ಮಂದಿ ಸಾವು, 22 ಪ್ರಯಾಣಿಕರ ರಕ್ಷಣೆ ಹಾವೇರಿಯಲ್ಲಿ ಭೀಕರ ಕಾರು ಅಪಘಾತ: ಬೆಂಗಳೂರಿನ ಒಂದೇ ಕುಟುಂಬದ ನಾಲ್ವರ ದುರ್ಮರಣ ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ ಯಶಸ್ವಿ: 6 ಗಂಟೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಹೇಳಿದ್ದೇನು? ಆಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ಸರಣಿ ವಾಯುದಾಳಿ: 15 ಮಂದಿ ಸಾವು ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ: ಸಿಟಿ ರವಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಸವಾಲು ಸಿಟಿ ರವಿ ನಿಂದನೆ ಪ್ರಕರಣ ಸಿಐಡಿ ತನಿಖೆ: ಗೃಹ ಸಚಿವ ಜಿ.ಪರಮೇಶ್ವರ್ ರಿಜಿಸ್ಟರ್ ಜೊತೆ ಪತ್ನಿ ಅನೈತಿಕ ಸಂಬಂಧಕ್ಕೆ ಬೇಸತ್ತು ಗಂಡ ಆತ್ಮಹತ್ಯೆ: ಕುಟುಂಬಸ್ಥರ ಆರೋಪ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳೆ ಆಸ್ಪತ್ರೆಗೆ ದಾಖಲು